Wednesday, 9 February 2022

ಎಸ್ಸೆಸ್ಸಫ್ ಕುಕ್ಕಾಜೆ ಶಾಖೆ: ನವ ಸಾರಥಿಗಳ ಆಯ್ಕೆ

 

ಎಸ್ಸೆಸ್ಸಫ್ ಕುಕ್ಕಾಜೆ ಶಾಖೆ: ನವ ಸಾರಥಿಗಳ ಆಯ್ಕೆ

   ಎಸ್ಸೆಸ್ಸೆಫ್ ಕುಕ್ಕಾಜೆ ಯೂನಿಟ್ ನ ವಾರ್ಷಿಕ ಮಹಾಸಭೆಯು ದಿನಾಂಕ 6-2-2022 ಆದಿತ್ಯವಾರ ರಾತ್ರಿ 8 ಗಂಟೆಗೆ ಸಿರಾಜುಲ್ ಹುದಾ ಮದರಸ ಸಭಾಂಗಣದಲ್ಲಿ ಅಧ್ಯಕ್ಷರಾದ ನೌಷಾದ್ ಹಿಮಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಖತೀಬರೂ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಸಮಿತಿ ಕಾರ್ಯದರ್ಶಿಗಳೂ ಆದ ಎ.ಎಂ.ಫೈಝಲ್ ಝುಹ್‌ರಿ ದುಆಃ ನೆರವೇರಿಸಿ, ನಂತರ ಸಂಘಟನಾ ತರಗತಿ ನಡೆಸಿದರು. ಸಂಘಟನೆಯ ಕಾರ್ಯಾಚರಣೆಯ ಅವಲೋಕನದ ಬಳಿಕ ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

 ಅಧ್ಯಕ್ಷರಾಗಿ ಆದಂ ಕುಂಞಿ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದೀನ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ತ್ವಾಹ ಕೆ.ಎಂ ಕುಕ್ಕಾಜೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಫಾಯಿಝ್, ವಿಸ್ಡಂ ಕಾರ್ಯದರ್ಶಿ ನಾಸಿರ್, ದಅವಾ ಕಾರ್ಯದರ್ಶಿ ಫಯಾಝ್, ರೈಂಬೋ ಕಾರ್ಯದರ್ಶಿ ನೌಷಾದ್ ಹಿಮಮಿ, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿ ರಿಯಾಝ್, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ಶಫೀಕ್ ಕುಕ್ಕಾಜೆ, ಪಬ್ಲಿಕೇಶನ್ ಕಾರ್ಯದರ್ಶಿ ಹಂಝ ಕೆ.ಎಂ, ಮೀಡಿಯಾ ಕಾರ್ಯದರ್ಶಿ ಇರ್ಷಾದ್ ಕುಕ್ಕಾಜೆ ಮುಂತಾದವರನ್ನೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೈದರ್, ಶಬೀರ್, ರಶೀದ್, ಉಮ್ಮರ್ ಅಣಿಲೆ ಮುಂತಾದವರನ್ನೂ ಆಯ್ಕೆ ಮಾಡಲಾಯಿತು.

    ಶಫೀಕ್ ಕುಕ್ಕಾಜೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ಶಂಸುದ್ದೀನ್ ಕುಕ್ಕಾಜೆ ಕೃತಜ್ಞತೆ ಸಲ್ಲಿಸಿದರು. ಕೊನೆಯಲ್ಲಿ ಮೂರು ಸ್ವಲಾತ್ ನೊಂದಿಗೆ ವಾರ್ಷಿಕ ಮಹಾ ಸಭೆಯು ಮುಕ್ತಾಯಗೊಂಡಿತು.

ನೂತನ ಅಧ್ಯಕ್ಷರಾಗಿ ಆದಂ ಕುಂಞಿ, ಕಾರ್ಯದರ್ಶಿಯಾಗಿ  ಶಂಸುದ್ದೀನ್ ಕುಕ್ಕಾಜೆ ಮತ್ತು ಕೋಶಾಧಿಕಾರಿಯಾಗಿ ತ್ವಾಹ ಕೆ.ಎಂ ಕುಕ್ಕಾಜೆ ಆಯ್ಕೆSHARE THIS

Author:

0 التعليقات: