ಭಯೋತ್ಪಾದಕ ಸಂಘಟನೆಗೆ ಮಾಹಿತಿ ಹಂಚಿದ ಆರೋಪ: ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಎನ್ಐಎ ವಶಕ್ಕೆ
ಹೊಸದಿಲ್ಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತೈಯಿಬಾಗೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ಎನ್ಐಎ ಮಾಜಿ ತನಿಖಾಧಿಕಾರಿ, ಹಿರಿಯ ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಅವರನ್ನು ಎನ್ಐಎ (NIA) ಬಂಧಿಸಿದೆ ಎಂದು ndtv.com ವರದಿ ಮಾಡಿದೆ.
ಎನ್ಐಎಯಲ್ಲಿ ತನಿಖಾಧಿಕಾರಿಯಾಗಿದ್ದ ಅವಧಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಡಿ ನೇಗಿ(AD Negi) ಅವರು ಜಮ್ಮು ಮತ್ತು ಕಾಶ್ಮೀರದ ತಳ ಮಟ್ಟದ ಲಷ್ಕರ್ ಕಾರ್ಯಕರ್ತರೊಡನೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
ಎನ್ಐಎದಲ್ಲಿ ನಿಯೋಜನೆಯಲ್ಲಿದ್ದ ನೇಗಿ ಅವರು ಹಾಲಿ ನಂತರ ಶಿಮ್ಲಾ ಎಸ್ಪಿ ಆಗಿದ್ದಾರೆ.
0 التعليقات: