ಅಮೆರಿಕ ಚರ್ಚ್ ನಲ್ಲಿ ತನ್ನ ಮೂರು ಮಕ್ಕಳನ್ನು ಸಾಯಿಸಿ ಸ್ವತಃ ಗುಂಡಿಕ್ಕಿಕೊಂಡ ತಂದೆ
ಸ್ಯಾಕ್ರಮೆಂಟೊ: ಅಮೆರಿಕದ ಚರ್ಚ್ನಲ್ಲಿ ತಂದೆಯೊಬ್ಬ ಸೋಮವಾರ ತನ್ನ ಮೂವರು ಮಕ್ಕಳನ್ನು ಗುಂಡಿಕ್ಕಿ ಸಾಯಿಸಿ, ಬಳಿಕ ತಾನು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ. ಆದರೆ ಆ ವ್ಯಕ್ತಿಯ ಸಾವಿಗೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.
ಸಾವನ್ನಪ್ಪಿದ ಎಲ್ಲಾ ಮೂರು ಮಕ್ಕಳು 15 ವರ್ಷದೊಳಗಿನವರು ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಸಾರ್ಜೆಂಟ್ ರಾಡ್ ಗ್ರಾಸ್ಮನ್ ಸುದ್ದಿಗಾರರಿಗೆ ತಿಳಿಸಿದರು.
"ಇಂದು ಮಧ್ಯಾಹ್ನ 5:07 ಕ್ಕೆ, ಚರ್ಚ್ ಒಳಗೆ ಗುಂಡಿನ ಶಬ್ಧ ಕೇಳುತ್ತಿದೆ ಎಂದು ನಮಗೆ ಕರೆ ಬಂದಿತು. ತಂದೆಯೊಬ್ಬ 15 ವರ್ಷದೊಳಗಿನ ತನ್ನ ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ಬಳಿಕ ತಾನು ಗುಂಡಿಕ್ಕಿಕೊಂಡು ಸಾವನ್ನಪ್ಪಿರುವುದನ್ನು ಪತ್ತೆ ಹಚ್ಚಿದ್ದೇವೆ" ಎಂದು ಗ್ರಾಸ್ಮನ್ ಹೇಳಿದರು.
0 التعليقات: