ವಿವಾದಾತ್ಮಕ ತೀರ್ಪಿನಿಂದ ಗಮನ ಸೆಳೆದಿದ್ದ ಬಾಂಬೆ ಹೈಕೋರ್ಟ್ನ ನ್ಯಾಯಾಧೀಶೆ ಪುಷ್ಪಾ ಗನೆಡಿವಾಲಾ ರಾಜೀನಾಮೆ
ಹೊಸದಿಲ್ಲಿ: ಎರಡು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪಿನಿಂದ ಗಮನ ಸೆಳೆದಿದ್ದ ಬಾಂಬೆ ಹೈಕೋರ್ಟ್ನ ನ್ಯಾಯಾಧೀಶೆ ಪುಷ್ಪಾ ಗನೆಡಿವಾಲಾ ಅವರು ಫೆಬ್ರವರಿ 10, ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಫೆಬ್ರವರಿ 12 ರಂದು ಅವರ ಅಧಿಕಾರಾವಧಿ ಮುಗಿಯುವ ಎರಡು ದಿನಗಳ ಮೊದಲು ರಾಜೀನಾಮೆ ನೀಡಿದ್ದಾರೆ ಎಂದು Bar and Bench ವರದಿ ಮಾಡಿದೆ.
ಹೆಚ್ಚುವರಿ ನ್ಯಾಯಾಧೀಶೆ ಜಸ್ಟಿಸ್ ಗನೆಡಿವಾಲಾ ಅವರು ಎರಡು ವಿವಾದಾತ್ಮಕ ತೀರ್ಪುಗಳನ್ನು ನೀಡಿದ ನಂತರ ಬಾಂಬೆ ಹೈಕೋರ್ಟ್ನ ಖಾಯಂ ನ್ಯಾಯಾಧೀಶರಾಗಿ ನೇಮಕ ಮಾಡುವ ಪ್ರಸ್ತಾವನೆಗೆ ತನ್ನ ಅನುಮೋದನೆಯನ್ನು ಜನವರಿ 2021 ರಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ ಹಿಂತೆಗೆದುಕೊಂಡಿತ್ತು.
ಬದಲಾಗಿ ಅವರಿಗೆ ಬಾಂಬೆ ಹೈಕೋರ್ಟ್ನಲ್ಲಿ ಒಂದು ವರ್ಷದ ಹೆಚ್ಚುವರಿ ನ್ಯಾಯಾಧೀಶರಾಗಿ ಹೊಸ ಅವಧಿಯನ್ನು ನೀಡಲಾಯಿತು. ಅವರ ಅಧಿಕಾರಾವಧಿ ಮುಗಿದ ನಂತರ ನ್ಯಾಯಮೂರ್ತಿ ಗನೆಡಿವಾಲಾ ಅವರನ್ನು ಜಿಲ್ಲಾ ನ್ಯಾಯಾಂಗಕ್ಕೆ ಮರಳಿ ಕಳುಹಿಸಲಾಗುತ್ತಿತ್ತು.
ಗನೆಡಿವಾಲಾ 19 ಜನವರಿ 2021 ರಂದು ನೀಡಿದ್ದ ವಿವಾದಾತ್ಮಕ ತೀರ್ಪುಗಳನ್ನು ಬಳಿಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
0 التعليقات: