ಎಚ್ಚರ,ಉತ್ತರಪ್ರದೇಶವು ಕಾಶ್ಮೀರ,ಕೇರಳ, ಬಂಗಾಳ ಆಗಬಹುದು: ಮತದಾನಕ್ಕೆ ಮೊದಲು ಆದಿತ್ಯನಾಥ್ ಹೇಳಿಕೆ
ಹೊಸದಿಲ್ಲಿ: ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶ ರಾಜ್ಯವು ಕಾಶ್ಮೀರ, ಕೇರಳ ಅಥವಾ ಬಂಗಾಳ ಆಗಬಹುದು ಎಂದು ರಾಜ್ಯದಲ್ಲಿ ಮೊದಲ ಸುತ್ತಿನ ಚುನಾವಣೆಗೆ ಗಂಟೆಗಳ ಮೊದಲು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ. ಈ ಮೂಲಕ ಬಿಜೆಪಿಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶ ಬಿಜೆಪಿಯು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ “ ಬಿಜೆಪಿಗೆ ಮತ ಹಾಕಿದರೆ "ಭಯಮುಕ್ತ ಜೀವನ ಗ್ಯಾರಂಟಿ" ಎಂದು ಆದಿತ್ಯನಾಥ್ ಹೇಳಿದ್ದಾರೆ.
11 ತಿಂಗಳ ರೈತರ ಪ್ರತಿಭಟನೆಯ ಕೇಂದ್ರವಾಗಿರುವ ರಾಜ್ಯದ ಪಶ್ಚಿಮ ಭಾಗದ 58 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
"ನನ್ನ ಮನದಾಳದಲ್ಲಿರುವ ಒಂದು ಸಂಗತಿಯನ್ನು ನಿಮಗೆ ಹೇಳಬೇಕು. ಈ ಐದು ವರ್ಷಗಳಲ್ಲಿ ಬಹಳಷ್ಟು ಅದ್ಭುತಗಳು ನಡೆದಿವೆ. ಎಚ್ಚರ! ತಪ್ಪಿದರೆ ಈ ಐದು ವರ್ಷಗಳ ದುಡಿಮೆ ಹಾಳಾಗುತ್ತದೆ. ಉತ್ತರಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ'' ಎಂದು ಆದಿತ್ಯನಾಥ್ ವಿಡಿಯೋದಲ್ಲಿ ಹೇಳಿದ್ದಾರೆ.
"ಐದು ವರ್ಷಗಳ ನನ್ನ ಶ್ರಮಕ್ಕೆ ನಿಮ್ಮ ಮತವೇ ವರದಾನವಾಗಿದೆ.ನಿಮ್ಮ ಮತವೂ ನಿಮ್ಮ ಭಯಮುಕ್ತ ಬದುಕಿಗೆ ಖಾತ್ರಿಯಾಗಲಿದೆ'' ಎಂದು ಮನವಿ ಮಾಡಿದರು
0 التعليقات: