ರಷ್ಯನ್ ಬ್ಯಾಂಕ್ಗಳ ವಿರುದ್ಧವೂ ಅಮೆರಿಕ, ಇಯು, ಬ್ರಿಟನ್ ನಿರ್ಬಂಧ
ವಾಷಿಂಗ್ಟನ್: ಆಯ್ದ ರಷ್ಯನ್ ಬ್ಯಾಂಕ್ಗಳನ್ನು ಸ್ವಿಫ್ಟ್ ಜಾಗತಿಕ ಹಣಕಾಸು ಮೆಸೇಜಿಂಗ್ ಸಿಸ್ಟಂನಿಂದ ನಿಷೇಧಿಸಲು ಅಮೆರಿಕ, ಯೂರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ ಶನಿವಾರ ನಿರ್ಧರಿಸಿವೆ. ಉಕ್ರೇನ್ ಮೇಲಿನ ದಾಳಿಗೆ ಪ್ರತೀಕಾರವಾಗಿ ರಷ್ಯಾದ ಕೇಂದ್ರೀಯ ಬ್ಯಾಂಕ್ ಮೇಲೂ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಹೊಸ ಸುತ್ತಿನ ಹಣಕಾಸು ನಿರ್ಬಂಧದ ಅಂಗವಾಗಿ ಈ ನಿಷೇಧ ಹೇರಲಾಗಿದೆ. ಈ ಯುದ್ಧದ ಹೊಣೆಯನ್ನು ರಷ್ಯಾ ಹೊರಬೇಕು ಮತ್ತು ಯುದ್ಧವು ಪುಟಿನ್ ಅವರ ಪ್ರಮುಖ ವೈಫಲ್ಯ ಎಂದು ಬಿಂಬಿಸುವ ಸಲುವಾಗಿ ಈ ನಿರ್ಬಂಧಗಳನ್ನು ಹೇರಲಾಗಿದೆ. ಕ್ರೆಮ್ಲಿನ್ ವಶದಲ್ಲಿ ಸುಮಾರು 600 ಕೋಟಿ ಡಾಲರ್ ದಾಸ್ತಾನು ಇರುವ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್ ಮೇಲೆ ನಿರ್ಬಂಧ ಹೇರಲಾಗಿದೆ.
ಶನಿವಾರ ಕೈಗೊಂಡ ಕ್ರಮಗಳಲ್ಲಿ ಮುಖ್ಯವಾಗಿ, ಸ್ವಿಫ್ಟ್ನಿಂದ ಹಲವು ರಷ್ಯನ್ ಬ್ಯಾಂಕ್ಗಳನ್ನು ನಿಷೇಧಿಸುವುದು ಸೇರಿದೆ. ಇದು ಪ್ರತಿದಿನ ದೊಡ್ಡ ಪ್ರಮಾಣದ ವ್ಯವಹಾರ ನಡೆಸುವ 11 ಸಾವಿರ ಬ್ಯಾಂಕ್ಗಳ ಮೇಲೆ ಪರಿಣಾಮ ಬೀರಲಿದೆ. ಜತೆಗೆ ವಿಶ್ವಾದ್ಯಂತ ಇರುವ ಇತರ ಹಣಕಾಸು ಸಂಸ್ಥೆಗಳ ಮೇಲೂ ಪರಿಣಾಮ ಬೀರಲಿದೆ.
ಪೂರ್ವ ಉಕ್ರೇನ್ನ ಪ್ರತ್ಯೇಕತಾವಾದಿ ಪಡೆಗಳಿಗೆ ರಷ್ಯಾ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅಟ್ಲಾಂಟಿಕ್ ಸಾಗರದ ಉಭಯ ಬದಿಯ ಮಿತ್ರದೇಶಗಳು 2014ರಲ್ಲಿ ಸ್ವಿಫ್ಟ್ ನಿಷೇಧ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಆಗ ರಷ್ಯಾ, ಸ್ವಿಫ್ಟ್ನಿಂದ ನಿಷೇಧಿಸವುದು ಯುದ್ಧಕ್ಕೆ ಸಮಯ ಎಂದು ಹೇಳಿತ್ತು. ಬಳಿಕ ಮಿತ್ರರಾಷ್ಟ್ರಗಳು ಈ ನಿರ್ಧಾರ ಕೈಬಿಟ್ಟಿದ್ದವು.
0 التعليقات: