ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್: ನವ ಸಾರಥಿಗಳ ಆಯ್ಕೆ
ನೂತನ ಅಧ್ಯಕ್ಷರಾಗಿ ಬಶೀರ್ ಕಲ್ಲುಮುಟ್ಲು, ಪ್ರ.ಕಾರ್ಯದರ್ಶಿಯಾಗಿ ಮಶೂದ್ ಹಿಮಮಿ ಏಣಾವರ, ಕೋಶಾಧಿಕಾರಿಯಾಗಿ ಅಬ್ದುಲ್ ರಶೀದ್ ಝೈನಿ ಪೆರಾಜೆ ಆಯ್ಕೆ
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ವಾರ್ಷಿಕ ಮಹಾಸಭೆಯು ಫೆ.6 ರಂದು ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಬಿ.ಎ ರವರ ಅಧ್ಯಕ್ಷತೆಯಲ್ಲಿ ಅನ್ಸಾರ್ ಸಭಾ ಭವನದಲ್ಲಿ ನಡೆಯಿತು. ಅಬ್ದುಲ್ ರಶೀದ್ ಝೈನಿ ಉಸ್ತಾದ್ ಪೆರಾಜೆ ದುವಾ ನೆರವೇರಿಸಿ ಸಭೆಯನ್ನು ಧನ್ಯಗೊಳಿಸಿದರು ,ದಕ್ಷಿಣ ಕನ್ನಡ ಜಿಲ್ಲಾ ನಾಯಕರಾದ ಅಬೂಬಕ್ಕರ್ ಸಿದ್ದೀಕ್ ಗೂನಡ್ಕ ಪರಿಶುದ್ಧ ವಚನಗಳಿಂದ ಸಭೆಯನ್ನು ಉದ್ಘಾಟಿಸಿದರು,ಡಿವಿಶನ್ ಅಧ್ಯಕ್ಷರಾದ ಎ.ಎಂ ಫೈಝಲ್ ಝುಹ್ರಿ ಕಲ್ಲುಗುಂಡಿಯವರು ಇಂದಿನ ಯುವಕರು ಮಾದಕ ದ್ರವ್ಯಗಳ ಮತ್ತು ಜೂಜಾಟದ ದಾಸರಾಗಿ ದಾರಿತಪ್ಪಿಸವುದರ ಬಗ್ಗೆ ಅರ್ಥಗರ್ಭಿತವಾದ ಹಿತನುಡಿಗಳನ್ನು ಕಾರ್ಯಕರ್ತರಿಗೆ ಸಮರ್ಪಿಸಿದರು.ಪ್ರ.ಕಾರ್ಯದರ್ಶಿಯಾದ ಅಝೀಝ್ ಮಾಸ್ಟರ್ ಏಣಾವರ ವಾರ್ಷಿಕ ವರದಿಯನ್ನು ವಾಚಿಸಿ, ಕೋಶಾಧಿಕಾರಿಯಾದ ಶರೀಫ್ ಜಯನಗರ ಲೆಕ್ಕಪತ್ರ ಸಭೆಯಲ್ಲಿ ಮಂಡಿಸಿದರು.ವೀಕ್ಸಕರಾಗಿ ಡಿವಿಷನ್ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಖಿ, ಸೆಕ್ಟರ್ ಉಸ್ತುವಾರಿ ಸಿರಾಜುದ್ದೀನ್ ಹಿಮಮಿ ಕುಂಬಕ್ಕೊಡು,ಡಿವಿಷನ್ ನೇತಾರರಾದ ನೌಷಾದ್ ಕೆರೆಮೂಲೆ,ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ,ಶಮೀರ್ ಮೊಗರ್ಪಣೆ, ಕಬೀರ್ ಜತ್ತಿಪ್ಪಲ್ಲ, ಸ್ವಬಾಹ್ ಹಿಮಮಿ ಎಸ್.ವೈ.ಎಸ್ ಗಾಂಧಿನಗರ ಬ್ರಾಂಚ್ ಅಧ್ಯಕ್ಷರ ಸಿದ್ದೀಕ್ ಕಟ್ಟೆಕ್ಕಾರ್ ಹಾಗೂ ಹಲವಾರು ಸುನ್ನಿ ಸಂಘ ನೇತಾರರು ಭಾಗಹಿಸಿ ಮುಂದಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ಬಶೀರ್ ಕಲ್ಲುಮುಟ್ಲು, ಪ್ರ.ಕಾರ್ಯದರ್ಶಿಯಾಗಿ ಮಶೂದ್ ಹಿಮಮಿ ಏಣಾವರ, ಕೋಶಾಧಿಕಾರಿಯಾಗಿ ಅಬ್ದುಲ್ ರಶೀದ್ ಝೈನಿ ಪೆರಾಜೆ, ಕ್ಯೂ.ಡಿ ಕಾರ್ಯದರ್ಶಿ ಜುನೈದ್ ಮೊಗರ್ಪಣೆ, ಸಿ.ಸಿ ಕಾರ್ಯದರ್ಶಿ ಸಿಯಾದ್ ಜಯನಗರ, ದಅವಾ ಕಾರ್ಯದರ್ಶಿ ಸೈಫುದ್ದೀನ್ ಅಶ್ರಫಿ, ರೀಡ್ ಪ್ಲಸ್ ಕಾರ್ಯದರ್ಶಿ ಇರ್ಫಾನ್ ಏಣಾವರ, ಮೀಡಿಯಾ ಕಾರ್ಯದರ್ಶಿ ಸ್ವಾದಿಕ್ ಅರಂಬೂರು, ರೈಂಬೊ ಕಾರ್ಯದರ್ಶಿ ಇಸ್ಹಾಕ್ ಗೊನಡ್ಕ, ಕ್ಯಾಂಪಸ್ ಕಾರ್ಯದರ್ಶಿ ಇಜಾಝ್ ಗೊನಡ್ಕ, ವಿಸ್ಡಮ್ ಕಾರ್ಯದರ್ಶಿ ಜುನೈದ್ ಕಲ್ಲುಗುಂಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝೀಝ್ ಏಣಾವರ, ಸಲೀಕ್ ಕಲ್ಲುಗುಂಡಿ, ಜಾಬಿರ್ ಗೂನಡ್ಕ, ಆಬಿದ್ ಕಲ್ಲುಮುಟ್ಲು, ಆಸಿಫ್ ಮೋಗರ್ಪಣೆ, ಬದ್ರುದ್ದೀನ್ ಮೋಗರ್ಪಣೆ, ಅನ್ವರ್ ಏಣಾವರ, ರುನೈಜ್ ಕಲ್ಲುಗುಂಡಿ, ಜುಹೈಲ್ ಕಲ್ಲುಗುಂಡಿ , ಉನೈಸ್ ಗೂನಡ್ಕ, ಈ ಸಭೆಯಲ್ಲಿ ಸೆಕ್ಟರ್ ಕಾರ್ಯದರ್ಶಿಯವರಾದ ಬಶೀರ್ ಕಲ್ಲುಮುಟ್ಲು ಸಭೆಯನ್ನು ಸ್ವಾಗತಿಸಿ,ಸಿಯಾದ್ ಜಯನಗರ ವಂದಿಸಿದರು.
0 التعليقات: