Tuesday, 8 February 2022

ಎಸ್ಸೆಸ್ಸೆಫ್ ಕಬಕ ಶಾಖೆ: ನವ ಸಾರಥಿಗಳ ಆಯ್ಕೆ

 

ಎಸ್ಸೆಸ್ಸೆಫ್ ಕಬಕ ಶಾಖೆ: ನವ ಸಾರಥಿಗಳ ಆಯ್ಕೆ 

ಪುತ್ತೂರು: ಎಸ್ಸೆಸ್ಸೆಫ್ ಕಬಕ ಶಾಖೆಯ ವಾರ್ಷಿಕ ಮಹಾ ಸಭೆ  2022 ಫೆಬ್ರವರಿ 3 ಗುರುವಾರ ರಾತ್ರಿ ಸುನ್ನಿ ಸೆಂಟರ್ ಕಬಕದಲ್ಲಿ  ನಡೆಯಿತು. 

   ಕಾರ್ಯಕ್ರಮದಲ್ಲಿ ಅಹ್ಮದ್ ಮನ್ಸೂರ್ ಮುಸ್ಲಿಯಾರ್ ದುಆ ಮಾಡಿದರು. ಸಂಘಟನೆಯ ಮಾಜಿ ಕಾರ್ಯದರ್ಶಿ ಸಫ್ವಾನ್ ಸ್ವಾಗತಿಸಿ, ಸಂಘಟನೆಯ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು. ಎಸ್.ವೈ.ಎಸ್ ಕಬಕ ಬ್ರಾಂಚ್ ನ ಮಾಜಿ ಅಧ್ಯಕ್ಷರಾದ ಸಿದ್ದೀಕ್ ಹಾಜಿ ಕಬಕ ರವರು ಸಂಘಟನಾ ಚಟುವಟಿಕೆಗಳ ಬಗ್ಗೆ ಪ್ರೇರಣೆ ನೀಡುತ್ತಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಕಬಕ ಬ್ರಾಂಚ್'ನ ಕೋಶಾಧಿಕಾರಿ ಶಾಹುಲ್ ಹಮೀದ್ ಕಬಕ ಶುಭಕೋರಿದರು. ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

SSF ಕಬಕ ಶಾಖೆಯ 2022 ನೇ ಸಾಲಿನ ನವ ಸಾರಥಿಗಳು

ಅಧ್ಯಕ್ಷರು: ಅಹ್ಮದ್ ಮನ್ಸೂರ್ ಮುಸ್ಲಿಯಾರ್

ಕಾರ್ಯದರ್ಶಿ: ಸಿದ್ದೀಕ್ ಕಬಕ

ಕೋಶಾಧಿಕಾರಿ: ಮುಹಮ್ಮದ್ ಮುನೀರ್.ಎ ಹಿಮಮಿ 

ಕನ್ವೀನರ್ ಗಳು:

ಕಲ್ಚರಲ್ ಕೌನ್ಸಿಲ್ ಕನ್ವೀನರ್: ಸಲಾಂ ಹನೀಫಿ ಕಬಕ

ಪಬ್ಲಿಕೇಷನ್ ಕನ್ವೀನರ್: ಇಲ್ಯಾಸ್ ಕಬಕ

ವಿಝ್ಡಂ/WISDOM ಕನ್ವೀನರ್: ಸಫ್ವಾನ್ ಕಬಕ

ದಅವಾ ಕನ್ವೀನರ್: ಫಝಲ್ ಮುಸ್ಲಿಯಾರ್ ಕಬಕ

ಮೀಡಿಯಾ ಕನ್ವೀನರ್: ಸಿನಾನ್ ಮುಸ್ಲಿಯಾರ್ 

ರೈಂಬೋ ಕನ್ವೀನರ್

1-ಬದ್ರುದ್ದೀನ್ ಮುಸ್ಲಿಯಾರ್ 

2-ನೌಫಲ್ ಅರ್ಕ

ಕ್ವಾಲಿಟಿ ಡೆವೆಲೆಪ್'ಮೆಂಟ್ ಕನ್ವೀನರ್: ಝುಬೈರ್ ರಿವಾ

ಕ್ಯಾಂಪಸ್ ಕನ್ವೀನರ್: ನವಾಝ್ ಕಬಕ

ಕಾರ್ಯಕಾರಿಣಿ ಸಮಿತಿ ಇತರ ಸದಸ್ಯರು: 

ಸಫ್ವಾನ್ ಪೋಳ್ಯ, ಸಲ್ಮಾನ್ ಕಲ್ಲಂದಡ್ಕ, ಅನ್ಸಾದ್ ಮುಸ್ಲಿಯಾರ್, ಸಮ್ಮಾಶ್ ಕಬಕ, ಸಮದ್ ಕಬಕ, ರಮೀಝ್ ಕಬಕ, ಫೈರೋಝ್, ಅಫೀಫ್

ಕಾರ್ಯಕ್ರಮದ ಕೊನೆಯಲ್ಲಿ ನೂತನ ಅಧ್ಯಕ್ಷರಾದ ಅಹ್ಮದ್ ಮನ್ಸೂರ್ ಮುಸ್ಲಿಯಾರ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.




SHARE THIS

Author:

0 التعليقات: