Thursday, 10 February 2022

ರೈತರ ಮೇಲೆ ಕಾರು ಹರಿಸಿದ್ದ ಆರೋಪ: ಕೇಂದ್ರ ಸಚಿವನ ಪುತ್ರನಿಗೆ ಜಾಮೀನು


 ರೈತರ ಮೇಲೆ ಕಾರು ಹರಿಸಿದ್ದ ಆರೋಪ: ಕೇಂದ್ರ ಸಚಿವನ ಪುತ್ರನಿಗೆ ಜಾಮೀನು

ಅಲಹಾಬಾದ್: ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕಾರು ಚಲಾಯಿಸಿ ರೈತರನ್ನು ಹತ್ಯೆಗೈದ ಆರೋಪದಲ್ಲಿ ಬಂಧಿತನಾಗಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ನೀಡಲಾಗಿದೆ ಎಂದು NDTV ವರದಿ ಮಾಡಿದೆ.

ಆಶಿಶ್ ಮಿಶ್ರಾ ಅವರ ವಕೀಲರ ಪ್ರಕಾರ, ಆಶೀಶ್ ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.

ಅಕ್ಟೋಬರ್ 3 ರಂದು  ಲಖಿಂಪುರ ಖೇರಿಯಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ನಾಲ್ವರು ರೈತರು ಹಾಗೂ  ಪತ್ರಕರ್ತರ ಮೇಲೆ ಎಸ್ಯುವಿಯನ್ನು ಚಲಾಯಿಸಿ ಸಾಯಿಸಿರುವ ಆರೋಪದಲ್ಲಿ ಆಶೀಶ್ ಮಿಶ್ರಾನನ್ನು ಬಂಧಿಸಲಾಗಿತ್ತು.

ಲಖಿಂಪುರ ಖೇರಿ ನ್ಯಾಯಾಲಯಗಳು ಈ ಹಿಂದೆ ಆಶೀಶ್ ಗೆ ಜಾಮೀನು ತಿರಸ್ಕರಿಸಿದ್ದವು.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಆರಂಭವಾದ ದಿನವೇ ಈ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಏಳು ಹಂತದ ಚುನಾವಣೆ ನಡೆಯಲಿದ್ದು, ನಾಲ್ಕನೇ ಸುತ್ತಿನಲ್ಲಿ ಲಖಿಂಪುರದಲ್ಲಿ ಚುನಾವಣೆ ನಡೆಯಲಿದೆ.


SHARE THIS

Author:

0 التعليقات: