Tuesday, 15 February 2022

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್: ನೂತನ ಪದಾಧಿಕಾರಿಗಳ ಆಯ್ಕೆ


 ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್: ನೂತನ ಪದಾಧಿಕಾರಿಗಳ ಆಯ್ಕೆ

ನೂತನ ಅಧ್ಯಕ್ಷರಾಗಿ ಮುಹಮ್ಮದ್ ಸಿನಾನ್ ಸಖಾಫಿ ಹಸನ್‌ನಗರ, ಪ್ರ.ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್ ಬನ್ನೂರು, ಕೋಶಾಧಿಕಾರಿಯಾಗಿ ಹಮೀದ್ ಕೊಡಿಪ್ಪಾಡಿ ಆಯ್ಕೆ

ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ವಾರ್ಷಿಕ ಮಹಾ ಸಭೆಯು ಫೆ.13ರಂದು ಪುತ್ತೂರು ಸುನ್ನಿ ಸೆಂಟರಿನಲ್ಲಿ  ನಡೆಯಿತು. 
ಸಭೆಯ  ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ ವಹಿಸಿದ್ದರು. ಸಲಾಂ ಹನೀಫಿ ಸಭೆಯನ್ನು ಉದ್ಘಾಟಿಸಿದರು.
 ಸೆಕ್ಟರ್  ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಬನ್ನೂರು ಸಂಘಟನೆಯ ಒಂದು ವರ್ಷದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಮುನೀರ್ ಬೀಟಿಗೆ ಲೆಕ್ಕಪತ್ರ ವಾಚಿಸಿದರು. 
ಬಳಿಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ನೂತನ ಅಧ್ಯಕ್ಷರಾಗಿ ಮುಹಮ್ಮದ್ ಸಿನಾನ್ ಸಖಾಫಿ ಹಸನ್‌ನಗರ, ಪ್ರ.ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್ ಬನ್ನೂರು, ಕೋಶಾಧಿಕಾರಿಯಾಗಿ ಹಮೀದ್ ಕೊಡಿಪ್ಪಾಡಿ, 
ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ಬಾತೀಶ್ ಬನ್ನೂರು ಆಯ್ಕೆಯಾದರು. ಮೀಡಿಯಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮುನೀರ್ ಹಿಮಮಿ ಕಬಕ, ಕಲ್ಚರಲ್ ಕಾರ್ಯದರ್ಶಿಯಾಗಿ ಹನೀಫ್ ಬನ್ನೂರು, ದಅವಾ ಕಾರ್ಯದರ್ಶಿಯಾಗಿ ನೌಶದ್ ಮುಸ್ಲಿಯಾರ್ (ಮುಹಿಮ್ಮಾತ್), ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಸಫೀಮ್ ಹಸನ್‌ನಗರ, Q.D (Quantity Development) ಕಾರ್ಯದರ್ಶಿಯಾಗಿ ಮುನೀರ್ ಬೀಟಿಗೆ, ವಿಸ್ಡಮ್ (Wisdom) ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಖಾಫಿ ಹಸನ್‌ನಗರ, ರೈಂಬೋ ಕಾರ್ಯದರ್ಶಿಯಾಗಿ  ಸಲಾಂ ಹನೀಫಿ ಕಬಕ ಆಯ್ಕೆಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಅಶ್‌ಹರ್ ಕೆಮ್ಮಾಯಿ, ನೌಫಲ್ ಕಬಕ, ಸಿದ್ದೀಕ್ ಕಬಕ ಆಯ್ಕೆಯಾದರು. 11 ಮಂದಿಯನ್ನು ಡಿವಿಷನ್ ಕೌನ್ಸಿಲರ್‌ ಆಗಿ ನೇಮಕ ಮಾಡಲಾಯಿತು.
ಡಿವಿಷನ್ ಪ್ರಧಾನ ಕಾರ್ಯದರ್ಶಿಯಾಗಿ ಹಾರೀಶ್ ಅಡ್ಕ ವೀಕ್ಷಕರಾಗಿ ಆಗಮಿಸಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿದರು. ಬಳಿಕ ಪ್ರಾಸ್ತಾವಿಕ ಮಾತನಾಡಿದರು.
ನೂತನ ಅಧ್ಯಕ್ಷ ಮುಹಮ್ಮದ್ ಸಿನಾನ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಬನ್ನೂರು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.



SHARE THIS

Author:

0 التعليقات: