ದ.ಕ. ಜಿಲ್ಲೆ: ಕೋವಿಡ್ಗೆ 7 ಮಂದಿ ಬಲಿ; 322 ಮಂದಿಗೆ ಕೊರೋನ ಪಾಸಿಟಿವ್
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ಗೆ 7 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1,764ಕ್ಕೇರಿದೆ.
ಮಂಗಳವಾರ 322 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅಲ್ಲದೆ 731 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇ.5.96 ದಾಖಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 1,32,859 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,27,557 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 3538 ಸಕ್ರಿಯ ಪ್ರಕರಣವಿದೆ.
ಮಂಗಳವಾರ ಮೃತಪಟ್ಟ 7 ಮಂದಿಯ ಪೈಕಿ ಮಂಗಳೂರು ತಾಲೂಕಿನ ಒಬ್ಬರು, ಬಂಟ್ವಾಳ ತಾಲೂಕಿನ ಇಬ್ಬರು ಮತ್ತು ಹೊರಜಿಲ್ಲೆಯ ನಾಲ್ಕು ಮಂದಿ ಇದ್ದಾರೆ. ಅದರಲ್ಲಿ 5 ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0 التعليقات: