Tuesday, 15 February 2022

ಕೋರ್ಟ್ ಮೊರೆ ಹೋದಂತ 6 ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು

ಕೋರ್ಟ್ ಮೊರೆ ಹೋದಂತ 6 ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು 

ಉಡುಪಿ: ರಾಜ್ಯಾಧ್ಯಂತ ಇಂದಿನಿಂದ ಪಿಯು, ಪದವಿ ಕಾಲೇಜುಗಳು ಆರಂಭಗೊಂಡಿವೆ. ಇತ್ತ ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆಯ ಜೊತೆಗೆ ಕಾಲೇಜುಗಳು ಆರಂಭಗೊಂಡಿವೆ. ಆದ್ರೇ ಇಂದು ಆರಂಭಗೊಂಡಿರುವಂತ ಕಾಲೇಜಿಗೆ ಹೈಕೋರ್ಟ್ ನಲ್ಲಿ  ಹಿಜಾಬ್ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವಂತ 6 ವಿದ್ಯಾರ್ಥಿನಿಯರು ಗೈರು ಹಾಜರಾಗಿರೋದಾಗಿ ತಿಳಿದು ಬಂದಿದೆ.

ಇಂದಿನಿಂದ ಪಿಯು, ಪದವಿ ಕಾಲೇಜು ಆರಂಭ: ಮುಗಿಯದ ಹಿಜಾಬ್ ಸಂಘರ್ಷ, ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್

ಹಿಜಾಬ್ ವರ್ಸಸ್ ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದ್ದು, ಉಡುಪಿ ಜಿಲ್ಲೆಯಲ್ಲಾಗಿತ್ತು. ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಂತ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ. ಇಂದು ಮಧ್ಯಾಹ್ನ 2.30ಕ್ಕೆ ಅರ್ಜಿಯ ವಿಚಾರಣೆ ಮತ್ತೆ ಪುನರಾರಂಭಗೊಳ್ಳಲಿದೆ.

ಈ ನಡುವೆ ಇಂದು ಆರಂಭಗೊಂಡಿರುವಂತ ಪಿಯು ಕಾಲೇಜಿಗೆ ಹೈಕೋರ್ಟ್ ನಲ್ಲಿ ಹಿಜಾಬ್ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವಂತ 6 ವಿದ್ಯಾರ್ಥಿನಿಯರು ಹಾಜರಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಹಿಜಾಬ್ ಅನುಮತಿ ಕೋರಿದಂತ ವಿದ್ಯಾರ್ಥಿನಿಯರು ಪಿಯು ಕಾಲೇಜು ತರಗತಿಗೆ ಗೈರು ಹಾಜರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.


SHARE THIS

Author:

0 التعليقات: