Sunday, 13 February 2022

ಚೀನಾದ ಇನ್ನೂ 54 ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ

ಚೀನಾದ ಇನ್ನೂ 54 ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ

ಹೊಸದಿಲ್ಲಿ: ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಚೀನಾದ 54 ಆ್ಯಪ್‌ಗಳನ್ನು ಭಾರತ ನಿಷೇಧಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೋಮವಾರ ತಿಳಿಸಿದೆ.

"ಈ 54 ಅಪ್ಲಿಕೇಶನ್‌ಗಳು ವಿವಿಧ ನಿರ್ಣಾಯಕ ಅನುಮತಿಗಳನ್ನು ಪಡೆದುಕೊಳ್ಳುತ್ತವೆ ಹಾಗೂ  ಸೂಕ್ಷ್ಮ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತವೆ. ಈ ಸಂಗ್ರಹಿಸಿದ ನೈಜ-ಸಮಯದ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಶತ್ರು ದೇಶದಲ್ಲಿರುವ ಸರ್ವರ್‌ಗಳಿಗೆ ರವಾನಿಸಲಾಗುತ್ತಿದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನಿಷೇಧಿತ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಸ್ವೀಟ್ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ - ಸೆಲ್ಫಿ ಕ್ಯಾಮೆರಾ, ಗರೆನಾ ಫ್ರೀ ಫೈರ್ - ಇಲ್ಯುಮಿನೇಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್‌ರಿವರ್, ಆನ್‌ಮಿಯೋಜಿ ಅರೆನಾ, ಆಪ್‌ಲಾಕ್ ಹಾಗೂ  ಡ್ಯುಯಲ್ ಸ್ಪೇಸ್ ಲೈಟ್ ಸೇರಿವೆ.

ಕಳೆದ ವರ್ಷ ಜೂನ್‌ನಲ್ಲಿ  ರಾಷ್ಟ್ರದ ಸಾರ್ವಭೌಮತ್ವ ಹಾಗೂ  ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿ ಭಾರತವು ಟಿಕ್‌ಟಾಕ್, ವೀಚಾಟ್ ಹಾಗೂ ಹೆಲೋನಂತಹ ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಮೇ 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಂತರ ಭಾರತದಲ್ಲಿ ಸುಮಾರು 300 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲಾಗಿದೆ.


 SHARE THIS

Author:

0 التعليقات: