Saturday, 26 February 2022

ಮಣಿಪುರದ ಮನೆಯೊಂದರಲ್ಲಿ ಸ್ಫೋಟಕ್ಕೆ ಇಬ್ಬರು ಬಲಿ, 5 ಮಂದಿಗೆ ಗಾಯ

ಮಣಿಪುರದ ಮನೆಯೊಂದರಲ್ಲಿ ಸ್ಫೋಟಕ್ಕೆ ಇಬ್ಬರು ಬಲಿ, 5 ಮಂದಿಗೆ ಗಾಯ

ಗುವಾಹತಿ: ಮಣಿಪುರ ವಿಧಾನಸಭಾ ಚುನಾವಣೆ ನಡೆಯುವ ಎರಡು ದಿನ ಮುನ್ನ ಚುರಾಚಂಡಪುರ ಜಿಲ್ಲೆಯ ಮನೆಯೊಂದರಲ್ಲಿ ನಡೆದ ಸ್ಫೋಟದಲ್ಲಿ ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ಗಂಗ್‌ಪಿಮೌಲ್ ಗ್ರಾಮದಲ್ಲಿ ನಡೆದ ಈ ಸ್ಫೋಟಕ್ಕೆ ಸಣ್ಣ ಪಿರಂಗಿ ಕಾರಣ ಎನ್ನಲಾಗಿದೆ.

ಸ್ಫೋಟದಲ್ಲಿ ಮಗು ಸೇರಿದಂತೆ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇವರೆಲ್ಲರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಯಲ್ಲಿ ಮಂಗಮಿನ್‌ಲಾಲ್ (6) ಮತ್ತು ಲಂಗಿನ್‌ಸಗ್ (22) ಎಂಬುವವರು ಮೃತಪಟ್ಟಿದ್ದಾರೆ ಎಂದು ಜಿಲ್ಲೆಯ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣರಾದವರ ಪತ್ತೆಗೆ ಜಾಲ ಬೀಸಿದ್ದಾರೆ. ಜನವರಿ 8ರಂದು ಮಣಿಪುರ ಚುನಾವಣೆ ಘೋಷಣೆಯಾದ ಬಳಿಕ ನಡೆದ ಮೊದಲ ಪ್ರಮುಖ ಘಟನೆ ಇದಾಗಿದೆ. 60 ಸದಸ್ಯಬಲದ ವಿಧಾನಸಭೆಗೆ ಸೋಮವಾರ ಹಾಗೂ ಮುಂದಿನ ಶನಿವಾರ ಹೀಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಎಣಿಕೆ ಕಾರ್ಯ ನಡೆಯಲಿದೆ.SHARE THIS

Author:

0 التعليقات: