Thursday, 24 February 2022

ಫೆಬ್ರವರಿ 26 ರಂದು ಬದ್ರುಸ್ಸಾದಾತ್ ಕಡಲುಂಡಿ ತಂಙಳ್ ಸಜಿಪ-ಚಟ್ಟೆಕ್ಕಲ್ ಗೆ


 ಫೆಬ್ರವರಿ 26 ರಂದು ಬದ್ರುಸ್ಸಾದಾತ್ ಕಡಲುಂಡಿ ತಂಙಳ್ ಸಜಿಪ-ಚಟ್ಟೆಕ್ಕಲ್ ಗೆ 

ಬಿ.ಸಿ.ರೋಡ್: ಸಜೀಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಫೆಬ್ರವರಿ 25, 26ರಂದು ಅಸ್ಸಯ್ಯದ್ ಮುಷ್ತಾಕುರ್ರಹ್ಮಾನ್ ತಂಙಳ್ ರವರ ನೇತ್ರತ್ವದಲ್ಲಿ 10 ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು. ಪ್ರಸ್ತುತ ಕಾರ್ಯಕ್ರಮದ ಎರಡನೇ ದಿನ 26ರಂದು) ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ಪ್ರತಿಷ್ಠಿತ ಮಅದಿನ್ ಅಕಾಡೆಮಿ ಸಂಸ್ಥೆಯ ಸ್ಥಾಪಕ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಙಳ್ ಅವರು ಆಗಮಿಸಲಿದ್ದಾರೆ.                                                              

   ಫೆಬ್ರವರಿ 25 ರಂದು ಮುಹಮ್ಮದ್ ಅಲಿ ಮದನಿ ಕಲ್ತರ ಕೋಝಿಕೋಡ್ ಅವರು ಜಿಸ್ತಿಯಾ ಖುತಿಬಿಯ್ಯತ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಧಾರ್ಮಿಕ ಮತಪಂಡಿತರು ಹಾಗೂ ಸಾಮಾಜಿಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಲಾಲಿಯ್ಯ ಜುಮ್ಮಾ ಮಸೀದಿ ಚಟ್ಟೆಕಲ್ ಇದರ ಆಡಳಿತ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: