Sunday, 20 February 2022

ನಂದಿಗಿರಿಧಾಮ: ಬೆಟ್ಟ ಏರುವಾಗ 250 ಅಡಿ ಆಳಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ


 ನಂದಿಗಿರಿಧಾಮ: ಬೆಟ್ಟ ಏರುವಾಗ 250 ಅಡಿ ಆಳಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ

ಚಿಕ್ಕಬಳ್ಳಾಪುರ:ತಾಲೂಕಿನ ನಂದಿಗಿರಿಧಾಮದಲ್ಲಿ ಬೆಟ್ಟ ಏರುವಾಗ ಆಯತಪ್ಪಿ ಬಿದ್ದ ನಿಶಾಂತ್ (19)ಎಂಬವರನ್ನು ರಕ್ಷಿಸಲಾಗಿದೆ. ನವ ದೆಹಲಿ ಮೂಲದ ನಿಶಾಂಕ್ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನಂದಿ ಗಿರಿಧಾಮಕ್ಕೆ ವಾರಂತ್ಯದಲ್ಲಿ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. ನಿಶಾಂತ್ ಬೈಕಿನಲ್ಲಿ ಗಿರಿಧಾಮಕ್ಕೆ ಬಂದಿದ್ದಾರೆ. ಬೆಟ್ಟದ ಚೆಕ್ ಪೋಸ್ಟ್ ಬಳಿ ಬೈಕ್ ನಿಲ್ಲಿಸಿದ್ದಾರೆ. ಅಲ್ಲಿಂದ ಬ್ರಹ್ಮಗಿರಿ ಬೆಟ್ಟದ ಮೂಲಕ ನಂದಿಗಿರಿಧಾಮ ಏರಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಬೆಟ್ಟದಿಂದ ಸುಮಾರು 250 ಅಡಿ ಆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಸ್ವಲ್ಪ ಮಟ್ಟಿನ ಆಧಾರ ದೊರೆತಿದೆ. ಅವರು ಸಿಲುಕಿದ್ದ ಸ್ಥಳದಿಂದ ಮತ್ತೆ ಕೆಳಗೆ 300 ಅಡಿಗಳ ಕಂದಕ ಇತ್ತು. ಇದರಿಂದಾಗಿ ಬಹುದೊಡ್ಡ ಅಪಾಯದಿಂದ ಪಾರಾಗಿದ್ದಾರೆ.


SHARE THIS

Author:

0 التعليقات: