Saturday, 26 February 2022

ಉತ್ತರಪ್ರದೇಶದ 12 ಜಿಲ್ಲೆಗಳಲ್ಲಿ ಐದನೇ ಹಂತದ ಮತದಾನ ಆರಂಭ


ಉತ್ತರಪ್ರದೇಶದ 12 ಜಿಲ್ಲೆಗಳಲ್ಲಿ ಐದನೇ ಹಂತದ ಮತದಾನ ಆರಂಭ

ಲಕ್ನೊ: ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ವ್ಯಾಪಿಸಿರುವ 61 ಕ್ಷೇತ್ರಗಳಿಗೆ ಇಂದು ಐದನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ.ಉತ್ತರ ಪ್ರದೇಶದಲ್ಲಿಇಂದು  ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 8 ರಷ್ಟು ಮತದಾನವಾಗಿದೆ.

ಉತ್ತರ ಪ್ರದೇಶದಲ್ಲಿ ಇಂದು ಮತದಾನ ನಡೆಯುತ್ತಿರುವ ಸೆಂಟ್ರಲ್ ಹಾಗೂ  ಅವಧ್ ಪ್ರದೇಶದ ಸ್ಥಾನಗಳ ಮೇಲೆ ಬಿಜೆಪಿ ಹಾಗೂ  ಮಿತ್ರಪಕ್ಷಗಳು ಭಾರೀ ಪ್ರಭಾವವನ್ನು ಹೊಂದಿವೆ.

 ರಾಮ ಮಂದಿರ ನಿರ್ಮಾಣದ ಆಂದೋಲನದ ಕೇಂದ್ರಬಿಂದುವಾಗಿದ್ದ ದೇವಾಲಯ ನಗರ ಅಯೋಧ್ಯೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಪವನ್ ಪಾಂಡೆ ವಿರುದ್ಧ ಬಿಜೆಪಿ ಶಾಸಕ ವಿ.ಪಿ. ಗುಪ್ತಾ ಸ್ಪರ್ಧಿಸಲಿದ್ದಾರೆ.

ಈ ಹಿಂದೆ ಅಲಹಾಬಾದ್‌ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್‌ರಾಜ್ ನಲ್ಲಿ  ಇಂದು ಮತದಾನ ನಡೆಯುತ್ತಿದೆ.  ಹಿಂದಿನ ಕಾಂಗ್ರೆಸ್ ಭದ್ರಕೋಟೆಯಾದ ಅಮೇಠಿಯಲ್ಲಿಯೂ ಇಂದು ಮತದಾನವಾಗುತ್ತಿದೆ.SHARE THIS

Author:

0 التعليقات: