Wednesday, 2 February 2022

ದ.ಕ.ಜಿಲ್ಲೆ; ಕೋವಿಡ್‌ಗೆ 11 ಮಂದಿ ಬಲಿ, 412 ಮಂದಿಗೆ ಕೊರೋನ ಪಾಸಿಟಿವ್


 ದ.ಕ.ಜಿಲ್ಲೆ; ಕೋವಿಡ್‌ಗೆ 11 ಮಂದಿ ಬಲಿ, 412 ಮಂದಿಗೆ ಕೊರೋನ ಪಾಸಿಟಿವ್

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ಗೆ 11 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1,775ಕ್ಕೇರಿದೆ.

ಬುಧವಾರ 412 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅಲ್ಲದೆ 839 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇ.5.37 ದಾಖಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 1,33,271 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,28,396 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 3,100 ಸಕ್ರಿಯ ಪ್ರಕರಣವಿದೆ.

ಬುಧವಾರ ಮೃತಪಟ್ಟ 11 ಮಂದಿಯ ಪೈಕಿ ಮಂಗಳೂರು ತಾಲೂಕಿನ ಆರು, ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ತಲಾ ಒಬ್ಬರು ಮತ್ತು ಹೊರಜಿಲ್ಲೆಯ ಮೂರು ಮಂದಿ ಸೇರಿದ್ದಾರೆ. ಅದರಲ್ಲಿ 9 ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದಾರೆ.

ಬುಧವಾರ ಮಂಗಳೂರು ತಾಲೂಕಿನ ಖಾಸಗಿ ಮೆಡಿಕಲ್ ಹಾಸ್ಟೆಲೊಂದನ್ನು ಕ್ಲಷ್ಟರ್ ಎಂದು ಗುರುತಿಸಲಾಗಿದೆ. ಇಲ್ಲಿನ 52 ವಿದ್ಯಾರ್ಥಿಗಳ ಪೈಕಿ 6 ಮಂದಿಗೆ ಕೋವಿಡ್ ಸೋಂಕು ತಗಲಿದೆ.


SHARE THIS

Author:

0 التعليقات: