Monday, 28 February 2022

ವಾಣಿಜ್ಯ ಬಳಕೆಯ ಸಿಲಿಂಡರ್ ದರ 105 ರೂ. ಏರಿಕೆ


ವಾಣಿಜ್ಯ ಬಳಕೆಯ ಸಿಲಿಂಡರ್ ದರ 105 ರೂ. ಏರಿಕೆ

ಹೊಸದಿಲ್ಲಿ: ಮಾರ್ಚ್ 1 ರಿಂದ ಜಾರಿಗೆ ಬರುವಂತೆ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 105  ರೂ. ಹೆಚ್ಚಿಸಲಾಗಿದೆ.

ಈ ಏರಿಕೆಯೊಂದಿಗೆ ಮಂಗಳವಾರದಿಂದ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ  ರೂ. 2,012 ಆಗಲಿದೆ.

5 ಕೆಜಿ ಸಿಲಿಂಡರ್ ಬೆಲೆಯೂ  ರೂ.27ರಷ್ಟು ಏರಿಕೆಯಾಗಿದೆ. ಈಗ ದಿಲ್ಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಆಗಲಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ಹೆಚ್ಚಳವಾಗಿಲ್ಲ.SHARE THIS

Author:

0 التعليقات: