Monday, 28 February 2022

 ಫಿಫಾ ವಿಶ್ವಕಪ್‌ನಿಂದ ರಷ್ಯಾ ಉಚ್ಚಾಟನೆ: ಫಿಫಾ, ಯುಇಎಫ್‌ಎ ಜಂಟಿ ಹೇಳಿಕೆ

ಫಿಫಾ ವಿಶ್ವಕಪ್‌ನಿಂದ ರಷ್ಯಾ ಉಚ್ಚಾಟನೆ: ಫಿಫಾ, ಯುಇಎಫ್‌ಎ ಜಂಟಿ ಹೇಳಿಕೆ

ಫಿಫಾ ವಿಶ್ವಕಪ್‌ನಿಂದ ರಷ್ಯಾ ಉಚ್ಚಾಟನೆ: ಫಿಫಾ, ಯುಇಎಫ್‌ಎ ಜಂಟಿ ಹೇಳಿಕೆ

ಪ್ಯಾರೀಸ್: ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿ 2022ರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಿಂದ ರಷ್ಯಾವನ್ನು ಉಚ್ಚಾಟಿಸಲಾಗಿದ್ದು, ರಷ್ಯಾದ ಎಲ್ಲ ಕ್ಲಬ್ ತಂಡಗಳನ್ನು ಅಂತರರಾಷ್ಟ್ರೀಯ ಫುಟ್‌ಬಾಲ್ ಸ್ಪರ್ಧೆಗಳಿಂದ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಫಿಫಾ ಹಾಗೂ ಯುಇಎಫ್‌ಎ ಜಂಟಿ ಹೇಳಿಕೆ ನೀಡಿವೆ.

ಈ ವರ್ಷ ಕತರ್‌ನಲ್ಲಿ ನಡೆಯುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ ಮಾರ್ಚ್‌ನಲ್ಲಿ ಅರ್ಹತಾ ಪ್ಲೇ ಆಫ್ ಪಂದ್ಯಗಳನ್ನು ರಷ್ಯಾ ಪುರುಷರ ಫುಟ್ಬಾಲ್ ತಂಡ ಆಡಬೇಕಿತ್ತು. ಅಂತೆಯೇ ರಷ್ಯಾದ ಮಹಿಳಾ ತಂಡ ಇಂಗ್ಲೆಂಡ್‌ನಲ್ಲಿ ಈ ವರ್ಷದ ಜುಲೈನಲ್ಲಿ ನಡೆಯಬೇಕಿದ್ದ ಯೂರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬೇಕಿತ್ತು. ಈ ಹೊಸ ಆದೇಶ ಯುರೋಪಿಯನ್ ಸ್ಪರ್ಧೆಗಳಲ್ಲಿ ಭಾಗವಹಿಸುವ ರಷ್ಯಾದ ಫುಟ್ಬಾಲ್ ಕ್ಲಬ್‌ಗಳ ಮೇಲೂ ಪರಿಣಾಮ ಬೀರಲಿದೆ.

ಫಿಫಾ ಹಾಗೂ ಯುಇಎಫ್‌ಎ ಜಂಟಿಯಾಗಿ ನಿರ್ಧರಿಸಿ, ಎಲ್ಲ ರಷ್ಯನ್ ತಂಡಗಳು ಅಂದರೆ ರಾಷ್ಟ್ರೀಯ ಪ್ರತಿನಿಧಿತ್ವದ ತಂಡಗಳು ಮತ್ತು ಕ್ಲಬ್ ತಂಡಗಳನ್ನು ಫಿಫಾ ಹಾಗೂ ಯುಇಎಫ್‌ಎ ಸ್ಪರ್ಧೆಗಳಿಂದ ಮುಂದಿನ ನೋಟಿಸ್ ನೀಡುವವರೆಗೆ ನಿಷೇಧಿಸಲಾಗಿದೆ ಎಂದು ಉಭಯ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ವಿವರಿಸಿವೆ.

ಮಾರ್ಚ್ 24ರಂದು ನಡೆಯಬೇಕಿದ್ದ ವಿಶ್ವಕಪ್ ಅರ್ಹತಾ ಪ್ಲೇಆಫ್ ಸೆಮಿಫೈನಲ್‌ನಲ್ಲಿ ರಷ್ಯಾ, ಪೋಲಂಡ್ ವಿರುದ್ಧ ಸೆಣೆಸಬೇಕಿತ್ತು. ಜತೆಗೆ ಫೈನಲ್‌ನಲ್ಲಿ ಸ್ಥಾನ ಪಡೆಯಲು ಸ್ವೀಡನ್ ಅಥವಾ ಜೆಕ್ ಗಣರಾಜ್ಯವನ್ನು ಮಾರ್ಚ್ 29ರಂದು ಎದುರಿಸಬೇಕಿತ್ತು. ಆದರೆ ಮೂರೂ ಸಂಭಾವ್ಯ ಎದುರಾಳಿಗಳು ಎಲ್ಲ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದವು.


ಅಮೆರಿಕ ಚರ್ಚ್ ನಲ್ಲಿ ತನ್ನ ಮೂರು ಮಕ್ಕಳನ್ನು ಸಾಯಿಸಿ ಸ್ವತಃ ಗುಂಡಿಕ್ಕಿಕೊಂಡ ತಂದೆ

ಅಮೆರಿಕ ಚರ್ಚ್ ನಲ್ಲಿ ತನ್ನ ಮೂರು ಮಕ್ಕಳನ್ನು ಸಾಯಿಸಿ ಸ್ವತಃ ಗುಂಡಿಕ್ಕಿಕೊಂಡ ತಂದೆ


ಅಮೆರಿಕ ಚರ್ಚ್ ನಲ್ಲಿ ತನ್ನ ಮೂರು ಮಕ್ಕಳನ್ನು ಸಾಯಿಸಿ ಸ್ವತಃ ಗುಂಡಿಕ್ಕಿಕೊಂಡ ತಂದೆ

ಸ್ಯಾಕ್ರಮೆಂಟೊ: ಅಮೆರಿಕದ ಚರ್ಚ್‌ನಲ್ಲಿ ತಂದೆಯೊಬ್ಬ ಸೋಮವಾರ ತನ್ನ ಮೂವರು ಮಕ್ಕಳನ್ನು ಗುಂಡಿಕ್ಕಿ ಸಾಯಿಸಿ, ಬಳಿಕ ತಾನು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ.  ಆದರೆ ಆ ವ್ಯಕ್ತಿಯ ಸಾವಿಗೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.

ಸಾವನ್ನಪ್ಪಿದ ಎಲ್ಲಾ ಮೂರು ಮಕ್ಕಳು 15 ವರ್ಷದೊಳಗಿನವರು ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಸಾರ್ಜೆಂಟ್ ರಾಡ್ ಗ್ರಾಸ್‌ಮನ್ ಸುದ್ದಿಗಾರರಿಗೆ ತಿಳಿಸಿದರು.

"ಇಂದು ಮಧ್ಯಾಹ್ನ 5:07 ಕ್ಕೆ, ಚರ್ಚ್ ಒಳಗೆ ಗುಂಡಿನ ಶಬ್ಧ ಕೇಳುತ್ತಿದೆ  ಎಂದು ನಮಗೆ ಕರೆ ಬಂದಿತು. ತಂದೆಯೊಬ್ಬ 15 ವರ್ಷದೊಳಗಿನ ತನ್ನ ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ಬಳಿಕ ತಾನು ಗುಂಡಿಕ್ಕಿಕೊಂಡು ಸಾವನ್ನಪ್ಪಿರುವುದನ್ನು  ಪತ್ತೆ ಹಚ್ಚಿದ್ದೇವೆ" ಎಂದು ಗ್ರಾಸ್‌ಮನ್ ಹೇಳಿದರು.


 

ವಾಣಿಜ್ಯ ಬಳಕೆಯ ಸಿಲಿಂಡರ್ ದರ 105 ರೂ. ಏರಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್ ದರ 105 ರೂ. ಏರಿಕೆ


ವಾಣಿಜ್ಯ ಬಳಕೆಯ ಸಿಲಿಂಡರ್ ದರ 105 ರೂ. ಏರಿಕೆ

ಹೊಸದಿಲ್ಲಿ: ಮಾರ್ಚ್ 1 ರಿಂದ ಜಾರಿಗೆ ಬರುವಂತೆ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 105  ರೂ. ಹೆಚ್ಚಿಸಲಾಗಿದೆ.

ಈ ಏರಿಕೆಯೊಂದಿಗೆ ಮಂಗಳವಾರದಿಂದ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ  ರೂ. 2,012 ಆಗಲಿದೆ.

5 ಕೆಜಿ ಸಿಲಿಂಡರ್ ಬೆಲೆಯೂ  ರೂ.27ರಷ್ಟು ಏರಿಕೆಯಾಗಿದೆ. ಈಗ ದಿಲ್ಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಆಗಲಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ಹೆಚ್ಚಳವಾಗಿಲ್ಲ.


ನಿರ್ಬಂಧಿತ ರಷ್ಯನ್ ಹಣಕಾಸು ಸಂಸ್ಥೆಗಳ ಜತೆ ವಹಿವಾಟು ಸ್ಥಗಿತಗೊಳಿಸಿದ ಎಸ್‌ಬಿಐ

ನಿರ್ಬಂಧಿತ ರಷ್ಯನ್ ಹಣಕಾಸು ಸಂಸ್ಥೆಗಳ ಜತೆ ವಹಿವಾಟು ಸ್ಥಗಿತಗೊಳಿಸಿದ ಎಸ್‌ಬಿಐ


ನಿರ್ಬಂಧಿತ ರಷ್ಯನ್ ಹಣಕಾಸು ಸಂಸ್ಥೆಗಳ ಜತೆ ವಹಿವಾಟು ಸ್ಥಗಿತಗೊಳಿಸಿದ ಎಸ್‌ಬಿಐ

ಹೊಸದಿಲ್ಲಿ: ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ನಡೆಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ನಿರ್ಬಂಧಕ್ಕೆ ಒಳಗಾಗಿರುವ ರಷ್ಯಾದ ಹಣಕಾಸು ಸಂಸ್ಥೆಗಳನ್ನು ಒಳಗೊಂಡ ಎಲ್ಲ ವಹಿವಾಟುಗಳನ್ನು ತಡೆ ಹಿಡಿಯಲು ಭಾರತದ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿವೆ ಎಂದು ರಾಯ್ಟರ್ ವರದಿ ಮಾಡಿದೆ.

ಸಂಬಂಧಪಟ್ಟ ಗ್ರಾಹಕರಿಗೆ ಈ ಸಂಬಂಧ ಪತ್ರ ಬರೆದಿರುವ ಎಸ್‌ಬಿಐ, "ಅಮೆರಿಕ, ಯೂರೋಪಿಯನ್ ಯೂನಿಯನ್ ಅಥವಾ ವಿಶ್ವಸಂಸ್ಥೆಯ ನಿರ್ಬಂಧಕ್ಕೆ ಒಳಗಾಗಿರುವ ರಷ್ಯಾದ ಸಂಸ್ಥೆಗಳು, ಬ್ಯಾಂಕ್‌ಗಳು, ಬಂದರುಗಳು ಅಥವಾ ಹಡಗುಗಳಿಗೆ ಸಂಬಂಧಿಸಿದಂತೆ ಯಾವುದೇ ಕರೆನ್ಸಿಯಲ್ಲಿ ವಹಿವಾಟು ನಡೆಸಬಾರದು" ಎಂದು ಸೂಚಿಸಿದೆ. ಈ ಸಂಬಂಧ ಇ-ಮೇಲ್ ಪ್ರಶ್ನೆಗಳಿಗೆ ಎಸ್‌ಬಿಐ ಯಾವುದೇ ಉತ್ತರ ನೀಡಿಲ್ಲ.

"ನಾವು ದೊಡ್ಡ ಪ್ರಮಾಣದ ಅಂತರರಾಷ್ಟ್ರೀಯ ಅಸ್ತಿತ್ವ ಹೊಂದಿದ್ದೇವೆ. ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ಅಮೆರಿಕ ಹಾಗೂ ಯೂರೋಪಿಯನ್ ಯೂನಿಯನ್ ನಿರ್ಬಂಧಗಳನ್ನು ನಾವು ಅನುಸರಿಸುವುದು ಅಗತ್ಯ. ಈ ನಿಯಮಗಳಿಗೆ ನಾವು ಬದ್ಧರಾಗದೇ ಇರುವುದು ಅಸಾಧ್ಯ" ಎಂದು ಎಸ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಉಕ್ರೇನ್ ವಿರುದ್ಧದ ದಾಳಿಯನ್ನು ರಷ್ಯಾ ವಿಶೇಷ ಕಾರ್ಯಾಚರಣೆ ಎಂದು ಬಣ್ಣಿಸಿದ್ದು, ಎರಡನೇ ಮಹಾಯುದ್ಧದ ಬಳಿಕ ಯೂರೋಪಿಯನ್ ದೇಶದ ಮೇಲೆ ನಡೆಸುತ್ತಿರುವ ಅತಿದೊಡ್ಡ ದಾಳಿ ಇದಾಗಿದೆ. ರಷ್ಯಾದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

ರಷ್ಯಾದ ಜತೆ ನಿಕಟವಾದ ವ್ಯಾಪಾರ ಮತ್ತು ರಕ್ಷಣಾ ಸಂಬಂಧಗಳನ್ನು ಹೊಂದಿರುವ ಭಾರತ, ತನ್ನ ಧೀರ್ಘಾವಧಿಯ ಮಿತ್ರರಾಷ್ಟ್ರವಾದ ರಷ್ಯಾದ ದಾಳಿಯನ್ನು ಇದುವರೆಗೆ ಬಹಿರಂಗವಾಗಿ ಖಂಡಿಸಿಲ್ಲ. ಸಂಘರ್ಷ ನಿವಾರಣೆಗೆ ಮತ್ತು ಹಿಂಸೆ ತಡೆಯಲು ಮಾತುಕತೆಯೊಂದೇ ಮಾರ್ಗ ಎಂದು ಭಾರತ ಅಭಿಪ್ರಾಯಪಟ್ಟಿದೆ. ಆದರೆ ನಿರ್ಬಂಧಿತ ರಾಷ್ಟ್ರಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ನಿರ್ವಹಿಸುವ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಸಲಹೆ ಮಾಡಿದೆ.

Saturday, 26 February 2022

ಉತ್ತರಪ್ರದೇಶದ 12 ಜಿಲ್ಲೆಗಳಲ್ಲಿ ಐದನೇ ಹಂತದ ಮತದಾನ ಆರಂಭ

ಉತ್ತರಪ್ರದೇಶದ 12 ಜಿಲ್ಲೆಗಳಲ್ಲಿ ಐದನೇ ಹಂತದ ಮತದಾನ ಆರಂಭ


ಉತ್ತರಪ್ರದೇಶದ 12 ಜಿಲ್ಲೆಗಳಲ್ಲಿ ಐದನೇ ಹಂತದ ಮತದಾನ ಆರಂಭ

ಲಕ್ನೊ: ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ವ್ಯಾಪಿಸಿರುವ 61 ಕ್ಷೇತ್ರಗಳಿಗೆ ಇಂದು ಐದನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ.ಉತ್ತರ ಪ್ರದೇಶದಲ್ಲಿಇಂದು  ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 8 ರಷ್ಟು ಮತದಾನವಾಗಿದೆ.

ಉತ್ತರ ಪ್ರದೇಶದಲ್ಲಿ ಇಂದು ಮತದಾನ ನಡೆಯುತ್ತಿರುವ ಸೆಂಟ್ರಲ್ ಹಾಗೂ  ಅವಧ್ ಪ್ರದೇಶದ ಸ್ಥಾನಗಳ ಮೇಲೆ ಬಿಜೆಪಿ ಹಾಗೂ  ಮಿತ್ರಪಕ್ಷಗಳು ಭಾರೀ ಪ್ರಭಾವವನ್ನು ಹೊಂದಿವೆ.

 ರಾಮ ಮಂದಿರ ನಿರ್ಮಾಣದ ಆಂದೋಲನದ ಕೇಂದ್ರಬಿಂದುವಾಗಿದ್ದ ದೇವಾಲಯ ನಗರ ಅಯೋಧ್ಯೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಪವನ್ ಪಾಂಡೆ ವಿರುದ್ಧ ಬಿಜೆಪಿ ಶಾಸಕ ವಿ.ಪಿ. ಗುಪ್ತಾ ಸ್ಪರ್ಧಿಸಲಿದ್ದಾರೆ.

ಈ ಹಿಂದೆ ಅಲಹಾಬಾದ್‌ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್‌ರಾಜ್ ನಲ್ಲಿ  ಇಂದು ಮತದಾನ ನಡೆಯುತ್ತಿದೆ.  ಹಿಂದಿನ ಕಾಂಗ್ರೆಸ್ ಭದ್ರಕೋಟೆಯಾದ ಅಮೇಠಿಯಲ್ಲಿಯೂ ಇಂದು ಮತದಾನವಾಗುತ್ತಿದೆ.


ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು.

ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು.


ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು.

ದೊಡ್ಡಬಳ್ಳಾಪುರ: ಇನ್ನೇನು ಎಟಿಎಂ ಯಂತ್ರ ಒಡೆದು ಹಣ ಎಗರಿಸಬೇಕೆನ್ನುವಷ್ಟರಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದ ಕಳ್ಳರಿಬ್ಬರು ತಕ್ಷಣ ಕಾಲಿಗೆ ಬುದ್ಧಿ ಹೇಳುತ್ತಾರೆ. ಆದರೂ ಜನ ಬೆನ್ನಟ್ಟುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದಕ್ಕೆ ಕೈಅಡ್ಡಹಾಕಿದ ಕಳ್ಳರು ಡ್ರಾಪ್ ಕೇಳಿದ್ರು.

ಕಾರು ನಿಲ್ಲುತ್ತಿದ್ದಂತೆ ಅದರೊಳಗೆ ಹತ್ತಿ ಅಬ್ಬಾ ಬಚಾವಾದೆವು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಆ ಕಾರು ನೇರವಾಗಿ ಪೊಲೀಸ್​ ಠಾಣೆ ಮುಂದೆ ನಿಲ್ಲುತ್ತೆ. ಅರೇ ಇದ್ಹೇನಿದು? ಎಂದು ಕಳ್ಳರು ಪಿಳಿಪಿಳಿ ಕಣ್ಣುಬಿಟ್ಟು ನೋಡುವಷ್ಟರಲ್ಲಿ ಗೊತ್ತಾಗುತ್ತೇ ತಾವು ಡ್ರಾಪ್​ ಕೇಳಿದ್ದು ಪೊಲೀಸರನ್ನೇ!

ಇದು ಯಾವ ಸಿನಿಮಾ ಕಥೆಯೂ ಅಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮೇಳೆಕೋಟೆಯೊಂದರ ಎಟಿಎಂ ಕೇಂದ್ರದಲ್ಲಿ ಶನಿವಾರ ದರೋಡೆ ಪ್ರಯತ್ನ ನಡೆಸಿದ ಕಳ್ಳರಿಬ್ಬರ ರಿಯಲ್ ಕಥೆ.

ಪ್ರಕರಣ ಸಂಬಂಧ ನೆಲಮಂಗಲ ತಾಲೂಕು ಅರಿಶಿನಕುಂಟೆ ನಿವಾಸಿಗಳಾದ ಸಚಿನ್ ಹಾಗೂ ಗಗನ್ ಎಂಬುವರನ್ನು ಬಂಧಿಸಿರುವ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೇಳೆಕೋಟೆ ಎಂಟಿಬಿ ಕೇಂದ್ರ ದರೋಡೆಗೆ ಯತ್ನಿಸಿದ ಕಳ್ಳರಿಬ್ಬರು ಜನರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದರು. ಇದೇ ವೇಳೆ ಮಾಹಿತಿ ಪಡೆದ ಪೊಲೀಸರು ಖಾಸಗಿ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಈ ಬಗ್ಗೆ ಅರಿವೇ ಇಲ್ಲದ ಕಳ್ಳರು ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರಿದ್ದ ಕಾರಿಗೆ ಕೈ ಅಡ್ಡಹಾಕಿ ಡ್ರಾಪ್​ ಕೇಳಿದ್ದರು. ಕಳ್ಳರನ್ನು ಹಿಡಿಯಲು ಬಂದ ಪೊಲೀಸರಿಗೆ ತುಪ್ಪ ಜಾರಿ ರೊಟ್ಟಿಗೆ ಬಿದ್ದಂತಾಯಿತು.

 ರಷ್ಯನ್ ಬ್ಯಾಂಕ್‌ಗಳ ವಿರುದ್ಧವೂ ಅಮೆರಿಕ, ಇಯು, ಬ್ರಿಟನ್ ನಿರ್ಬಂಧ

ರಷ್ಯನ್ ಬ್ಯಾಂಕ್‌ಗಳ ವಿರುದ್ಧವೂ ಅಮೆರಿಕ, ಇಯು, ಬ್ರಿಟನ್ ನಿರ್ಬಂಧ

ರಷ್ಯನ್ ಬ್ಯಾಂಕ್‌ಗಳ ವಿರುದ್ಧವೂ ಅಮೆರಿಕ, ಇಯು, ಬ್ರಿಟನ್ ನಿರ್ಬಂಧ

ವಾಷಿಂಗ್ಟನ್: ಆಯ್ದ ರಷ್ಯನ್ ಬ್ಯಾಂಕ್‌ಗಳನ್ನು ಸ್ವಿಫ್ಟ್ ಜಾಗತಿಕ ಹಣಕಾಸು ಮೆಸೇಜಿಂಗ್ ಸಿಸ್ಟಂನಿಂದ ನಿಷೇಧಿಸಲು ಅಮೆರಿಕ, ಯೂರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ ಶನಿವಾರ ನಿರ್ಧರಿಸಿವೆ. ಉಕ್ರೇನ್ ಮೇಲಿನ ದಾಳಿಗೆ ಪ್ರತೀಕಾರವಾಗಿ ರಷ್ಯಾದ ಕೇಂದ್ರೀಯ ಬ್ಯಾಂಕ್ ಮೇಲೂ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಹೊಸ ಸುತ್ತಿನ ಹಣಕಾಸು ನಿರ್ಬಂಧದ ಅಂಗವಾಗಿ ಈ ನಿಷೇಧ ಹೇರಲಾಗಿದೆ. ಈ ಯುದ್ಧದ ಹೊಣೆಯನ್ನು ರಷ್ಯಾ ಹೊರಬೇಕು ಮತ್ತು ಯುದ್ಧವು ಪುಟಿನ್ ಅವರ ಪ್ರಮುಖ ವೈಫಲ್ಯ ಎಂದು ಬಿಂಬಿಸುವ ಸಲುವಾಗಿ ಈ ನಿರ್ಬಂಧಗಳನ್ನು ಹೇರಲಾಗಿದೆ. ಕ್ರೆಮ್ಲಿನ್ ವಶದಲ್ಲಿ ಸುಮಾರು 600 ಕೋಟಿ ಡಾಲರ್ ದಾಸ್ತಾನು ಇರುವ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್ ಮೇಲೆ ನಿರ್ಬಂಧ ಹೇರಲಾಗಿದೆ.

ಶನಿವಾರ ಕೈಗೊಂಡ ಕ್ರಮಗಳಲ್ಲಿ ಮುಖ್ಯವಾಗಿ, ಸ್ವಿಫ್ಟ್‌ನಿಂದ ಹಲವು ರಷ್ಯನ್ ಬ್ಯಾಂಕ್‌ಗಳನ್ನು ನಿಷೇಧಿಸುವುದು ಸೇರಿದೆ. ಇದು ಪ್ರತಿದಿನ ದೊಡ್ಡ ಪ್ರಮಾಣದ ವ್ಯವಹಾರ ನಡೆಸುವ 11 ಸಾವಿರ ಬ್ಯಾಂಕ್‌ಗಳ ಮೇಲೆ ಪರಿಣಾಮ ಬೀರಲಿದೆ. ಜತೆಗೆ ವಿಶ್ವಾದ್ಯಂತ ಇರುವ ಇತರ ಹಣಕಾಸು ಸಂಸ್ಥೆಗಳ ಮೇಲೂ ಪರಿಣಾಮ ಬೀರಲಿದೆ.

ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿ ಪಡೆಗಳಿಗೆ ರಷ್ಯಾ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅಟ್ಲಾಂಟಿಕ್ ಸಾಗರದ ಉಭಯ ಬದಿಯ ಮಿತ್ರದೇಶಗಳು 2014ರಲ್ಲಿ ಸ್ವಿಫ್ಟ್ ನಿಷೇಧ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಆಗ ರಷ್ಯಾ, ಸ್ವಿಫ್ಟ್‌ನಿಂದ ನಿಷೇಧಿಸವುದು ಯುದ್ಧಕ್ಕೆ ಸಮಯ ಎಂದು ಹೇಳಿತ್ತು. ಬಳಿಕ ಮಿತ್ರರಾಷ್ಟ್ರಗಳು ಈ ನಿರ್ಧಾರ ಕೈಬಿಟ್ಟಿದ್ದವು.

ಮಣಿಪುರದ ಮನೆಯೊಂದರಲ್ಲಿ ಸ್ಫೋಟಕ್ಕೆ ಇಬ್ಬರು ಬಲಿ, 5 ಮಂದಿಗೆ ಗಾಯ

ಮಣಿಪುರದ ಮನೆಯೊಂದರಲ್ಲಿ ಸ್ಫೋಟಕ್ಕೆ ಇಬ್ಬರು ಬಲಿ, 5 ಮಂದಿಗೆ ಗಾಯ

ಮಣಿಪುರದ ಮನೆಯೊಂದರಲ್ಲಿ ಸ್ಫೋಟಕ್ಕೆ ಇಬ್ಬರು ಬಲಿ, 5 ಮಂದಿಗೆ ಗಾಯ

ಗುವಾಹತಿ: ಮಣಿಪುರ ವಿಧಾನಸಭಾ ಚುನಾವಣೆ ನಡೆಯುವ ಎರಡು ದಿನ ಮುನ್ನ ಚುರಾಚಂಡಪುರ ಜಿಲ್ಲೆಯ ಮನೆಯೊಂದರಲ್ಲಿ ನಡೆದ ಸ್ಫೋಟದಲ್ಲಿ ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ಗಂಗ್‌ಪಿಮೌಲ್ ಗ್ರಾಮದಲ್ಲಿ ನಡೆದ ಈ ಸ್ಫೋಟಕ್ಕೆ ಸಣ್ಣ ಪಿರಂಗಿ ಕಾರಣ ಎನ್ನಲಾಗಿದೆ.

ಸ್ಫೋಟದಲ್ಲಿ ಮಗು ಸೇರಿದಂತೆ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇವರೆಲ್ಲರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಯಲ್ಲಿ ಮಂಗಮಿನ್‌ಲಾಲ್ (6) ಮತ್ತು ಲಂಗಿನ್‌ಸಗ್ (22) ಎಂಬುವವರು ಮೃತಪಟ್ಟಿದ್ದಾರೆ ಎಂದು ಜಿಲ್ಲೆಯ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣರಾದವರ ಪತ್ತೆಗೆ ಜಾಲ ಬೀಸಿದ್ದಾರೆ. ಜನವರಿ 8ರಂದು ಮಣಿಪುರ ಚುನಾವಣೆ ಘೋಷಣೆಯಾದ ಬಳಿಕ ನಡೆದ ಮೊದಲ ಪ್ರಮುಖ ಘಟನೆ ಇದಾಗಿದೆ. 60 ಸದಸ್ಯಬಲದ ವಿಧಾನಸಭೆಗೆ ಸೋಮವಾರ ಹಾಗೂ ಮುಂದಿನ ಶನಿವಾರ ಹೀಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಎಣಿಕೆ ಕಾರ್ಯ ನಡೆಯಲಿದೆ.


ಉಕ್ರೇನ್‌ನಿಂದ ಮನೆ ತಲುಪಿದ ವಿದ್ಯಾರ್ಥಿಗಳು

ಉಕ್ರೇನ್‌ನಿಂದ ಮನೆ ತಲುಪಿದ ವಿದ್ಯಾರ್ಥಿಗಳು


ಉಕ್ರೇನ್‌ನಿಂದ ಮನೆ ತಲುಪಿದ ವಿದ್ಯಾರ್ಥಿಗಳು

ಹುಬ್ಬಳ್ಳಿ: ಉಕ್ರೇನ್- ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಆದರೆ ವಿಜಯಪುರ ಜಿಲ್ಲೆಯ 13 ವಿದ್ಯಾರ್ಥಿಗಳು ಇನ್ನೂ ಪೂರ್ವ ಯೂರೋಪಿಯನ್ ದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದು, ಸುರಕ್ಷಿತವಾಗಿ ಮನೆ ತಲುಪುವುದನ್ನು ಎದುರು ನೋಡುತ್ತಿದ್ದಾರೆ.

2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮನು ಡಿ.ಎಸ್ ಅವರು ಚೆನ್‌ವಿಸಿ ಎಂಬಲ್ಲಿನ ಬುಕೊವಿನಾ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದರು. ಜತೆಗೆ ಸುದೀಪ್ ಪಾಟೀಲ್ ಕೂಡಾ ದಾವಣಗೆರೆ ಜಿಲ್ಲೆಯವರಾಗಿದ್ದು, ಇಬ್ಬರೂ ಮನೆ ತಲುಪಿದ್ದಾರೆ. ಚೆರ್ನ್‌ವಿಸಿಯಿಂದ ಕೀವ್ ವರೆಗೆ ರೈಲಿನಲ್ಲಿ ಬಂದು ಬಳಿಕ ಭಾರತಕ್ಕೆ ವಾಪಸ್ಸಾಗಿದ್ದಾಗಿ ಅವರು ಹೇಳಿದ್ದಾರೆ.

ಉಕ್ರೇನ್ ರಾಜಧಾನಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದಾಗಿ ಅವರು ವಿವರಿಸಿದ್ದಾರೆ. "ನಮ್ಮ ವಿವಿ ಪೂರ್ವ ಉಕ್ರೇನ್‌ನಲ್ಲಿ ಇದ್ದ ಕಾರಣದಿಂದ ಉದಯ ಯುದ್ಧ ಪ್ರದೇಶದಿಂದ ದೂರದ ಸ್ಥಳ. ಆದ್ದರಿಂದ ಸುರಕ್ಷಿತವಾಗಿ ಕೀವ್‌ಗೆ ತಲುಪಲು ಸಾಧ್ಯವಾಯಿತು" ಎಂದು ಮನು ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಇತರ ಮೂವರು ವಿದ್ಯಾರ್ಥಿಗಳಾದ ಸಯೀದಾ ಹಬೀಬಾ, ಹಬೀದ್ ಅಲಿ ಮತ್ತು ಪ್ರಿಯಾ ಭಾರತಕ್ಕೆ ಆಗಮಿಸುವ ಮಾರ್ಗಮಧ್ಯದಲ್ಲಿದ್ದಾರೆ ಎನ್ನಲಾಗಿದೆ. "ಕೀವ್ ವಿಮಾನ ನಿಲ್ದಾಣ ಮುಚ್ಚಿರುವುದರಿಂದ ಅವರು ಬಸ್ಸಿನಲ್ಲಿ ನೆರೆಯ ರೊಮಾನಿಯಾಗೆ ಆಗಮಿಸಿದ್ದಾರೆ. ರೊಮಾನಿಯಾದಿಂದ ಮುಂಬೈಗೆ ಬರುವ ವಿಮಾನದಲ್ಲಿ ಆಗಮಿಸುತ್ತಿರುವುದಾಗಿ ಮನು ಹೇಳಿದ್ದಾರೆ.

ವಿಜಾಪುರ ಜಿಲ್ಲೆಯ 13 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಇರುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದ್ದಾರೆ. ಈ ಪೈಕಿ ಸ್ನೇಹಾ ಪಾಟೀಲ್ ಎಂಬ ವಿದ್ಯಾರ್ಥಿನಿ ದೆಹಲಿಗೆ ಬಂದಿರುವುದಾಗಿ ವರದಿಯಾಗಿದೆ. ಉಕ್ರೇನ್‌ನಿಂದ ವಿಮಾನ ದರವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬರ ಪೋಷಕರು ದೂರಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಉಕ್ರೇನ್‌ನಲ್ಲೇ ಉಳಿಯುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಷ್ಯಾದಿಂದ ಉಕ್ರೇನ್ ಆಕ್ರಮಣ: ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರವುಳಿದ ಭಾರತ.

ರಷ್ಯಾದಿಂದ ಉಕ್ರೇನ್ ಆಕ್ರಮಣ: ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರವುಳಿದ ಭಾರತ.


ರಷ್ಯಾದಿಂದ ಉಕ್ರೇನ್ ಆಕ್ರಮಣ: ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರವುಳಿದ ಭಾರತ. 

ಹೊಸದಿಲ್ಲಿ: ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುವ ಅಮೆರಿಕ ಪ್ರಾಯೋಜಿತ ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್ಎಸ್ಸಿ)ಯ ನಿರ್ಣಯದ ಮೇಲಿನ ಮತದಾನದಿಂದ ಭಾರತವು ಶನಿವಾರ ದೂರವುಳಿದಿದೆ. ಚೀನಾ ಮತ್ತು ಯುಎಇ ಕೂಡ ಮತದಾನದಿಂದ ದೂರವಿದ್ದವು. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆ ಏಕೈಕ ಮಾರ್ಗವಾಗಿದೆ ಎಂದು ಭಾರತ ಸರಕಾರವು ಹೇಳಿದೆ.

ಅಮೆರಿಕ,ಬ್ರಿಟನ್,ಫ್ರಾನ್ಸ್,ಘಾನಾ,ಕೆನ್ಯಾ,ಗಬನ್,ಆಯರ್ಲಂಡ್,ಅಲ್ಬೇನಿಯಾ,ನಾರ್ವೆ,ಮೆಕ್ಸಿಕೊ ಮತ್ತು ಬ್ರಾಝಿಲ್ ನಿರ್ಣಯವನ್ನು ಬೆಂಬಲಿಸಿದ್ದವಾದರೂ ರಷ್ಯಾ ತನ್ನ ವಿಟೋ ಅಧಿಕಾರವನ್ನು ಚಲಾಯಿಸಿದ್ದರಿಂದ ನಿರ್ಣಯವು ಅಂಗೀಕಾರಗೊಳ್ಳಲಿಲ್ಲ.

ಅಮೆರಿಕ ಮತ್ತು ಅಲ್ಬೇನಿಯಾ ನಿರ್ಣಯವನ್ನು ಮಂಡಿಸಿದ್ದು, ಆಸ್ಟ್ರೇಲಿಯಾ, ಎಸ್ಟೋನಿಯಾ,ಫಿನ್ಲಂಡ್,ಜಾರ್ಜಿಯಾ,ಜರ್ಮನಿ,ಇಟಲಿ,ಲೀಚೆನ್ಸ್ಟೀನ್,ಲಕ್ಸೆಂಬರ್ಗ್,ಲಿಥುವಾನಿಯಾ,ನ್ಯೂಝಿಲ್ಯಾಂಡ್,ನಾರ್ವೆ,ಪೋಲಂಡ್,ರೊಮೇನಿಯಾ ಮತ್ತು ಬ್ರಿಟನ್ ಸೇರಿದಂತೆ ಇತರ ಹಲವಾರು ದೇಶಗಳು ನಿರ್ಣಯವನ್ನು ಸಹಪ್ರಾಯೋಜಿಸಿದ್ದವು.

ಯುಎನ್ಎಸ್ಸಿ ನಿರ್ಣಯವು ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ ಉಕ್ರೇನ್‌ನ ಗಡಿಗಳ ಒಳಗೆ ಅದರ ಸಾರ್ವಭೌಮತೆ,ಸ್ವಾತಂತ್ರ,ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪುನರುಚ್ಚರಿಸಿತ್ತು.

ಉಕ್ರೇನ್ ವಿರುದ್ಧ ರಷ್ಯದ ಆಕ್ರಮಣವನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದ ನಿರ್ಣಯವು,ರಷ್ಯಾ ಉಕ್ರೇನ್ ವಿರುದ್ಧ ತನ್ನ ಬಲಪ್ರಯೋಗವನ್ನು ತಕ್ಷಣ ನಿಲ್ಲಿಸಬೇಕು ಮತ್ತು ವಿಶ್ವಸಂಸ್ಥೆಯ ಯಾವುದೇ ಸದಸ್ಯ ರಾಷ್ಟ್ರದ ವಿರುದ್ಧ ಕಾನೂನುಬಾಹಿರ ಬೆದರಿಕೆ ಅಥವಾ ಬಲ ಪ್ರಯೋಗದಿಂದ ದೂರವುಳಿಯಬೇಕು ಎಂದು ಒತ್ತಿ ಹೇಳಿತ್ತು.

ರಷ್ಯಾ ತಕ್ಷಣ ಉಕ್ರೇನ್‌ನಿಂದ ತನ್ನ ಮಿಲಿಟರಿ ಪಡೆಗಳನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕು ಎಂದು ಹೇಳಿದ್ದ ನಿರ್ಣಯವು,ಉಕ್ರೇನ್‌ನ ಡೊನೆಸ್ಕ್ ಮತ್ತು ಲುಹನ್ಸ್ಕ್‌ಗಳ ಕೆಲವು ಪ್ರದೇಶಗಳಿಗೆ ಮಾನ್ಯತೆ ನೀಡಿರುವ ತನ್ನ ನಿರ್ಧಾರವನ್ನು ಬೇಷರತ್ತಾಗಿ ಹಿಂದೆಗೆದುಕೊಳ್ಳುವಂತೆ ರಷ್ಯಾಕ್ಕೆ ಸೂಚಿಸಿತ್ತು.

ರಷ್ಯಾದ ಕ್ರಮಗಳನ್ನು ಖಂಡಿಸಲು ನಿರ್ಣಯದಲ್ಲಿ ಬಳಸಲಾಗಿದ್ದ ಕಟುವಾದ ಭಾಷೆಯನ್ನು ಭಾರತವು ಅನುಮೋದಿಸಲಿಲ್ಲ. ಭಾರತವು ಎರಡೂ ಕಡೆಗಳಲ್ಲಿ ವ್ಯೂಹಾತ್ಮಕ ಪಾಲುದಾರರನ್ನು ಹೊಂದಿರುವುದರಿಂದ ಅಮೆರಿಕ ನೇತೃತ್ವದ ಪಾಶ್ಚಾತ್ಯ ಬಣ ಮತ್ತು ರಷ್ಯಾ ಜೊತೆ ಸಮತೋಲನವನ್ನು ಕಾಯ್ದುಕೊಳ್ಳಲು ಅದು ಬಯಸುತ್ತದೆ.ಭಾರತವು ಮತದಾನದಿಂದ ದೂರವಿದ್ದುದು ಯಾವುದೇ ಅಚ್ಚರಿಯನ್ನುಂಟು ಮಾಡಿಲ್ಲ. 

ಭಾರತವು ಹಿಂದಿನಿಂದಲೂ ರಷ್ಯಾ ಮತ್ತು ಪಾಶ್ಚಿಮಾತ್ಯ ಜಗತ್ತಿನ ನಡುವೆ ಸಮತೋಲನವನ್ನು ಕಾಯ್ದುಕೊಂಡು ಬಂದಿದೆ. ಜ.31ರಂದು ಉಕ್ರೇನ್ ವಿಷಯವನ್ನು ಚರ್ಚಿಸಬೇಕೇ ಎನ್ನುವುದರ ಮೇಲೆ ಕಾರ್ಯವಿಧಾನ ಮತದಾನದಿಂದ ಭಾರತವು ದೂರವಿತ್ತು. ಆದರೆ ಚೀನಾ ಜ.31ರಂದು ವಿರುದ್ಧ ಮತವನ್ನು ಚಲಾಯಿಸಿದ್ದರಿಂದ ಮತ್ತು ಅದು ರಷ್ಯಾದ ನಿಲುವನ್ನು ಪ್ರತಿಧ್ವನಿಸುತ್ತದೆ ಎಂದು ಪರಿಗಣಿಸಲಾಗಿದ್ದರಿಂದ ಅದು ಶನಿವಾರದ ಮತದಾನದಿಂದ ದೂರವಿದ್ದುದು ಅಚ್ಚರಿಯನ್ನು ಮೂಡಿಸಿದೆ.ಮತದಾನದಿಂದ ದೂರವುಳಿದಿದ್ದಕ್ಕೆ ಭಾರತವು ವಿವರಣೆಯನ್ನು ನೀಡಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಅವರು ಹೇಳಿಕೆಯೊಂದನ್ನು ಹೊರಡಿಸಿ, ಉಕ್ರೇನ್‌ನಲ್ಲಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತವು ತೀವ್ರವಾಗಿ ಕಳವಳಗೊಂಡಿದೆ. ಹಿಂಸಾಚಾರವನ್ನು ನಿಲ್ಲಿಸುವಂತೆ ತನ್ನ ಮನವಿಯನ್ನು ಭಾರತವು ಪುನರುಚ್ಚರಿಸಿದೆ. ಮಾನವ ಜೀವಗಳನ್ನು ಬಲಿಗೊಟ್ಟು ಪರಿಹಾರವನ್ನು ಕಂಡುಕೊಳ್ಳಲು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸಿದರು. 

ಹೆಚ್ಚಿನವರು ವಿದ್ಯಾರ್ಥಿಗಳೇ ಸೇರಿದಂತೆ ಉಕ್ರೇನ್‌ನಲ್ಲಿರುವ 16,000ಕ್ಕೂ ಅಧಿಕ ಭಾರತೀಯ ಪ್ರಜೆಗಳ ಯೋಗಕ್ಷೇಮ ಮತ್ತು ಭದ್ರತೆಯ ಬಗ್ಗೆ ಭಾರತವು ತೀವ್ರ ಕಳವಳಗೊಂಡಿದೆ ಎಂದು ಹೇಳಿದ ತಿರುಮೂರ್ತಿ,ಸಮಕಾಲೀನ ಜಾಗತಿಕ ಸುವ್ಯವಸ್ಥೆಯು ವಿಶ್ವಸಂಸ್ಥೆಯ ಸನದು,ಅಂತರರಾಷ್ಟ್ರೀಯ ಕಾನೂನು ಹಾಗೂ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವದ ಮೇಲೆ ರೂಪುಗೊಂಡಿದೆ. ಮುಂದಿನ ರಚನಾತ್ಮಕ ಮಾರ್ಗವನ್ನು ಕಂಡುಕೊಳ್ಳಲು ಎಲ್ಲ ಸದಸ್ಯ ರಾಷ್ಟ್ರಗಳು ಈ ತತ್ವಗಳನ್ನು ಗೌರವಿಸಬೇಕು ಎಂದು ತಿಳಿಸಿದರು.

ಹೇಳಿಕೆಯಲ್ಲಿ ರಾಜತಾಂತ್ರಿಕತೆಯನ್ನು ಪ್ರತಿಪಾದಿಸಿದ ತಿರುಮೂರ್ತಿ,‘ಈ ಕ್ಷಣಕ್ಕೆ ಎಷ್ಟೇ ಬೆದರಿಕೆಯಿರುವಂತೆ ಕಂಡು ಬರುತ್ತಿದ್ದರೂ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆ ಏಕೈಕ ಮಾರ್ಗವಾಗಿದೆ. ರಾಜತಾಂತ್ರಿಕತೆಯ ಮಾರ್ಗವನ್ನು ಕೈಬಿಟ್ಟಿರುವುದು ವಿಷಾದನೀಯವಾಗಿದೆ. ನಾವು ಅದಕ್ಕೆ ಮರಳಲೇಬೇಕು. ಈ ಎಲ್ಲ ಕಾರಣಗಳಿಂದಾಗಿ ಭಾರತವು ಮತದಾನದಿಂದ ದೂರವುಳಿಯುವುದನ್ನು ಆಯ್ಕೆ ಮಾಡಿಕೊಂಡಿತ್ತು ’ಎಂದು ವಿವರಿಸಿದರು.

ಯುಎನ್ಎಸ್ಸಿ ಶನಿವಾರ ನಸುಕಿನಲ್ಲಿ ನಿರ್ಣಯವನ್ನು ಕೈಗೆತ್ತಿಕೊಳ್ಳುವ ಮುನ್ನ ಭಾರತವು ಪಾಶ್ಚಾತ್ಯ ಜಗತ್ತು ಮತ್ತು ರಷ್ಯಾದ ನಡುವಿನ ರಾಜತಾಂತ್ರಿಕ ಗೋಜಲಿನಲ್ಲಿ ಸಿಕ್ಕಿಕೊಂಡಿತ್ತು. ಗುರುವಾರ ತಡರಾತ್ರಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾರೊವ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ಉಕ್ರೇನ್ ಬಿಕ್ಕಟ್ಟನ್ನು ಬಗೆಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಒತ್ತಿ ಹೇಳಿದ್ದರು. ರಷ್ಯದ ಪಡೆಗಳು ಕೀವ್ ನಗರದ ಹೆಬ್ಬಾಗಿಲನ್ನು ತಲುಪುತ್ತಿದ್ದಂತೆ ಜೈಶಂಕರ್ ಗೆ ದೂರವಾಣಿ ಕರೆಯನ್ನು ಮಾಡಿದ್ದ ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ಪರಿಸ್ಥಿತಿಯ ಬಗ್ಗೆ ತನ್ನ ‘ವೌಲ್ಯಮಾಪನ’ವನ್ನು ಹಂಚಿಕೊಂಡಿದ್ದರು.

Thursday, 24 February 2022

ಎಸ್ಸೆಸ್ಸೆಫ್ ದ.ಕ ಜಿಲ್ಲಾ ವತಿಯಿಂದ ಪ್ರತಿಭಟನೆ

ಎಸ್ಸೆಸ್ಸೆಫ್ ದ.ಕ ಜಿಲ್ಲಾ ವತಿಯಿಂದ ಪ್ರತಿಭಟನೆ


ಎಸ್ಸೆಸ್ಸೆಫ್ ದ.ಕ ಜಿಲ್ಲಾ ವತಿಯಿಂದ ಪ್ರತಿಭಟನೆ

ಮಂಗಳೂರು: ಕೋರ್ಟ್ ತೀರ್ಪನ್ನು ದುರ್ವ್ಯಾಖ್ಯಾನಗೊಳಿಸಿ ಶಿರವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ತಡೆಯುವ ಹುನ್ನಾರದ ವಿರುದ್ಧ ಪ್ರತಿಭಟನೆಯು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ (ವೆಸ್ಟ್ ಹಾಗೂ ಈಸ್ಟ್) ವತಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಯ್ಯದ್ ಮದಕ ತಂಙಲ್ ದುಆ ನೆರವೇರಿಸಿದರು.ಎಸ್ಸೆಸ್ಸೆಫ್ ದ.ಕ ಈಸ್ಟ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ಸ್ವಾಗತಿಸಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಉಧ್ಘಾಟಿಸಿದರು.

ಎಸ್ಸೆಸ್ಸೆಫ್ ದ.ಕ ಈಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಮುನ್ನುಡಿ ಭಾಷಣ ಮಾಡಿದರು.ವೆಸ್ಟ್ ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವುರವರ  ಮಾತನಾಡಿ, ಸಿರಾಜುದ್ದೀನ್ ಸಖಾಫಿ ಕನ್ಯಾನ ರವರು ಮುಖ್ಯ ಪ್ರಭಾಷಣ ಮಾಡಿದರು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್

ಹಾಗೂ ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಅಕೀಲ್ ಹಸನ್ ಮಾತನಾಡಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ರಾಜ್ಯ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರಲಿ ಕಾಟಿಪಳ್ಳ,ಕೋಶಾಧಿಕಾರಿ ಇಕ್ಬಾಲ್ ಮಧ್ಯನಡ್ಕ ಸಹಿತ ರಾಜ್ಯ ಹಾಗೂ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಿರವಸ್ತ್ರದ ಹಕ್ಕನ್ನು ಬಲವಂತವಾಗಿ ಕಳಚಲು ಅನಿವಾರ್ಯಪಡಿಸದಂತೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಲು ಹಾಗೂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನೌಫಲ್ ಫರೀದ್ ನಗರ ನಿರೂಪಿಸಿ,ವೆಸ್ಟ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಹಮೀದ್ ತಲಪಾಡಿ ಧನ್ಯವಾದ ಸಮರ್ಪಿಸಿದರು.

ಸ್ಟಾಕ್ ಮಾರ್ಕೆಟ್ ಹಸ್ತಕ್ಷೇಪ : ಆನಂದ್ ಸುಬ್ರಮಣಿಯನ್ ನನ್ನು ಬಂಧಿಸಿದ ಸಿಬಿಐ

ಸ್ಟಾಕ್ ಮಾರ್ಕೆಟ್ ಹಸ್ತಕ್ಷೇಪ : ಆನಂದ್ ಸುಬ್ರಮಣಿಯನ್ ನನ್ನು ಬಂಧಿಸಿದ ಸಿಬಿಐ

ಸ್ಟಾಕ್ ಮಾರ್ಕೆಟ್ ಹಸ್ತಕ್ಷೇಪ : ಆನಂದ್ ಸುಬ್ರಮಣಿಯನ್ ನನ್ನು ಬಂಧಿಸಿದ ಸಿಬಿಐ

ಹೊಸದಿಲ್ಲಿ: ಸ್ಟಾಕ್ ಮಾರ್ಕೆಟ್ ಹಸ್ತಕ್ಷೇಪ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸುಬ್ರಮಣಿಯನ್ ನನ್ನು ಸಿಬಿಐ ಗುರುವಾರ ತಡರಾತ್ರಿ ಬಂಧಿಸಿದೆ.

ಸೆಬಿ ವರದಿಯನ್ನು ಆಧರಿಸಿ  ಈ ಬಂಧನವನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಿಬಿಐ ಆನಂದ್ ನನ್ನು ಬಂಧಿಸಲು ನಿರ್ಧರಿಸುವ ಮೊದಲು  ಚೆನ್ನೈನಲ್ಲಿ ದಿನಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನಂದ್ ಸುಬ್ರಮಣಿಯನ್  ಮೊದಲು 2013 ರಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ ಎಸ್ ಇ) ನಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ನೇಮಕಗೊಂಡರು ಹಾಗೂ  ನಂತರ 2015 ರಲ್ಲಿ ಎಂಡಿ ಚಿತ್ರಾ ರಾಮಕೃಷ್ಣ ಅವರು ಎನ್ ಎಸ್ ಇ ಯ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿ ಭಡ್ತಿ ನೀಡಿದರು.

ಹಿಮಾಲಯದಲ್ಲಿ ನೆಲೆಸಿರುಸುವ 'ಯೋಗಿ'ಯ ಪ್ರಭಾವದಿಂದಾಗಿ  ಆನಂದ್ ಸುಬ್ರಮಣಿಯನ್ ಅವರ ನೇಮಕವಾಗಿದೆ ಎಂದು ಸಿಬಿಐ  ತನ್ನ ತನಿಖೆಯಲ್ಲಿ ಕಂಡುಕೊಂಡಿದೆ.

2016 ರಲ್ಲಿ ಅಕ್ರಮಗಳ ಆರೋಪಗಳು ಬಂದ ನಂತರ ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು  ಸುಬ್ರಮಣಿಯನ್ ತೊರೆದರು.


ಉಕ್ರೇನ್ ನ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ವಶಪಡಿಸಿಕೊಂಡ ರಶ್ಯಾ

ಉಕ್ರೇನ್ ನ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ವಶಪಡಿಸಿಕೊಂಡ ರಶ್ಯಾ

ಉಕ್ರೇನ್ ನ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ವಶಪಡಿಸಿಕೊಂಡ ರಶ್ಯಾ

ಕೀವ್: ಉಕ್ರೇನ್‌ನ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ. "ರಶ್ಯಾದ ಅರ್ಥಹೀನ ದಾಳಿಯ ಬಳಿಕ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ಸುರಕ್ಷಿತವಾಗಿದೆ ಎಂದು ಹೇಳುವುದು ಅಸಾಧ್ಯ" ಎಂದು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ

ನೌಕಾ ದಳ, ವಾಯು ಸೇನೆ ಮತ್ತು ಭೂಸೇನೆ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಶ್ಯಾ ಪಡೆಗಳು ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿದೆ. ಇದು ಎರಡನೇ ಮಹಾಯುದ್ಧದ ನಂತರದ ಯುರೋಪಿಯನ್ ರಾಷ್ಟ್ರವೊಂದರ ಮೇಲೆ ನಡೆದ ಅತಿದೊಡ್ಡ ದಾಳಿ ಎನ್ನಲಾಗಿದೆ.

ಗುರುವಾರ ಉಕ್ರೇನ್‌ ಗಡಿ ದಾಟುವ ಮೊದಲೇ ಚೆರ್ನೋಬಿಲ್‌ನಲ್ಲಿ ರಶ್ಯಾದ ಕೆಲವು ಮಿಲಿಟರಿ ಪಡೆಗಳು ಜಮಾವಣೆ ಆಗಿದ್ದವು. ನ್ಯಾಟೊಗೆ ಮಿಲಿಟರಿ ಹಸ್ತಕ್ಷೇಪ ಮಾಡದಂತೆ ಸೂಚಿಸಲು ಚೆರ್ನೋಬಿಲ್ ಪರಮಾಣು ರಿಯಾಕ್ಟರ್ ಅನ್ನು ನಿಯಂತ್ರಿಸಲು ರಶ್ಯಾ ಬಯಸಿದೆ ಎಂದು ರಶ್ಯಾದ ಭದ್ರತಾ ಮೂಲವು ತಿಳಿಸದ್ದಾಗಿ ವರದಿಯಾಗಿದೆ.

ಸಂಘರ್ಷದಲ್ಲಿ ಮೊದಲ ದಿನ 137 ಮಂದಿ ಪ್ರಾಣ ತೆತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. 

ರಶ್ಯಾ ದಾಳಿಯನ್ನು ಅಮೆರಿಕ ಬಲವಾಗಿ ಖಂಡಿಸಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪುಟಿನ್ ತೀರಾ ಕೀಳು ವ್ಯಕ್ತಿ ಎಂದು ಬೈಡನ್ ವಾಗ್ದಾಳಿ ನಡೆಸಿದ್ದಾರೆ. ರಶ್ಯಾ ಉಕ್ರೇನ್ ಸರ್ಕಾರವನ್ನು ವಜಾ ಮಾಡಲು ಹುನ್ನಾರ ನಡೆಸಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ರಶ್ಯಾ ಅಧ್ಯಕ್ಷ ಪುಟಿನ್‌ಗೆ ಕರೆಮಾಡಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ

ರಶ್ಯಾ ಅಧ್ಯಕ್ಷ ಪುಟಿನ್‌ಗೆ ಕರೆಮಾಡಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ


ರಶ್ಯಾ ಅಧ್ಯಕ್ಷ ಪುಟಿನ್‌ಗೆ ಕರೆಮಾಡಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ, ಉಕ್ರೇನ್‌ನಲ್ಲಿ ಇಂದು ಬೆಳಿಗ್ಗೆ ಪ್ರಾರಂಭವಾದ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದರು ಎಂದು ndtv.com ವರದಿ ಮಾಡಿದೆ. ಮಧ್ಯಸ್ಥಿಕೆಗಾಗಿ ಭಾರತಕ್ಕೆ ಉಕ್ರೇನ್ ತುರ್ತು ಮನವಿ ಮಾಡಿದ ಗಂಟೆಗಳ ನಂತರ ಈ ಸಂಭಾಷಣೆ ನಡೆಯಿತು ಎನ್ನಲಾಗಿದೆ. "ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಸುವ ಕುರಿತು ಪ್ರಧಾನಿ ಮೋದಿ ಕರೆ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.

"ರಷ್ಯಾ ಮತ್ತು ನ್ಯಾಟೋ ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಸಂಭಾಷಣೆಯ ಮೂಲಕ ಮಾತ್ರ ಪರಿಹರಿಸಬಹುದು" ಎಂದು ಅವರು ಹೇಳಿದ್ದು, ಬಳಿಕ ಉಕ್ರೇನ್‌ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿಗೆ ವಿವರಿಸಿದರು ಎಂದು ವರದಿ ತಿಳಿಸಿದೆ.

ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ, ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದ ಕಳವಳಗಳನ್ನು ಪ್ರಧಾನಿ ಮೋದಿ ಪುಟಿನ್‌ ರೊಂದಿಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ.


ರಷ್ಯಾ- ಉಕ್ರೇನ್ ಸಂಘರ್ಷ: ಮೊದಲ ದಿನ 137 ಮಂದಿ ಮೃತ್ಯು

ರಷ್ಯಾ- ಉಕ್ರೇನ್ ಸಂಘರ್ಷ: ಮೊದಲ ದಿನ 137 ಮಂದಿ ಮೃತ್ಯು


ರಷ್ಯಾ- ಉಕ್ರೇನ್ ಸಂಘರ್ಷ: ಮೊದಲ ದಿನ 137 ಮಂದಿ ಮೃತ್ಯು

ಕೀವ್ (ಉಕ್ರೇನ್): ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆದಿರುವ ಸಂಘರ್ಷದಲ್ಲಿ ಮೊದಲ ದಿನ 137 ಮಂದಿ ಪ್ರಾಣ ತೆತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಗುರುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸಿದ್ದರು. ಇದರಿಂದಾಗಿ ಕನಿಷ್ಠ 40 ಮಂದಿ ಉಕ್ರೇನ್ ಸೈನಿಕರು ಮತ್ತು 10 ಮಂದಿ ನಾಗರಿಕರು ಹತರಾಗಿದ್ದರು.

ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನನ್ನು ಏಕಾಂಗಿಯಾಗಿ ಮಾಡಲಾಗಿದೆ ಎಂದು ಅಧ್ಯಕ್ಷ ಝೆಲೆನ್‌ಸ್ಕಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಚರ್ನೋಬಿಲ್ ಅಣು ವಿದ್ಯುತ್ ಘಟಕವನ್ನು ರಷ್ಯಾ ವಶಪಡಿಸಿಕೊಂಡಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಹೇಳಿದ್ದಾರೆ.

ಉಕ್ರೇನ್‌ನಾದ್ಯಂತ ಹಲವು ಮಿಲಿಟರಿ ಸೌಲಭ್ಯಗಳ ಮೇಲೆ ರಷ್ಯಾ ವಾಯುದಾಳಿ ನಡೆಸಿದ್ದು, ಸೇನಾಪಡೆಗಳು ಉತ್ತರದಿಂದ ದಕ್ಷಿಣ ಮತ್ತು ಪೂರ್ವಕ್ಕೆ ಚಲಿಸಿವೆ. ಈ ಬೆಳವಣಿಗೆಯನ್ನು ಪಾಶ್ಚಿಮಾತ್ಯ ನಾಯಕರು ಖಂಡಿಸಿದ್ದು, ರಷ್ಯಾ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧ ಹೇರುವುದಾಗಿ ಎಚ್ಚರಿಸಿದ್ದಾರೆ.

ರಷ್ಯಾ ದಾಳಿಯನ್ನು ಅಮೆರಿಕ ಬಲವಾಗಿ ಖಂಡಿಸಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪುಟಿನ್ ತೀರಾ ಕೀಳು ವ್ಯಕ್ತಿ ಎಂದು ಬೈಡೇನ್ ವಾಗ್ದಾಳಿ ನಡೆಸಿದ್ದಾರೆ. ರಷ್ಯಾ ಉಕ್ರೇನ್ ಸರ್ಕಾರವನ್ನು ವಜಾ ಮಾಡಲು ಹುನ್ನಾರ ನಡೆಸಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಮುಚ್ಚಲ್ಪಟ್ಟಿರುವ ಚರ್ನೋನಿಲ್ ಅಣುಸ್ಥಾವರದ ಸಿಬ್ಬಂದಿಯನ್ನು ರಷ್ಯಾ ಪಡೆಗಳು ಒತ್ತೆಯಾಳುಗಳಾಗಿ ಸೆರೆಹಿಡಿದಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದು, ಇದನ್ನು ಶ್ವೇತಭವನ ತೀವ್ರವಾಗಿ ಖಂಡಿಸಿದೆ. ಏತನ್ಮಧ್ಯೆ ರಷ್ಯಾ ದಾಳಿಯನ್ನು ಖಂಡಿಸಲು ಚೀನಾ ನಿರಾಕರಿಸಿದ್ದು, ಉಭಯ ಪಕ್ಷಗಳು ಸಂಯಮ ಪ್ರದರ್ಶಿಸಬೇಕು ಎಂದು ಆಗ್ರಹಿಸಿದೆ.

ರಷ್ಯಾ ದಾಳಿಯನ್ನು ಖಂಡಿಸಿರುವ ಫ್ರಾನ್ಸ್, ನ್ಯಾಟೊ ಅಣ್ವಸ್ತ್ರಗಳನ್ನು ಹೊಂದಿದೆ ಎನ್ನುವುದನ್ನು ರಷ್ಯಾ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದೆ. ಬ್ರಿಟನ್ ಕೂಡಾ ರಷ್ಯಾ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ದೇಶದೊಳಕ್ಕೆ ರಷ್ಯಾದ ಏರೊಫ್ಲೋಟ್ ವಿಮಾನಗಳ ಪ್ರವೇಶವನ್ನು ನಿಷೇಧಿಸಿದೆ. ಹಣಕಾಸು ವ್ಯವಸ್ಥೆಯಿಂದ ರಷ್ಯಾದ ಬ್ಯಾಂಕ್‌ಗಳನ್ನು ಹೊರಗಿಡಲಾಗುವುದು ಎಂದು ಪ್ರಧಾನಿ ಜಾನ್ಸನ್ ಹೇಳಿದ್ದಾರೆ.


 


 ಫೆಬ್ರವರಿ 26 ರಂದು ಬದ್ರುಸ್ಸಾದಾತ್ ಕಡಲುಂಡಿ ತಂಙಳ್ ಸಜಿಪ-ಚಟ್ಟೆಕ್ಕಲ್ ಗೆ

ಫೆಬ್ರವರಿ 26 ರಂದು ಬದ್ರುಸ್ಸಾದಾತ್ ಕಡಲುಂಡಿ ತಂಙಳ್ ಸಜಿಪ-ಚಟ್ಟೆಕ್ಕಲ್ ಗೆ


 ಫೆಬ್ರವರಿ 26 ರಂದು ಬದ್ರುಸ್ಸಾದಾತ್ ಕಡಲುಂಡಿ ತಂಙಳ್ ಸಜಿಪ-ಚಟ್ಟೆಕ್ಕಲ್ ಗೆ 

ಬಿ.ಸಿ.ರೋಡ್: ಸಜೀಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಫೆಬ್ರವರಿ 25, 26ರಂದು ಅಸ್ಸಯ್ಯದ್ ಮುಷ್ತಾಕುರ್ರಹ್ಮಾನ್ ತಂಙಳ್ ರವರ ನೇತ್ರತ್ವದಲ್ಲಿ 10 ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು. ಪ್ರಸ್ತುತ ಕಾರ್ಯಕ್ರಮದ ಎರಡನೇ ದಿನ 26ರಂದು) ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ಪ್ರತಿಷ್ಠಿತ ಮಅದಿನ್ ಅಕಾಡೆಮಿ ಸಂಸ್ಥೆಯ ಸ್ಥಾಪಕ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಙಳ್ ಅವರು ಆಗಮಿಸಲಿದ್ದಾರೆ.                                                              

   ಫೆಬ್ರವರಿ 25 ರಂದು ಮುಹಮ್ಮದ್ ಅಲಿ ಮದನಿ ಕಲ್ತರ ಕೋಝಿಕೋಡ್ ಅವರು ಜಿಸ್ತಿಯಾ ಖುತಿಬಿಯ್ಯತ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಧಾರ್ಮಿಕ ಮತಪಂಡಿತರು ಹಾಗೂ ಸಾಮಾಜಿಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಲಾಲಿಯ್ಯ ಜುಮ್ಮಾ ಮಸೀದಿ ಚಟ್ಟೆಕಲ್ ಇದರ ಆಡಳಿತ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಹೊಸ ರೂಪ: ಪೂರ್ವಭಾವಿ ಸಭೆಯಲ್ಲಿ ಸಿಎಂ ಸ್ಪಷ್ಟನೆ

ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಹೊಸ ರೂಪ: ಪೂರ್ವಭಾವಿ ಸಭೆಯಲ್ಲಿ ಸಿಎಂ ಸ್ಪಷ್ಟನೆ


 ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಹೊಸ ರೂಪ: ಪೂರ್ವಭಾವಿ ಸಭೆಯಲ್ಲಿ ಸಿಎಂ ಸ್ಪಷ್ಟನೆ

ಬೆಂಗಳೂರು; 2022-23 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

2022-23 ನೇ ಸಾಲಿನ  ರಾಜ್ಯ ಬಜೆಟ್ ಕುರಿತು ವಿಧಾನಸೌಧದಲ್ಲಿಂದು ನಡೆದ  ಇಲಾಖಾವಾರು ಆಯವ್ಯಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಬಕಾರಿ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಯಾವುದೆ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಾಗ ಬದಲಾವಣೆ ಆಗಲು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ವಿಚಾರಣೆ ಮಾಡಿ ಸರಿಪಡಿಸುವುದು ಎಲ್ಲರ ಕೆಲಸ ಎಂದರು.

ಇಲಾಖೆ ಬಗ್ಗೆ ಸಹಾನೂಭೂತಿ ಇದೆ. ಹಾಗೇಯೆ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಜೆಟ್‌ನಲ್ಲಿ ಇಲಾಖೆಗೆ ಹೊಸ ಸ್ವೂರಪ ನೀಡಲಾಗುವುದು. ಆರ್ಥಿಕ ಮಿತಿಗಳನ್ನು ನೋಡಿಕೊಂಡು ನೌಕರರಿಗೆ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದಲ್ಲೆದೆ ಕಾನೂನುಗಳನ್ನು ಬದಲಾಯಿಸುವ ಸಂಬಂಧ ಗಮನಹರಿಸಲಾಗುವುದು ಎಂದರು.

ರಾಜ್ಯದಲ್ಲಿ ನಕಲಿ ಮದ್ಯ ತಯಾರಿಕೆ ಮತ್ತು ಹೊರ ರಾಜ್ಯದಲ್ಲಿ ಆಗಮಿಸುವ ನಕಲಿ ಮದ್ಯ ತಡೆಗೆ ಸರ್ಕಾರ ಉಗ್ರ ಕ್ರಮ ಕೈಗೊಂಡಿದೆ. ಇದರಿಂದ ಸರ್ಕಾರಕ್ಕೆ ಆದಾಯ ಕೂಡ ಬರುತ್ತದೆ. ನಕಲಿ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಮುಲಾಜಿಲ್ಲದೇ ಅಮಾನತು ಮಾಡುವಂತೆ ಇಲಾಖಾ ಆಯುಕ್ತರಿಗೆ ಇದೇ ಸಂದರ್ಭದಲ್ಲಿ ಸಿಎಂ ಸೂಚಿಸಿದರು.

ಸಿಎಲ್ 7, ಸಿಎಲ್ 9 ವಿಚಾರದಲ್ಲಿ ಸಾಕಷ್ಟು ದೂರುಗಳು ಬಂದಿವೆ.ಇದೆಲ್ಲವನ್ನೂ ಸರಿಪಡಿಸುವ ಕೆಲಸ ಆಗಬೇಕು. ವ್ಯಾಪಾರ, ಆದಾಯ ಮೂರು ಮುಖ್ಯ ಅಂಶಗಳನ್ನು ಇಟ್ಟುಕೊಂಡು ಕೆಲಸಮಾಡುವಂತೆ ಸೂಚಿಸಿದರಲ್ಲದೇ ಸಮಯ ನೀಡಿದರೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

Wednesday, 23 February 2022

ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಹೇಳಿದ ಬೆಂಗಳೂರಿನ ಕಾಲೇಜು

ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಹೇಳಿದ ಬೆಂಗಳೂರಿನ ಕಾಲೇಜು

ಇದು ಸಿಖ್ ಧರ್ಮಕ್ಕೆ ಅವಮಾನ, ಮುಸ್ಲಿಂ ವಿದ್ಯಾರ್ಥಿನಿಯರಿಗೂ ಶಿರವಸ್ತ್ರಕ್ಕೆ ಅವಕಾಶ ಕೊಡಬೇಕು : ಗುರುಚರಣ್ ಸಿಂಗ್

ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಹೇಳಿದ ಬೆಂಗಳೂರಿನ ಕಾಲೇಜು

ಬೆಂಗಳೂರು: ರಾಜ್ಯದ ಹಲವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದ ವಿವಾದದ ಬೆನ್ನಲ್ಲೇ ಇದೀಗ  ನಗರದ ಕಾಲೇಜೊಂದರಲ್ಲಿ ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆದು ಬರಲು ಹೇಳಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪೆ.10ರಂದು ಹೈಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಪಾಲಿಸಬೇಕಾಗಿರುವುದರಿಂದ  ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ  ಅಮೃತಧಾರಿ ( ದೀಕ್ಷೆ ಪಡೆದ ) ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆದು ಬರುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಕಾಲೇಜು ನಮ್ಮ ಜೊತೆ ಯಾವುದೇ ರೀತಿ ತಾರತಮ್ಯ ಮಾಡಿಲ್ಲ ಎಂದು ಹೇಳಿರುವ ವಿದ್ಯಾರ್ಥಿನಿಯ ಪೋಷಕರು ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಹೈಕೋರ್ಟ್ ಹಾಗು ಸರಕಾರ ಜನರಿಗೆ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

“ವಿದ್ಯಾರ್ಥಿನಿಯು ಪೇಟ ತೊಟ್ಟಿರುವ ವಿಚಾರದಲ್ಲಿ ನಮಗೆ  ಯಾವುದೇ ಸಮಸ್ಯೆಯಿಲ್ಲ. ಫೆ.16ರಂದು ಕಾಲೇಜು ಪುನರಾರಂಭವಾದಾಗ ಹೈಕೋರ್ಟ್ ಆದೇಶದ ಕುರಿತು ಎಲ್ಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಸಾಮಾನ್ಯ ಚಟುವಟಿಕೆಯಲ್ಲಿ ತೊಡಗಿದ್ದೆವು. ಮಂಗಳವಾರ ಡಿಡಿಪಿಯು (ಉತ್ತರ) ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಕಂಡು ಅವರನ್ನು ಕಚೇರಿಗೆ ಬರಲು ಹೇಳಿದರು ಮತ್ತು ಹೈಕೋರ್ಟ್ ಆದೇಶದ ಬಗ್ಗೆ ತಿಳಿಸಿದ್ದರು. ಆ ಬಳಿಕ  ವಿದ್ಯಾರ್ಥಿನಿಯರು ಕಾಲೇಜಿನ ಇತರರಿಗೂ ತಮ್ಮ ಧಾರ್ಮಿಕ ಗುರುತುಗಳನ್ನು ಧರಿಸಲು ಅನುಮತಿಸಬಾರದು, ಆದ್ದರಿಂದ ಸಿಖ್ ವಿದ್ಯಾರ್ಥಿನಿಯೂ ಟರ್ಬನ್ ಧರಿಸಲು ಅವಕಾಶ ಬಿಡಬಾರದು ಎಂದು ಒತ್ತಾಯಿಸಿದರು. ಹಾಗಾಗಿ  ನಾವು ವಿದ್ಯಾರ್ಥಿನಿಯ ತಂದೆಯೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದೇವೆ. ಆದೇಶದ ಬಗ್ಗೆ ಅವರಿಗೆ ತಿಳಿಸಿ ಅದನ್ನು ಪಾಲಿಸುವಂತೆ ತಿಳಿಸಿದ್ದೇವೆ ಎಂದು ಕಾಲೇಜಿನ ಪಿಯು ಕಾಲೇಜಿನ ವಕ್ತಾರರು ಪ್ರತಿಕ್ರಯಿಸಿದ್ದಾರೆ.

ನಾವು ಆಕೆಯನ್ನು ಹೊರಗೆ ಕಳಿಸಿಲ್ಲ . ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಾಗಿದೆ ಎಂದಷ್ಟೇ ಹೇಳಿದ್ದೇವೆ. ಆಕೆಯ ತಂದೆಗೆ ಬರೆದ ಪತ್ರದಲ್ಲೂ ನಾವು ಕಾಲೇಜಿನಲ್ಲಿ ಸರ್ವಧರ್ಮ ಸಮನ್ವಯ ನೀತಿ ಅನುಸರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಕಾಲೇಜು ಹೇಳಿದೆ. 

ಈ ಬಗ್ಗೆ ಪಿಯು ಇಲಾಖೆಯ ಉಪ ನಿರ್ದೇಶಕ ಜಿ ಶ್ರೀರಾಮ್ ಅವರಲ್ಲಿ ಕೇಳಿದಾಗ " ಹೈಕೋರ್ಟ್  ಟರ್ಬನ್ ಬಗ್ಗೆ ಏನೂ ಹೇಳಿಲ್ಲ. ನಾವೀಗ ಸುಮ್ಮನೆ ಹೊಸ ಹೊಸ ವಿಷಯ ಸೇರಿಸುತ್ತ ಹೋಗಬಾರದು. ಹೈಕೋರ್ಟ್ ಆದೇಶವನ್ನು ಪಾಲಿಸಬೇಕು.  ನಾನು ಪ್ರಾಂಶುಪಾಲರಲ್ಲಿ ಮಾತಾಡಿದ್ದು ಯಾವುದೇ ಗೊಂದಲ ಇಲ್ಲ  ಎಂದು ಹೇಳಿದ್ದಾರೆ." ಎಂದು ಪ್ರತಿಕ್ರಿಯಿಸಿದರು. 

ವಿದ್ಯಾರ್ಥಿನಿಯ ತಂದೆ ಗುರುಚರಣ್ ಸಿಂಗ್ ಅವರು ಕಾಲೇಜು ಯಾವುದೇ ಸಮಸ್ಯೆ ಸೃಷ್ಟಿಸಿಲ್ಲ. ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ಅವರು ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ನಾವು ನಮ್ಮ ಸಮುದಾಯದ ವಕೀಲರಲ್ಲಿ ಈ ಬಗ್ಗೆ ಮಾತಾಡಿದ್ದೇವೆ. ಹೈಕೋರ್ಟ್ ಆದೇಶದಲ್ಲಿ ಟರ್ಬನ್ ಬಗ್ಗೆ ಉಲ್ಲೇಖವಿಲ್ಲ ಎಂದು ಕಾಲೇಜಿಗೆ ತಿಳಿಸಿದ್ದೇವೆ. ಹಿರಿಯ ನ್ಯಾಯವಾದಿ ಎಚ್ ಎಸ್ ಪೂಲ್ಕ ಅವರಲ್ಲಿ ನಾವು ಸಲಹೆ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಬೆಂಗಳೂರಿನ ಸಿಖ್ ಧಾರ್ಮಿಕ ಕೇಂದ್ರಕ್ಕೂ ವಿದ್ಯಾರ್ಥಿನಿಯ ತಂದೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಹೈಕೋರ್ಟ್ ಆದೇಶ ಟರ್ಬನ್ ಬಗ್ಗೆ ಏನೂ ಹೇಳಿಲ್ಲ ಎಂದು ನಾನು ಮಾಹಿತಿ ನೀಡಿದ್ದೇನೆ ಎಂದು ಎಚ್ ಎಸ್ ಪೂಲ್ಕ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. 

ಒಬ್ಬ ಸಿಖ್ ವಿದ್ಯಾರ್ಥಿಗೆ ಟರ್ಬನ್ ತೆಗೆಯುವಂತೆ ಹೇಳುವುದು ಇಡೀ ಸಿಖ್ ಸಮುದಾಯಕ್ಕೆ ಬಹಳ ದೊಡ್ಡ ಅವಮಾನವಾಗಿದೆ. ನಾವು ಆ ಶಿರವಸ್ತ್ರ  ಕೇಳುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೂ ಬೆಂಬಲ ಸೂಚಿಸುತ್ತೇವೆ.ಸಮವಸ್ತ್ರದ ಬಣ್ಣದ ಶಿರವಸ್ತ್ರ ಧರಿಸಿದರೆ ಆಯಿತು.  ಅದರಿಂದ ಯಾರಿಗೂ ಯಾವುದೇ ಸಮಸ್ಯೆಯಿಲ್ಲ. ಇದು ಈ ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಮುಂದುವರಿಯಲು ಬಿಡಬೇಕು ಎಂದು ಗುರುಚರಣ್ ಸಿಂಗ್ ಕಾಲೇಜಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.


ಅಡುಗೆ ಎಣ್ಣೆ ದರದಲ್ಲಿ ಇಳಿಕೆ; ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆ!

ಅಡುಗೆ ಎಣ್ಣೆ ದರದಲ್ಲಿ ಇಳಿಕೆ; ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆ!

 ರಷ್ಯಾ- ಉಕ್ರೇನ್ ಯುದ್ಧೋನ್ಮಾದ: 

ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ ಸಾಧ್ಯತೆ!


ನವದೆಹಲಿ: ವ್ಯಾಪಾರದ ದೃಷ್ಟಿಯಿಂದ ಜಗತ್ತಿನ ಯಾವುದೇ ಒಂದು ದೇಶಗಳಲ್ಲಿ ನಡೆಯುವ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟಿನಿಂದ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ ಏರಿಕೆಯಾಗುವ ಸಾಧ್ಯತೆ ಇದೆ.


ರಷ್ಯಾ- ಉಕ್ರೇನ್ ಬಿಕ್ಕಟ್ಟು ವಿಶ್ವದ ರಾಷ್ಟ್ರಗಳನ್ನು ಚಿಂತೆಗೀಡು ಮಾಡುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ತಮ್ಮದು ಸ್ವತಂತ್ರ ರಾಷ್ಟ್ರವೆಂದು ಘೋಷಿಸುತ್ತಿದ್ದಂತೆ ಯುದ್ಧೋನ್ಮಾದ ಆರಂಭಗೊಂಡಿದೆ. ಯುದ್ಧದ ಪರಿಣಾಮ ಉಕ್ರೇನ್ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಆ ದೇಶಗಳಲ್ಲಿ ಭಾರತ ಸಹ ಒಂದಾಗಿದೆ.


ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ತಾಳೆ ಯೋಜನೆ: ಆದರೆ...

ಉಕ್ರೇನ್ ಜೊತೆಗಿನ ರಷ್ಯಾ ಸಂಘರ್ಷದ ಪರಿಣಾಮ ಭಾರತದ ಮೇಲೆ ಈಗ ಸ್ಪಷ್ಟವಾಗಿ ಬೀರುತ್ತಿದೆ. ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸುವ ಅಡುಗೆ ಎಣ್ಣೆಯು ಉಕ್ರೇನ್‌ಗೆ ಸಂಬಂಧಿಸಿದೆ. ಭಾರತವು ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ಅದರ ಬೆಲೆ ಏರಿಕೆಯಾಗಿದೆ.


ಜಾಗತಿಕ ಮಾರುಕಟ್ಟೆಯಿಂದ ಪೂರೈಕೆ ಕೊರತೆ ಹಿನ್ನೆಲೆ ಪ್ರಮುಖ ಖಾದ್ಯ ತೈಲ ಬ್ರಾಂಡ್‌ಗಳ ಬೆಲೆ 15 ಲೀಟರ್ ಕ್ಯಾನ್‌ಗೆ ಕನಿಷ್ಠ 100 ಮತ್ತು 150 ರೂ.ಗೆ ಏರಿಕೆಯಾಗಿದೆ ಎಂದು ಪುಣೆಯ ಗುಲ್ತೆಕ್ಡಿ ಮಾರುಕಟ್ಟೆ ಯಾರ್ಡ್ ವ್ಯಾಪಾರಿಗಳು ತಿಳಿಸಿದ್ದಾರೆ.



ಅಡುಗೆ ಎಣ್ಣೆ ದರದಲ್ಲಿ ಇಳಿಕೆ; ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆ!

2020-21ರಲ್ಲಿ ಭಾರತದಲ್ಲಿ ಶೇ.63ರಷ್ಟು ದೇಶಿಯ ಅಡುಗೆ ಎಣ್ಣೆ ಉತ್ಪನ್ನವಾಗಿದೆ. ಆದರೂ ವಿವಿಧ ದೇಶಗಳ ಮೇಲೆ ಅಡುಗೆ ಎಣ್ಣೆಗೆ ಭಾರತ ಹೆಚ್ಚು ಅವಲಂಬಿತವಾಗಿದೆ. ರಷ್ಯಾ- ಉಕ್ರೇನ್ ಬಿಕ್ಕಟ್ಟು ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಡುಗೆ ತೈಲ ಬೆಲೆ ಹೆಚ್ಚಾಗಲು ಕಾರಣವಾಗಿದೆ.

ಭಾರತ ದೇಶವು ಸೂರ್ಯಕಾಂತಿ ಎಣ್ಣೆಯಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ. ಸೂರ್ಯಕಾಂತಿ ಎಣ್ಣೆಯನ್ನು ಭಾರತದಲ್ಲಿ ತಾಳೆ ಎಣ್ಣೆಯ ನಂತರ ಹೆಚ್ಚು ವ್ಯಾಪಕವಾಗಿ ಸೇವಿಸುವ ಎಣ್ಣೆ ಎಂದು ಅಂದಾಜಿಸಲಾಗಿದೆ. ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಕಡಿಮೆ ಆಗುತ್ತಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ.

ಭಾರತ ಕಳೆದ ವರ್ಷ ಸುಮಾರು 1.89 ಮಿಲಿಯನ್ ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಶೇಕಡಾ 74ರಷ್ಟು ತೈಲವು ಉಕ್ರೇನ್‌ನಿಂದ ಭಾರತಕ್ಕೆ ಬಂದಿದೆ. ಉಕ್ರೇನ್‌ನಲ್ಲಿನ ಬಿಕ್ಕಟ್ಟು ಸೂರ್ಯಕಾಂತಿ ಎಣ್ಣೆಯ ಚಿಲ್ಲರೆ ಬೆಲೆಗಳನ್ನು ಹೆಚ್ಚಿಸುವುದಲ್ಲದೆ, ಪೂರೈಕೆಗೆ ತೀವ್ರ ಅಡಚಣೆಯನ್ನು ಉಂಟು ಮಾಡುತ್ತದೆ.

ಈ ನಡುವೆ ಭಾರತ ಸರ್ಕಾರ ಸಹ ಆಮದುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಆಮದು ಮೇಲಿನ ತೆರಿಗೆ ಕಡಿತಗೊಂಡರೆ ಅಡುಗೆ ಎಣ್ಣೆ ಬೆಲೆ ಏರಿಕೆ ಪರಿಣಾಮ ಭಾರತದದಲ್ಲಿ ಕಡಿಮೆಯಾಗಲಿದೆ.


ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಭೂಕಂಪನ :   ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು

ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು


ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಭೂಕಂಪನ : 
ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು

ಇಂದೋರ್ : ಇಂದು ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಈ ಕುರಿತು ಮಾಹಿತಿ ನೀಡಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ಇಂದು ಮುಂಜಾನೆ 4.53 ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.

ಮಧ್ಯಪ್ರದೇಶದ ಇಂದೋರ್ ನ ನೈಋತ್ಯಕ್ಕೆ 125 ಕಿ.ಮೀ ದೂರದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ, ಇಂದು ಮುಂಜಾನೆ 4:53 ರ ಸುಮಾರಿಗೆ ಭೂಕಂಪನ ಸಂಭವಿಸಿದೆ.

ಮಲ್ಯ, ನೀರವ್, ಚೋಕ್ಸಿಯಿಂದ ಒಟ್ಟು 18 ಸಾವಿರ ಕೋಟಿ ರೂ. ಬ್ಯಾಂಕ್ ಗಳಿಗೆ ವಾಪಸ್

ಮಲ್ಯ, ನೀರವ್, ಚೋಕ್ಸಿಯಿಂದ ಒಟ್ಟು 18 ಸಾವಿರ ಕೋಟಿ ರೂ. ಬ್ಯಾಂಕ್ ಗಳಿಗೆ ವಾಪಸ್


ಮಲ್ಯ, ನೀರವ್, ಚೋಕ್ಸಿಯಿಂದ ಒಟ್ಟು 18 ಸಾವಿರ ಕೋಟಿ ರೂ. ಬ್ಯಾಂಕ್ ಗಳಿಗೆ ವಾಪಸ್

ಹೊಸದಿಲ್ಲಿ: ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಸಾಲ ಸುಸ್ತಿ ಪ್ರಕರಣಗಳಲ್ಲಿ ಈಗಾಗಲೇ 18 ಸಾವಿರ ಕೋಟಿ ರೂ.ಗಳನ್ನು ಬ್ಯಾಂಕ್ಗಳಿಗೆ ಹಿಂತಿರುಗಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರಕಾರ ತಿಳಿಸಿದೆ.

ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ತುಷಾರ್ ಮೆಹ್ತಾ ಅವರು ಒಟ್ಟು 67 ಸಾವಿರ ಕೋಟಿ ರೂ. ಮೌಲ್ಯದ ಸಾಲ ಸುಸ್ತಿ ಪ್ರಕರಣಗಳ ತನಿಖೆಯನ್ನು ಕಪ್ಪುಹಣ ಬಿಳುಪು ತಡೆ (ಪಿಎಂಎಲ್ಎ) ಕಾಯ್ದೆಯಡಿ ನಡೆಸಲಾಗುತ್ತಿದೆಯೆಂದು ನ್ಯಾಯಾಲಯಕ್ಕೆ ತಿಳಿಸಿದರು.

ಕಪ್ಪು ಹಣ ಬಿಳುಪು ತಡೆ ಕಾಯ್ದೆಯಡಿ ಆಸ್ತಿಗಳ ಶೋಧ, ಜಪ್ತಿ ಹಾಗೂ ಮುಟ್ಟುಗೋಲು ಹಾಕಲು ಜಾರಿ ನಿರ್ದೇಶನಾಲಯಕ್ಕೆ ವಿಸ್ತೃತವಾದ ಅಧಿಕಾರ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸುತ್ತಿದೆ.

ಬ್ರಿಟನ್ನಿಂದ ಭಾರತಕ್ಕೆ ಗಡಿಪಾರುಗೊಳ್ಳುವುದನ್ನು ತಪ್ಪಿಸಲು ಕಾನೂನುಹೋರಾಟ ನಡೆಸುತ್ತಿರುವ ವಿಜಯ್ ಮಲ್ಯ ಅವರು ಭಾರತದ 17 ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಬಾಕಿಯಿರಿಸಿದ್ದಾರೆ. ವಜ್ರ ಉದ್ಯಮಿಗಳಾದ ನೀರವ್ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ 14 ಸಾವಿರ ಕೋಟಿ ರೂ.ಹಣವನ್ನು ವಂಚಿಸಿದ್ದಾರೆಂದು ಪ್ರಾಸಿಕ್ಯೂಶನ್ ಆರೋಪಿಸಿದೆ. 

ನೀರವ್ ಮೋದಿ ಕೂಡಾ ಬ್ರಿಟನಿಂದ ಭಾರತಕ್ಕೆ ಗಡಿಪಾರುಗೊಳಿಸುವುದರ ವಿರುದ್ಧ ಬ್ರಿಟಿಶ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನೋರ್ವ ಸುಸ್ತಿದಾರ ಚೋಕ್ಸಿ ಅವನ್ನು ಕಳೆದ ವರ್ಷ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು.

ರಷ್ಯಾ-ಉಕ್ರೇನ್ ಯುದ್ಧ ಅಕ್ಷರಶಃ ಆರಂಭ; ತುರ್ತು ಪರಿಸ್ಥಿತಿ ಘೋಷಣೆ

ರಷ್ಯಾ-ಉಕ್ರೇನ್ ಯುದ್ಧ ಅಕ್ಷರಶಃ ಆರಂಭ; ತುರ್ತು ಪರಿಸ್ಥಿತಿ ಘೋಷಣೆ


ರಷ್ಯಾ-ಉಕ್ರೇನ್ ಯುದ್ಧ ಅಕ್ಷರಶಃ ಆರಂಭ; ತುರ್ತು ಪರಿಸ್ಥಿತಿ ಘೋಷಣೆ

ಡೊನೆಸ್ಕ್ (ಉಕ್ರೇನ್): ನಿರೀಕ್ಷೆಯಂತೆ ರಷ್ಯಾ- ಉಕ್ರೇನ್ ಯುದ್ಧ ಅಕ್ಷರಶಃ ಆರಂಭವಾಗಿದ್ದು, ಉಕ್ರೇನ್ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಜತೆಗೆ ರಷ್ಯಾದಲ್ಲಿರುವ ತನ್ನ ನಾಗರಿಕರು ತಕ್ಷಣ ಪಲಾಯನ ಮಾಡುವಂತೆ ಸಲಹೆ ಮಾಡಿದೆ. ಏತನ್ಮಧ್ಯೆ ರಷ್ಯಾ ತನ್ನ ಕೀವ್ ರಾಯಭಾರ ಕಚೇರಿಯನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದು, ಉಕ್ರೇನ್ ಮೇಲೆ ದಾಳಿ ನಡೆಸುವ ಸ್ಪಷ್ಟ ಸೂಚನೆ ಇದಾಗಿದೆ.

ಪ್ರತ್ಯೇಕತಾವಾದಿ ಉಗ್ರರ ಹಿಡಿತದಲ್ಲಿರುವ ಡೊನೆಸ್ಕ್ ನಲ್ಲಿ ಕನಿಷ್ಠ ಐದು ಸ್ಫೋಟಗಳ ಸದ್ದು ಕೇಳಿಬಂದಿದೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರು ಬುಧವಾರ ತಡರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾವನಾತ್ಮಕ ಭಾಷಣದಲ್ಲಿ, ರಷ್ಯಾದ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಂತಿಗಾಗಿ ಮನವಿ ಮಾಡಿದ್ದಾರೆ. ಪರಿಸ್ಥಿತಿಯ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಮಾತುಕತೆ ನಡೆಸಲು ತಾವು ಪ್ರಯತ್ನಿಸಿದರೂ, ಕ್ರೆಮ್ಲಿನ್ ಮೌನವಾಗಿದೆ ಎಂದು ಅವರು ಹೇಳಿದ್ದಾರೆ.

"ಪೂರ್ವ ಉಕ್ರೇನ್ ನಲ್ಲಿರುವ ಬಂಡುಕೋರ ಮುಂಖಂಡರು ಉಕ್ರೇನ್ ದಾಳಿಯ ವಿರುದ್ಧ ಮಿಲಿಟರಿ ನೆರವು ಕೋರಿದ್ದಾರೆ" ಎಂದು ಕ್ರೆಮ್ಲಿನ್ ಪ್ರಕಟಿಸಿದೆ. ಪಾಶ್ಚಿಮಾತ್ಯ ದೇಶಗಳು ಈಗಾಗಲೇ ಎಚ್ಚರಿಕೆ ನೀಡಿದಂತೆ ರಷ್ಯಾ ಮಿಲಿಟರಿ ಬಲಪ್ರಯೋಗಕ್ಕೆ ಮುಂದಾಗುವ ಸ್ಪಷ್ಟ ಸೂಚನೆ ಇದು ಎನ್ನಲಾಗಿದೆ.

ಪ್ರತ್ಯೇಕತಾವಾದಿ ಉಗ್ರರ ಹಿಡಿತದಲ್ಲಿರುವ ಡೊನೆಸ್ಕ್ ಪಟ್ಟಣದಲ್ಲಿ ಗುರುವಾರ ನಸುಕಿನಲ್ಲಿ ಐದು ಸ್ಫೋಟದ ಸದ್ದು ಕೇಳಿಸಿದ್ದು, ನಾಲ್ಕು ಮಿಲಿಟರಿ ಟ್ರಕ್ ಗಳು ಸ್ಥಳಕ್ಕೆ ಧಾವಿಸುತ್ತಿರುವ ದೃಶ್ಯ ಕಂಡುಬಂದಿದೆ ಎಂದು ರಾಯ್ಟರ್, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಏತನ್ಮಧ್ಯೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಎರಡನೇ ಬಾರಿಗೆ ತುರ್ತು ಅಧಿವೇಶನ ನಡೆಸಲು ಮುಂದಾಗಿದೆ. ಗಡಿಯಲ್ಲಿ ರಷ್ಯಾ ಪಡೆ ನಿಯೋಜನೆ ಹಿನ್ನೆಲೆಯಲ್ಲಿ ಈ ಸಭೆ ಉಕ್ರೇನ್ ಮಗ್ರವಿಯ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.


 

ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆಗೆ ಕೈಗೊಂಡ ಕ್ರಮದ ತನಿಖಾ ವರದಿ ಕೇಳಿದ ಹೈಕೋರ್ಟ್

ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆಗೆ ಕೈಗೊಂಡ ಕ್ರಮದ ತನಿಖಾ ವರದಿ ಕೇಳಿದ ಹೈಕೋರ್ಟ್

 

ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆಗೆ ಕೈಗೊಂಡ ಕ್ರಮದ ತನಿಖಾ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ರಾಜ್ಯದ ವಿವಿಧ ಬಾಲಮಂದಿರಗಳಿಂದ ನಾಪತ್ತೆಯಾಗಿರುವ 141 ಮಕ್ಕಳನ್ನು ಪತ್ತೆ ಹಚ್ಚಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ಹಾಗೂ ಈವರೆಗೆ ನಡೆಸಿರುವ ತನಿಖೆಯ ಸಮಗ್ರ ಮಾಹಿತಿಯನ್ನು ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತಂತೆ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿತು.

ಅರ್ಜಿಯಲ್ಲಿ 2015-16 ರಿಂದ 2021 ರ ಅಕ್ಟೋಬರ್ ನಡುವೆ ರಾಜ್ಯದಲ್ಲಿ, ಸರಕಾರದ ಅಧೀನದಲ್ಲಿರುವ ಬಾಲ ಮಂದಿರಗಳಿಂದ ಒಟ್ಟು 420 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಕುರಿತಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ಕೂಡ ದಾಖಲಾಗಿದೆ. ಆದರೆ, ನಾಪತ್ತೆಯಾದ ಮಕ್ಕಳಲ್ಲಿ 141 ಮಂದಿ ಈವರೆಗೆ ಪತ್ತೆಯಾಗಿಲ್ಲ. ಈ ಕುರಿತಂತೆ ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆ ಅಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ನಾಪತ್ತೆಯಾದ ಮಕ್ಕಳ ಕುರಿತಂತೆ ಪೊಲೀಸರು ತನಿಖೆ ನಡೆಸಿಲ್ಲ ಎಂಬುದು ತಿಳಿದು ಬಂದಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಬಾಲ ನ್ಯಾಯ ಕಾಯ್ದೆ ಪ್ರಕಾರ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಮಕ್ಕಳ ನಾಪತ್ತೆ ಪ್ರಕರಣಗಳಿಗಾಗಿ ಪ್ರತ್ಯೇಕ ಪೊಲೀಸ್ ಘಟಕ ಇರಬೇಕು. ಆದರೆ, ರಾಜ್ಯದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಸರಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

 ಎಸ್ಸೆಸ್ಸೆಫ್ ಸೋಮವಾರಪೇಟೆ ಡಿವಿಷನ್: ನವ ಸಾರಥಿಗಳ ಆಯ್ಕೆ

ಎಸ್ಸೆಸ್ಸೆಫ್ ಸೋಮವಾರಪೇಟೆ ಡಿವಿಷನ್: ನವ ಸಾರಥಿಗಳ ಆಯ್ಕೆ


 ಎಸ್ಸೆಸ್ಸೆಫ್ ಸೋಮವಾರಪೇಟೆ ಡಿವಿಷನ್: ನವ ಸಾರಥಿಗಳ ಆಯ್ಕೆ 

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಅದೀನದ ಸೋಮವಾರ ಪೇಟೆ ಡಿವಿಷನ್ ಸಮಿತಿಯ ವಾರ್ಷಿಕ ಕೌನ್ಸಿಲ್ ಕುಶಾಲನಗರದ ನಿಸರ್ಗ ದಾಮ ಗ್ರೀನ್ ಹೋಟಲಿನಲ್ಲಿ ನಡೆಯಿತು.

ಡಿವಿಷನ್ ಅದ್ಯಕ್ಷರಾದ ಕಮರುದ್ದೀನ್ ಅನ್ವಾರಿ ಅಸ್ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಹಸನ್ ಫೈಝಿ ಉಸ್ತಾದರ ದುಆ ನಡೆಸಿದರು ರಾಜ್ಯ ಎಸ್ಸೆಸ್ಸೆಫ್ ನಾಯಕರಾದ ಅಝೀಝ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.

ಡಿವಿಷನ್ ಉಸ್ತುವಾರಿ ಮುಜೀಬ್ ಮಾಸ್ಟರ್ ರವರ ನೇತೃತ್ವದಲ್ಲಿ ನವ ಸಾರಥಿಗಳನ್ನು ಘೋಷಣೆ ಮಾಡಲಾಯಿತು.

ಅಧ್ಯಕ್ಷರಾಗಿ ಶಾಫಿ ಅನ್ವಾರಿ ಅಸ್ಸಖಾಫಿ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಕರ್ಕಳ್ಳಿ ಕೋಶಾಧಿಕಾರಿಯಾಗಿ ಜಲೀಲ್ ಹೊಸತೋಟ ಹಾಗೂ  ಉಪ ಸಮಿತಿ ಕಾರ್ಯದರ್ಶಿಗಳಾಗಿ ನಜ್ಮುದ್ದೀನ್ ಝುಹ್ರಿ, ಹುಸೈನ್ ಸಖಾಫಿ ಹೊಸತೋಟ,ಆರಿಫ್ ಸಖಾಫಿ,ನಿಹಾದ್ ಕುಶಾಲನಗರ,ರಶೀದ್ ಹೊಸಕೋಟೆ, ಅಬೂಬಕ್ಕರ್ ಸುಂಟಿಕೊಪ್ಪ, ಶಿಬಿಲಿ ಕಲ್ಕಂದೂರು,ಮನ್ಸೂರ್ ಕಾಗಡಿಕಟ್ಟೆ ರವರನ್ನು ಹಾಗೂ 10 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರಾದ ಶಾಫಿ ಸಅದಿ ಜಿಲ್ಲಾ ಕೋಶಾಧಿಕಾರಿ ರಹೀಂ ಹೊಸತೋಟ SSF ನಾಯಕರಾದ ಹುಸೈನ್ ಕುಶಾಲನಗರ ಹಸೈನಾರ್ ಹೊಸಕೋಟೆ ರಫೀಕ್ ಲತೀಫಿ ಇಬ್ರಾಹಿಂ ಮಾಸ್ಟರ್ ಹನೀಫ್ ಅಶ್ರಫಿ ಹಾಗೂ ಸೆಕ್ಟರ್ ನಿಂದ ಆಯ್ಕೆ ಯಾದ ಪ್ರತಿನಿಧಿಗಳು ಭಾಗವಹಿಸಿದ್ದರು ಡಿವಿಷನ್ ಕಾರ್ಯದರ್ಶಿ ಸ್ವಾದಿಕ್ ಸ್ವಾಗತಿಸಿ ಜಲೀಲ್ ಹೊಸತೋಟ ವಂದಿಸಿದರು.

 ಹರ್ಷ ಹತ್ಯೆ ಪ್ರಕರಣ: ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ: ಸಿಎಂ ಬೊಮ್ಮಾಯಿ

ಹರ್ಷ ಹತ್ಯೆ ಪ್ರಕರಣ: ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ: ಸಿಎಂ ಬೊಮ್ಮಾಯಿ


ಹರ್ಷ ಹತ್ಯೆ ಪ್ರಕರಣ: ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ತೀವ್ರವಾಗಿ ನಡೆಯುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆಯನ್ನು ಯಾವ ಸಂಸ್ಥೆಗೆ ನೀಡಬೇಕೆನ್ನುವುದು ನಿರ್ಧಾರವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

 ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವುದು ನಮ್ಮ ಆದ್ಯತೆಯಾಗಿದೆ.  ಕರ್ಫ್ಯೂ ಸಹ  ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಾಂಗ್ರೆಸ್ ಅನುಭವದ ಮಾತು: ಇದು ಸರಕಾರಿ ಪ್ರಾಯೋಜಿತ ಮೆರವಣಿಗೆ, ಸೆಕ್ಷನ್ 144 ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಕಾಂಗ್ರೆಸ್ ನವರು ಈ ಹಿಂದೆ ಸರಕಾರಿ ಪ್ರಾಯೋಜಿತ ಕೆಲಸಗಳನ್ನು ಮಾಡಿದ್ದಾರೆ. ಅದರ ಅನುಭವದಿಂದ ಆ ಮಾತುಗಳು ಆಡಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರತ್ಯೇಕತಾವಾದಿಗಳು ನಡೆಸಿದ ಶೆಲ್ ದಾಳಿಯಲ್ಲಿ ಓರ್ವ ಸೈನಿಕ ಮೃತ್ಯು, ಆರು ಮಂದಿಗೆ ಗಾಯ: ಉಕ್ರೇನ್

ಪ್ರತ್ಯೇಕತಾವಾದಿಗಳು ನಡೆಸಿದ ಶೆಲ್ ದಾಳಿಯಲ್ಲಿ ಓರ್ವ ಸೈನಿಕ ಮೃತ್ಯು, ಆರು ಮಂದಿಗೆ ಗಾಯ: ಉಕ್ರೇನ್


ಪ್ರತ್ಯೇಕತಾವಾದಿಗಳು ನಡೆಸಿದ ಶೆಲ್ ದಾಳಿಯಲ್ಲಿ ಓರ್ವ ಸೈನಿಕ ಮೃತ್ಯು, ಆರು ಮಂದಿಗೆ ಗಾಯ: ಉಕ್ರೇನ್

ಮಾಸ್ಕೊ: ಕಳೆದ 24 ಗಂಟೆಗಳಲ್ಲಿ ಪೂರ್ವ ಉಕ್ರೇನ್‌ನಲ್ಲಿ ಕದನ ವಿರಾಮ ಉಲ್ಲಂಘನೆಯು ಹೆಚ್ಚಾಗಿರುವುದರಿಂದ ರಷ್ಯಾದ ಪರ ಪ್ರತ್ಯೇಕತಾವಾದಿಗಳು ನಡೆಸಿದ ಶೆಲ್ ದಾಳಿಯಲ್ಲಿ ಒಬ್ಬ ಸೈನಿಕ ಸಾವನ್ನಪ್ಪಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯದ ಮಿಲಿಟರಿ ಬುಧವಾರ ತಿಳಿಸಿದೆ.

ರಷ್ಯಾದ ಸಂಸದರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ  ದೇಶದ ಹೊರಗೆ ಮಿಲಿಟರಿ ಬಲವನ್ನು ಬಳಸಲು ಅಧಿಕಾರ ನೀಡಿದ ಗಂಟೆಗಳ ನಂತರ ಈ ಘಟನೆ ನಡೆದಿದೆ.

ಕಳೆದ 24 ಗಂಟೆಗಳಲ್ಲಿ ಪ್ರತ್ಯೇಕತಾವಾದಿಗಳ ಶೆಲ್ ದಾಳಿಯ 96 ಘಟನೆಗಳನ್ನು ದಾಖಲಿಸಲಾಗಿದೆ ಎಂದು ಉಕ್ರೇನಿಯನ್ ಮಿಲಿಟರಿ ತನ್ನ ಫೇಸ್‌ಬುಕ್ ಪುಟದಲ್ಲಿ ತಿಳಿಸಿದೆ.

 ಒಂದು ದಿನದ ಹಿಂದಿನ 84 ಕ್ಕೆ ಹೋಲಿಸಿದರೆ. ಪ್ರತ್ಯೇಕತಾವಾದಿ ಪಡೆಗಳು ಭಾರೀ ಫಿರಂಗಿ, ಮಾರ್ಟರ್‌ಗಳು ಮತ್ತು ಗ್ರಾಡ್ ರಾಕೆಟ್ ವ್ಯವಸ್ಥೆಯನ್ನು ಬಳಸಿದ್ದವು ಎಂದು ಅದು ಹೇಳಿದೆ.

ಉದ್ವಿಗ್ನತೆಯ ಉಲ್ಬಣವು ತೀವ್ರ ಕಳವಳಕಾರಿ ವಿಷಯವಾಗಿದೆ ಎಂದು ಭಾರತ ಹೇಳಿದೆ.

ಉಕ್ರೇನ್‌ನ ಕೈವ್‌ನಿಂದ ಏರ್ ಇಂಡಿಯಾ ವಿಶೇಷ ವಿಮಾನ, ಎಐ1946 ಮಂಗಳವಾರ ರಾತ್ರಿ 11.30 ರ ಸುಮಾರಿಗೆ ದಿಲ್ಲಿಗೆ ಬಂದಿಳಿಯಿತು.

Tuesday, 22 February 2022

ನಟ ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನ

ನಟ ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನ

ನಟ ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು, ಫೆ.23: ನ್ಯಾಯಾಧೀಶರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದಲ್ಲಿ ಬಂಧಿತ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು 8ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಚೇತನ್ ಅವರನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದರು. ತಡರಾತ್ರಿ  ಚೇತನ್ ಅವರನ್ನು ವೈಯಾಲಿಕಾವಲ್  ಪೋಲಿಸ್ ಠಾಣೆಯಿಂದ ಶೇಷಾದ್ರಿ ಪುರಂ ಪೊಲೀಸರು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ  ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಹೈಕೋರ್ಟ್ ಹಿರಿಯ ವಕೀಲ ಎಸ್‌.ಬಾಲನ್ ವಾದ ಮಂಡಿಸಿದರು. ಆದರೆ ನ್ಯಾಯಾಧೀಶರು ಸಮ್ಮತಿ ಸೂಚಿಸಲಿಲ್ಲ. 8ನೇ ಎಸಿಎಂಎಂ ನ್ಯಾಯಾಲಯ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಇಂದು (ಫೆ.23) ಜಾಮೀನು ಅರ್ಜಿ ವಿಚಾರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದಾದ ಬಳಿಕ ಪೊಲೀಸರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆತಂದರು. ನಂತರ ಅವರು ಜೈಲಿನಲ್ಲಿ ಇದ್ದು ಓದಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ 'Annihilation of caste' ಪುಸ್ತಕವನ್ನು ಪ್ರದರ್ಶಿಸಿದರು.


ಮಣಿಪಾಲ: ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರು

ಮಣಿಪಾಲ: ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರು


ಮಣಿಪಾಲ: ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರು

ಉಡುಪಿ: ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ಸೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಬುಧವಾರ ಮುಂಜಾನೆ 4.30ರ ಸುಮಾರಿಗೆ ನಡೆದಿದ್ದು, ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಬಳ್ಳಾರಿಯ ಕೊಟ್ಟೂರಿನಿಂದ ಮಂಗಳೂರು ಮಾರ್ಗದ ಸ್ಲೀಪರ್ ಕೋಚ್ ದುರ್ಗಾಂಬ ಬಸ್, ಪ್ರಯಾಣಿಕರನ್ನು ಇಳಿಸಲು ಮಣಿಪಾಲಕ್ಕೆ ಆಗಮಿಸಿತ್ತು. ಟೈಗರ್ ಸರ್ಕಲ್‌ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ವೇಳೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ತಕ್ಷಣವೇ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.

ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಪ್ರಯತ್ನಪಟ್ಟರು ಸಫಲರಾಗಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ತಂಡ ನಿರಂತರ ಒಂದು ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಈ ಅವಘಡದಿಂದ ಬಸ್ ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

 

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಕೌನ್ಸಿಲ್ ; ನವ ಸಾರಥ್ಯ

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಕೌನ್ಸಿಲ್ ; ನವ ಸಾರಥ್ಯ

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಕೌನ್ಸಿಲ್ ; ನವ ಸಾರಥ್ಯ 

 ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್  ವಾರ್ಷಿಕ ಕೌನ್ಸಿಲ್ ಫೆಬ್ರವರಿ 20ರಂದು ಫೈಝಲ್ ಝುಹ್ರಿ ಕಲ್ಲುಗುಂಡಿ ಅಧ್ಯಕ್ಷತೆಯಲ್ಲಿ ಸುಣ್ಣಮೂಲೆ ಮದರಸಾ ಹಾಲ್ ನಲ್ಲಿ ಜರಗಿತು. ಎಸ್.ವೈ.ಎಸ್ ಸುಳ್ಯ ಸೆಂಟರ್ ಪ್ರ. ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ ಉದ್ಘಾಟಿಸಿದರು. ಸುಣ್ಣಮೂಲೆ ಜುಮಾ ಮಸ್ಜಿದ್ ಖತೀಬ್ ಬಶೀರ್ ಸಅದಿ ಕೆಮ್ಮಾರ ದುಆ ನೆರವೇರಿಸಿದರು. ರಾಜ್ಯ ಎಸ್ಸೆಸ್ಸೆಫ್ ಫಿನಾನ್ಸ್ ಕಾರ್ಯದರ್ಶಿ ಹಾಫಿಳ್ ಸುಫ್ಯಾನ್ ಸಖಾಫಿ ಉಸ್ತಾದ್ ಸಂಘಟನಾ ತರಬೇತಿ ನಡೆಸಿದರು. ರಾಜ್ಯ ಎಸ್ಸೆಸ್ಸೆಫ್ ಕ್ಯಾಬಿನೇಟ್ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಹಾಗೂ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹೀಂ ಅಂಜದಿ ಮಂಡೆಕೋಲ್ ಆಶಂಸಾ ಮಾತುಗಳನ್ನಾಡಿದರು. 

ಖಲೀಲ್ ಝುಹ್ರಿ ನೆಕ್ಕಿಲ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಡಿವಿಷನ್ ಡಿ.ಒ ಶಫೀಖ್ ಮಾಸ್ಟರ್ ತಿಂಗಳಾಡಿ ಹಾಗೂ ಜಿಲ್ಲಾ ಸಮಿತಿ ಕ್ಯಾಂಪಸ್ ಕನ್ವೀನರ್ ಅಶ್ಫಾಖ್ ಕೊಡುಂಗಾಯಿ ವೀಕ್ಷಕರಾಗಿದ್ದರು. ಅಬ್ದುರ್ರಹ್ಮಾನ್ ಸಅದಿ ಸುಣ್ಣಮೂಲೆ, ಸಿದ್ದೀಖ್ ಕಟ್ಟೆಕಾರ್, ಅಬ್ಬಾಸ್ ಸುಣ್ಣಮೂಲೆ, ಸಿದ್ದೀಖ್ ಗೂನಡ್ಕ, ಮುಹಮ್ಮದ್ ಸುಣ್ಣಮೂಲೆ, ಯಹ್ಯಾ ಹಾಶಿಮಿ ಸುಣ್ಣಮೂಲೆ ಉಪಸ್ಥಿತರಿದ್ದರು.

ನೂತನ ಸಮಿತಿ : ಟಿ.ಎಂ ಅಬ್ದುರ್ರಹ್ಮಾನ್ ಸಖಾಫಿ (ಅಧ್ಯಕ್ಷ) ಸ್ವಬಾಹ್ ಹಿಮಮಿ ಬೀಜಕೊಚ್ಚಿ (ಪ್ರ.ಕಾರ್ಯದರ್ಶಿ) ನೌಶಾದ್ ಕೆರೆಮೂಲೆ (ಕೋಶಾಧಿಕಾರಿ) ಜುನೈದ್ ಸಖಾಫಿ ಜೀರ್ಮುಖಿ (ಕ್ಯೂ.ಡಿ ಕಾರ್ಯದರ್ಶಿ) ಶಮೀರ್ ಮೊಗರ್ಪಣೆ (ಸಿ.ಸಿ ಕಾರ್ಯದರ್ಶಿ) ಸಿದ್ದೀಖ್ ಹಿಮಮಿ ಪೈಂಬಚ್ಚಾಲ್ (ದಅವಾ ಕಾರ್ಯದರ್ಶಿ) ಕಲಾಂ ಝುಹ್ರಿ ಬೆಳ್ಳಾರೆ‌ (ಪಬ್ಲಿಕೇಷನ್ ಕಾರ್ಯದರ್ಶಿ) ಸಿದ್ದೀಖ್ ಬಿ.ಎ‌ (ಮೀಡಿಯಾ ಕಾರ್ಯದರ್ಶಿ) ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ (ಕ್ಯಾಂಪಸ್ ಕಾರ್ಯದರ್ಶಿ) ರಫೀಖ್ ಅಂಜದಿ ಬೆಳ್ಳಾರೆ‌ (ರೈಂಬೊ ಕಾರ್ಯದರ್ಶಿ) ಶಿಹಾಬ್ ಮಾಸ್ಟರ್ ನೆಕ್ಕಿಲ (ವಿಸ್ಡಮ್ ಕಾರ್ಯದರ್ಶಿ) ಹಾಗೂ ಸಮಿತಿ ಸದಸ್ಯರಾಗಿ ಸಿರಾಜ್ ಹಿಮಮಿ ಕುಂಭಕ್ಕೂಡು, ಖಲೀಲ್ ಝುಹ್ರಿ ನೆಕ್ಕಿಲ, ಮುನೀರ್ ಹನೀಫಿ ಬೆಳ್ಳಾರೆ, ಹಸನ್ ಸಅದಿ ಪೈಂಬಚ್ಚಾಲ್, ಸ್ವಾಲಿಹ್ ಹನೀಫಿ ಸುಣ್ಣಮೂಲೆ, ಹಸೈನಾರ್ ನೆಕ್ಕಿಲ, ಸಿದ್ದೀಖ್ ಎಲಿಮಲೆ, ಶಫೀಖ್ ಕೊಯಂಗಿ, ಮುಸ್ತಫಾ ಸಮಹಾದಿ, ಹಸೀಬ್‌ ಅಡ್ಕಾರ್.

ಸಿರಾಜ್ ಹಿಮಮಿ ಕುಂಭಕ್ಕೂಡು ಸ್ವಾಗತಿಸಿ ಸ್ವಬಾಹ್ ಹಿಮಮಿ ಬೀಜಕೊಚ್ಚಿ ವಂದಿಸಿದರು.

ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ನಿಧನ

ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ನಿಧನ


ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ನಿಧನ

ಕೊಚ್ಚಿ: ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ನಟಿ ಮೃತಪಟ್ಟಿರುವ ಸುದ್ದಿಯನ್ನು ಮಲಯಾಳಂ ಸಿನೆಮಾ ಕಲಾವಿದರ ಸಂಘದ ಕಾರ್ಯದರ್ಶಿ ಇಡವೇಲ ಬಾಬು ಧೃಡಪಡಿಸಿದ್ದಾರೆ.

74 ವರ್ಷದ ಲಲಿತಾ ಅವರು ಕೆಲವು ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.  

ರಂಗಭೂಮಿಯಿಂದ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲಲಿತಾ, 50 ವರ್ಷಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದರು. ಸುಮಾರು 500 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅವರು ನಟಿಸಿದ್ದಾರೆ.

ರಷ್ಯಾ ವಿರುದ್ಧ ಅಮೆರಿಕ ನಿರ್ಬಂಧ

ರಷ್ಯಾ ವಿರುದ್ಧ ಅಮೆರಿಕ ನಿರ್ಬಂಧ


ರಷ್ಯಾ ವಿರುದ್ಧ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ರಷ್ಯಾಗೆ ಪಾಶ್ಚಿಮಾತ್ಯ ದೇಶಗಳ ನೆರವನ್ನು ಸ್ಥಗಿತಗೊಳಿಸಿ, ರಷ್ಯಾ ಹಾಗೂ ಮಿತ್ರದೇಶಗಳ ವಿರುದ್ಧ ನಿರ್ಬಂಧಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡೇನ್ ಘೋಷಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ವಿರುದ್ಧ ಮೊದಲ ದಂಡನಾ ಕ್ರಮ ಇದಾಗಿದೆ.

ಉಕ್ರೇನ್‌ನ ಒಳಗೆ ರಷ್ಯಾ ದಾಳಿ ಮಾಡಿದಂತೆಲ್ಲ ಮತ್ತಷ್ಟು ಬಿಗಿ ನಿರ್ಬಂಧಗಳನ್ನು ಹೇರಲಾಗುವುದು ಎಂದು ಶ್ವೇತಭವನದಲ್ಲಿ ಮಾತನಾಡಿದ ಬೈಡೇನ್ ಸ್ಪಷ್ಟಪಡಿಸಿದರು. "ನೀವು ಮತ್ತಷ್ಟು ಮುಂದುವರಿದರೆ, ನಮ್ಮಲ್ಲಿ ಮತ್ತಷ್ಟು ನಿರ್ಬಂಧ ಕ್ರಮಗಳಿವೆ" ಎಂದು ಎಚ್ಚರಿಕೆ ನೀಡಿದರು. ರಷ್ಯಾದ ಪ್ರತಿಯೊಂದು ಹೆಜ್ಜೆಯೂ ಉಕ್ರೇನ್ ಮೇಲಿನ ದಾಳಿಗೆ ಕುಮ್ಮಕ್ಕು ನೀಡುವಂಥದ್ದು ಎಂದು ಹೇಳಿದರು.

ರಷ್ಯಾದ ಕ್ರಮವು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ ಅವರು, ಅಮೆರಿಕ ಮತ್ತು ಮಿತ್ರಪಡೆಗಳ ಪ್ರತಿಕ್ರಿಯೆಯನ್ನು ಇದು ಆಹ್ವಾನಿಸಿದೆ ಎಂದು ಅಭಿಪ್ರಾಯಪಟ್ಟರು. ಪುಟಿನ್ ಅವರು ಉಕ್ರೇನ್‌ನ ಅಸ್ತಿತ್ವನ್ನೇ ಪ್ರಶ್ನಿಸಿದ್ದಾರೆ ಎಂದು ಆಪಾದಿಸಿದ ಅವರು, ರಷ್ಯಾ ನಿಸ್ಸಂದೇಹವಾಗಿ ದಾಳಿಕೋರ ರಾಷ್ಟ್ರ ಎಂದು ಬಣ್ಣಿಸಿದರು.

ರಷ್ಯಾದ ನೆರೆ ರಾಷ್ಟ್ರವಾದ ಬಾಲ್ಟಿಕ್‌ಗೆ ಅಮೆರಿಕದ ಪಡೆಗಳನ್ನು ಸ್ವಲ್ಪಮಟ್ಟಿಗೆ ಕಳುಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಮೆರಿಕ ರಷ್ಯಾದ ಜತೆ ಯುದ್ಧ ಮಾಡಲು ಬಯಸಿಲ್ಲ, ಆದರೆ ನ್ಯಾಟೊ ಪ್ರದೇಶದ ಪ್ರತಿ ಇಂಚನ್ನೂ ನಾವು ರಕ್ಷಿಸಲಿದ್ದೇವೆ. ಉಕ್ರೇನ್‌ ಗೆ ರಕ್ಷಣಾತ್ಮಕ ಸಾಧನ ಸಲಕರಣೆಗಳನ್ನೂ ಒದಗಿಸಲಿದ್ದೇವೆ ಎಂದರು.


 ರಾಷ್ಟ್ರಧ್ವಜ ಕುರಿತು ವಿವಾದಿತ ಹೇಳಿಕೆ ವಿಚಾರ: ಈಶ್ವರಪ್ಪ ವಜಾಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ

ರಾಷ್ಟ್ರಧ್ವಜ ಕುರಿತು ವಿವಾದಿತ ಹೇಳಿಕೆ ವಿಚಾರ: ಈಶ್ವರಪ್ಪ ವಜಾಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ


 ರಾಷ್ಟ್ರಧ್ವಜ ಕುರಿತು ವಿವಾದಿತ ಹೇಳಿಕೆ ವಿಚಾರ: ಈಶ್ವರಪ್ಪ ವಜಾಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ

ಬೆಂಗಳೂರು: ‘ರಾಷ್ಟ್ರಧ್ವಜದ ಕುರಿತು ದೇಶದ್ರೋಹದ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಮತ್ತು ಶಿವಮೊಗ್ಗದಲ್ಲಿ ನಡೆದ ಸರಕಾರಿ ಪ್ರಾಯೋಜಿತ ಶವದ ಮೆರವಣಿಗೆ ಮತ್ತು ದಾಂಧಲೆಗಳ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಸರಕಾರಕ್ಕೆ ಸೂಚನೆ ನೀಡಬೇಕು' ಎಂದು ಒತ್ತಾಯಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಶಾಸಕರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.

ಮಂಗಳವಾರ ವಿಧಾನ ಮಂಡಲ ಅಧಿವೇಶನ ಮುಂದೂಡಿಕೆ ಹಿನ್ನೆಲೆಯಲ್ಲಿ ವಿಧಾನಸೌಧದಿಂದ ರಾಜಭವನದ ವರೆಗೆ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಶಾಸಕರ ನಿಯೋಗ, ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಸಚಿವ ಈಶ್ವರಪ್ಪ ರಾಷ್ಟ್ರಧ್ವಜ ಕುರಿತಾದ ಹೇಳಿಕೆಯನ್ನು ಖಂಡಿಸಿದ್ದಾರೆ. ಅದೊಂದು ಬೇಜವಾಬ್ದಾರಿತನದ ಹೇಳಿಕೆ ಎಂದಿದ್ದಾರೆ. ಈಶ್ವರಪ್ಪ ಅವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದಾಗಿಯೂ ಮಾಧ್ಯಮಗಳು ವರದಿ ಮಾಡಿವೆ. ಆದರೂ ಇದುವರೆಗೂ ಬಿಜೆಪಿಯ ರಾಷ್ಟ್ರೀಯ, ರಾಜ್ಯ ಮುಖಂಡರು ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿಲ್ಲ.

ಆದುದರಿಂದ ತಾವು ಕಾಯಾರ್ಂಗದ ಮುಖ್ಯಸ್ಥರಾಗಿದ್ದು ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಷ್ಟ್ರದ್ರೋಹಿ ಮತ್ತು ಸಂವಿಧಾನ ವಿರೋಧಿ ಹೇಳಿಕೆಯ ಕಾರಣಕ್ಕೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲು ಸರಕಾರಕ್ಕೆ ಸೂಚಿಸಬೇಕು. ಅಗತ್ಯ ಕಲಂಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ರಾಜ್ಯಪಾಲರನ್ನು ಕೋರಿದ್ದೇವೆ ಎಂದರು.

ಫೆ.8ರಂದು ಶಿವಮೊಗ್ಗದ ಬಾಪೂಜಿನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜೊಂದರ ರಾಷ್ಟ್ರಧ್ವಜ ಹಾರಿಸುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜವನ್ನು ಹಾರಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಫೆ.9ರಂದು ಸಚಿವ ಈಶ್ವರಪ್ಪ ‘ಒಂದಲ್ಲ ಒಂದು ದಿನ ದಿಲ್ಲಿ ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ' ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಈ ಹೇಳಿಕೆ ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನವಾಗಿದೆ ಮತ್ತು ದೇಶದ ಸಾರ್ವಭೌಮತೆ, ಐಕ್ಯತೆ, ಅಖಂಡತೆ ವಿರುದ್ಧದ ಹೇಳಿಕೆಯಾಗಿದೆ. ಸ್ಪಷ್ಟವಾಗಿ ದೇಶದ್ರೋಹದ ಹೇಳಿಕೆಯಾಗಿದೆ' ಎಂದು ತಿಳಿಸಿದರು.

‘ರಾಷ್ಟ್ರಧ್ವಜವು ಭಾರತೀಯರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಮತ್ತು ಹೆಮ್ಮೆಯ ಸಂಕೇತವಾಗಿದೆ. ನಮ್ಮ ಯೋಧರೂ ಮುಗಿಲೆತ್ತರಕ್ಕೆ ನಮ್ಮ ರಾಷ್ಟ್ರಧ್ವಜದ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಹುತಾತ್ಮರಾಗಿದ್ದಾರೆ. ಭಾರತದ ಹೆಮ್ಮೆಯ ಮತ್ತು ಸಾರ್ವಭೌಮತೆಯ ಪ್ರತೀಕವಾದ ರಾಷ್ಟ್ರಧ್ವಜದ ಕುರಿತು ಅಗೌರವದ ಹೇಳಿಕೆ ನೀಡುವುದಾಗಲಿ, ಟೀಕೆ ಮಾಡುವುದಾಗಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ' ಎಂದು ತಿಳಿಸಿದರು.

‘ಹೀಗಾಗಿ ನಾವು ಬಹಳ ಗಂಭೀರವಾದ ಈ ಸಂಗತಿಯ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ಚರ್ಚಿಸಲು ನಿಲುವಳಿ ಸೂಚನೆಯನ್ನು ನೀಡಿದೆವು. ಆದರೆ, ವಿಧಾನಸಭೆಯಲ್ಲಿ ನೀಡಲಾದ ನಿಲುವಳಿ ಸೂಚನೆಯನ್ನು ಏಕಪಕ್ಷೀಯವಾಗಿ ತಿರಸ್ಕರಿಸಲಾಯಿತು. ಪರಿಷತ್‍ನಲ್ಲ್ಲಿ ಸಭಾಪತಿಯವರು ಸುಧೀರ್ಘ ಚರ್ಚೆಗೆ ಅವಕಾಶ ಕೊಟ್ಟರು. ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಇಲ್ಲದಂತೆ ಮಾಡಿದರೆ, ಪರಿಷತ್‍ನಲ್ಲಿ ಚರ್ಚೆ ಆದರೂ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಯಿತು' ಎಂದು ಸಿದ್ದರಾಮಯ್ಯ ದೂರಿದರು.

‘ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರ ಮೇಲೆ ರಾಜ್ಯ ಸರಕಾರ ಯಾವುದೇ ಕ್ರಮ ಜರುಗಿಸಲಿಲ್ಲ. ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿಲ್ಲ. ಆದುದರಿಂದ ಈ ಹೇಳಿಕೆ ನೀಡಿರುವ ಈಶ್ವರಪ್ಪ ಮೇಲೆ ಈ ಕೂಡಲೆ ರಾಷ್ಟ್ರದ್ರೋಹದ ಪ್ರಕರಣವನ್ನು ದಾಖಲಿಸಬೇಕು ಮತ್ತು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದೆವು. ಆದರೂ ಸರಕಾರ ಅಥವಾ ಬಿಜೆಪಿ ಈಶ್ವರಪ್ಪ ಅವರ ವಿರುದ್ಧ ಕ್ರಮ ಜರುಗಿಸಲಿಲ್ಲ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಿಲ್ಲ. ಬದಲಿಗೆ ಸಚಿವ ಈಶ್ವರಪ್ಪ ಅವರನ್ನು ಬೆಂಬಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಸಂಬಂಧಪಟ್ಟ ಪೆÇಲೀಸರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

‘ನಮ್ಮ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಘನತೆ, ಗೌರವ, ಸ್ವಾಭಿಮಾನ ಕಾಪಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ನೀವು ಮುಂದಾಗುತ್ತೀರಿ ಎನ್ನುವ ನಮ್ಮ ನಂಬಿಕೆಯನ್ನು ನೀವು ಸುಳ್ಳಾಗಿಸುವುದಿಲ್ಲ ಎಂದು ನಂಬಿದ್ದೇವೆ. ರಾಜ್ಯಪಾಲರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದೇವೆ' ಎಂದು ಸಿದ್ದರಾಮಯ್ಯ ತಿಳಿಸಿದರು.

 ರಾಜ್ಯ ಕಾನೂನು ವಿವಿ ಕುಲಪತಿ ಮುಂದುವರಿಕೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

ರಾಜ್ಯ ಕಾನೂನು ವಿವಿ ಕುಲಪತಿ ಮುಂದುವರಿಕೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

 

ರಾಜ್ಯ ಕಾನೂನು ವಿವಿ ಕುಲಪತಿ ಮುಂದುವರಿಕೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು: ರಾಜ್ಯ ಕಾನೂನು ವಿಶ್ವವಿದ್ಯಾಲಯ(ಕೆಎಸ್‍ಎಲ್‍ಯು) ಕುಲಪತಿಯಾಗಿ ಪ್ರೊ.ಈಶ್ವರ ಭಟ್ ಅವರನ್ನು ಮುಂದುವರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಕೆಯಾಗಿದೆ. 

ಕಾನೂನು ವಿದ್ಯಾರ್ಥಿಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಪೀಠ, ವಿಚಾರಣೆ ನಡೆಸಿತು. 

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಯ್ದೆ ಅನ್ವಯ, 65 ವರ್ಷ ಮೀರಿದವರು ಕುಲಪತಿಯಾಗುವಂತಿಲ್ಲ. ಹಾಲಿ ಕುಲಪತಿಗೆ 65 ವರ್ಷ ಪೂರ್ಣಗೊಂಡಿದೆ ಎಂದರು. 

ಅದಕ್ಕೆ ನ್ಯಾಯಪೀಠ, ಕುಲಪತಿಗಳ ಖಚಿತ ಜನ್ಮದಿನಾಂಕದ ಬಗ್ಗೆ ದಾಖಲೆಗಳಿಲ್ಲ. ಮಾ.2ರೊಳಗೆ ಮಾಹಿತಿ ಸಂಗ್ರಹಿಸಿ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.  

ಮಧ್ಯಂತರ ಪರಿಹಾರ ಕೋರಿ ಭಂಡಾರ್ಕರ್ಸ್‌ ಕಾಲೇಜಿನ ಪದವಿ ವಿದ್ಯಾರ್ಥಿನಿಯರ ಮನವಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್‌

ಮಧ್ಯಂತರ ಪರಿಹಾರ ಕೋರಿ ಭಂಡಾರ್ಕರ್ಸ್‌ ಕಾಲೇಜಿನ ಪದವಿ ವಿದ್ಯಾರ್ಥಿನಿಯರ ಮನವಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್‌


ಮಧ್ಯಂತರ ಪರಿಹಾರ ಕೋರಿ ಭಂಡಾರ್ಕರ್ಸ್‌ ಕಾಲೇಜಿನ ಪದವಿ ವಿದ್ಯಾರ್ಥಿನಿಯರ ಮನವಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಉಡುಪಿಯ ಭಂಡಾರ್ಕಾರ್ಸ್ ಕಾಲೇಜ್ ಆಫ್ ಆರ್ಟ್ಸ್ ಎಂಡ್ ಸಾಯನ್ಸ್ ಇಲ್ಲಿನ ಇಬ್ಬರು ಪದವಿ ವಿದ್ಯಾರ್ಥಿನಿಯರು ತಮಗೆ ತರಗತಿಗಳಿಗೆ ಹಿಜಾಬ್ ಧರಿಸಿ ಆಗಮಿಸಲು ಅನುಮತಿಲು ಕಾಲೇಜಿಗೆ ಸೂಚನೆ ನೀಡಬೇಕೆಂದು ಕೋರಿ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಮಧ್ಯಂತರ ಪರಿಹಾರ ಒದಗಿಸಲು ಜಸ್ಟಿಸ್ ಕೃಷ್ಣ ಎಸ್ ದೀಕ್ಷಿತ್ ಅವರ ಏಕ ಸದಸ್ಯ ಪೀಠ ಸೋಮವಾರ ನಿರಾಕರಿಸಿದೆ.

ಹೈಕೋರ್ಟಿನ ಪೂರ್ಣ ಪೀಠ ಫೆಬ್ರವರಿ 10ರಂದು ಹೊರಡಿಸಿದ ಮಧ್ಯಂತರ ಆದೇಶ ಈಗ ಊರ್ಜಿತದಲ್ಲಿರುವುದರಿಂದ ಹಾಗೂ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಪೂರ್ಣ ಪೀಠ ಮುಂದುವರಿಸಿರುವುದರಿಂದ ತನಗೆ ಈ ಹಂತದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಏಕಸದಸ್ಯ ಪೀಠ ಹೇಳಿದೆ.

ಅರ್ಜಿದಾರರು ಕಾಲೇಜಿನಲ್ಲಿ ಬಿಬಿಎ ಕೋರ್ಸ್ ಓದುತ್ತಿದ್ದು ಹಾಗೂ ಪ್ರವೇಶಾತಿ ಪಡೆದಂದಿನಿಂದ ಅವರು ಕಾಲೇಜು ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸುತ್ತಿದ್ದರು ಹಾಗೂ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡುವ ನಿರ್ದಿಷ್ಟ ನಿಯಮವಿದೆ. ಆದರೂ ಅರ್ಜಿದಾರರು ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರನ್ನು ಮೊದಲ ಬಾರಿ ಫೆಬ್ರವರಿ 3ರಂದು ಕಾಲೇಕಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ತಡೆದಿದ್ದರು, ಕರ್ನಾಟಕ ರಾಜ್ಯ ವಿವಿ ಕಾಯಿದೆ ಅಥವಾ ಯುಜಿಸಿ ಕಾಯಿದೆಯಡಿ ಅಸಭ್ಯ ಉಡುಗೆ ಧರಿಸಬಾರದೆಂಬ ನಿಯಮದ ಹೊರತಾಗಿ ಯಾವುದೇ ಸಮವಸ್ತ್ರ ನಿರ್ದಿಷ್ಟಪಡಿಸಲಾಗಿಲ್ಲ ಎಂದೂ ಅರ್ಜಿದಾರರು ವಾದಿಸಿದ್ದಾರೆ.

"ಕಾನೂನಿನ ಪ್ರಮುಖ ಪ್ರಶ್ನೆಗಳು ಪೂರ್ಣ ಪೀಠದ ಮುಂದೆ ದಿನನಿತ್ಯದ ಆಧಾರದ ಮೇಲೆ ಚರ್ಚೆಯಾಗುತ್ತಿರುವಾಗ, ಪೂರ್ಣ ಪೀಠವು ನೀಡಿದ ಒಂದು ಮಧ್ಯಂತರ ಪರಿಹಾರವನ್ನು ಹೊರತುಪಡಿಸಿ ಅರ್ಜಿದಾರರಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲಾಗುವುದಿಲ್ಲ" ಎಂದು ಏಕಸದಸ್ಯ ಪೀಠ ಹೇಳಿದೆ.

 ವಿಧಾನಸಭೆ ಅಧಿವೇಶನ: ಮಾ.4ಕ್ಕೆ ಕಲಾಪ ಮುಂದೂಡಿದ ಸ್ಪೀಕರ್

ವಿಧಾನಸಭೆ ಅಧಿವೇಶನ: ಮಾ.4ಕ್ಕೆ ಕಲಾಪ ಮುಂದೂಡಿದ ಸ್ಪೀಕರ್


 ವಿಧಾನಸಭೆ ಅಧಿವೇಶನ: ಮಾ.4ಕ್ಕೆ ಕಲಾಪ ಮುಂದೂಡಿದ ಸ್ಪೀಕರ್

ಬೆಂಗಳೂರು: ಸಚಿವ ಈಶ್ವರಪ್ಪಅವರನ್ನು ಮಂತ್ರಿ ಮಂಡಲದಿಂದ ವಜಾಗೊಳಿಸುವಂತೆ ಒತ್ತಾಯಿಸಿ  ಮಂಗಳವಾರ ವಿಧಾನಸಭೆ ಅಧಿವೇಶನ ಆರಂಭವಾಗಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿ ನಡಸಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಮಾರ್ಚ್ 4ಕ್ಕೆ ಮುಂದೂಡಿದ್ದಾರೆ. 

ಸದನದಲ್ಲಿ ಈಶ್ವರಪ್ಪ ವಿರುದ್ಧ ಭಿತ್ತಿ ಪತ್ರ ಹಿಡಿದು ಧರಣಿ ನಡೆಸಿದ ಕಾಂಗ್ರೆಸ್ ಸದಸ್ಯರು ಈಶ್ವರಪ್ಪರನ್ನು ಮಂತ್ರಿ ಮಂಡಲದಿಂದ ವಜಾಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ  'ಇನ್ನುಳಿದ ಮೂರು ದಿನಗಳ ಕಲಾಪವನ್ನು ವ್ಯರ್ಥ ಮಾಡುವ ಬದಲಿಗೆ ಕಲಾಪವನ್ನು ಇದೇ ಬರುವ ಮಾರ್ಚ್ 4ಕ್ಕೆ ಸೇರುವಂತೆ ಮುಂದೂಡುತ್ತೇನೆ' ಎಂದು ಹೇಳಿದರು. 

Monday, 21 February 2022

ಉತ್ತರಾಖಂಡದಲ್ಲಿ ವಾಹನ ಕಮರಿಗೆ ಬಿದ್ದು 11 ಮಂದಿ ಸಾವು, ಇಬ್ಬರಿಗೆ ಗಾಯ

ಉತ್ತರಾಖಂಡದಲ್ಲಿ ವಾಹನ ಕಮರಿಗೆ ಬಿದ್ದು 11 ಮಂದಿ ಸಾವು, ಇಬ್ಬರಿಗೆ ಗಾಯ

ಉತ್ತರಾಖಂಡದಲ್ಲಿ ವಾಹನ ಕಮರಿಗೆ ಬಿದ್ದು 11 ಮಂದಿ ಸಾವು, ಇಬ್ಬರಿಗೆ ಗಾಯ

ಚಂಪಾವತ್ (ಉತ್ತರಾಖಂಡ): ವಾಹನವೊಂದು ಮಂಗಳವಾರ ಬೆಳಗ್ಗೆ ಉತ್ತರಾಖಂಡದ ಚಂಪಾವತ್‌ನ ಬುಡಮ್ ಗ್ರಾಮದ ಸುಖಿದಂಗ್ ರೀತಾ ಸಾಹಿಬ್ ರಸ್ತೆಯ ಬಳಿಯ ಕಮರಿಗೆ ಬಿದ್ದ ಪರಿಣಾಮ 11 ಜನರು ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ.

"ಸುಖಿದಂಗ್ ರೀತಾ ಸಾಹಿಬ್ ರಸ್ತೆಯ ಬಳಿ ವಾಹನವೊಂದು ಕಮರಿಗೆ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಬಲಿಪಶುಗಳು ತನಕ್‌ಪುರದ ಪಂಚಮುಖಿ ಧರ್ಮಶಾಲಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು" ಎಂದು ಕುಮಾವೂನ್ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿ) ನೀಲೇಶ್ ಆನಂದ್ ಭರಣೆ ವರದಿ ಮಾಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.

ಬಲಿಯಾದವರು ಉತ್ತರಾಖಂಡದ ಕಾಕನೈನ ದಂಡ ಮತ್ತು ಕಥೋಟಿ ಗ್ರಾಮಗಳಿಗೆ ಸೇರಿದವರು.


ಕಡಬದಲ್ಲಿ ಕಳ್ಳರ ಹಾವಳಿ: ಎರಡು ಮನೆಗಳಿಗೆ ನುಗ್ಗಿದ ಕಳ್ಳರು

ಕಡಬದಲ್ಲಿ ಕಳ್ಳರ ಹಾವಳಿ: ಎರಡು ಮನೆಗಳಿಗೆ ನುಗ್ಗಿದ ಕಳ್ಳರು


ಕಡಬದಲ್ಲಿ ಕಳ್ಳರ ಹಾವಳಿ: ಎರಡು ಮನೆಗಳಿಗೆ ನುಗ್ಗಿದ ಕಳ್ಳರು

ಕಡಬ, ಫೆ.22: ಕಡಬ ಪರಿಸರದಲ್ಲಿ ಕಳ್ಳರ ಹಾವಳಿ ಕಾಣಿಸಿಕೊಂಡಿದ್ದು, ಎರಡು ಮನೆಗಳಿಗೆ ನುಗ್ಗಿರುವ ಘಟನೆ ವರದಿಯಾಗಿದೆ.

ಕಡಬ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಚಾಕೋಟೆಕೆರೆ ನಿವಾಸಿ ಅಶ್ರಫ್ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯಿಡೀ ಜಾಲಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಈ ನಡುವೆ ಪಾಲೆತ್ತಡ್ಕ ನಿವಾಸಿ ಮರ್ಧಾಳದಲ್ಲಿ ಅಂಗಡಿ ಹೊಂದಿರುವ ಬಾಲಕೃಷ್ಣ ರೈ ಎಂಬವರ ಮನೆಗೂ ನುಗ್ಗಿರುವ ಕಳ್ಳರು ನಗದನ್ನು ದೋಚಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸ್.ಎಸ್.ಎಫ್ ಪುತ್ತೂರು ಡಿವಿಶನ್ :ನೂತನ ಸಾರಥಿ ಗಳು

ಎಸ್.ಎಸ್.ಎಫ್ ಪುತ್ತೂರು ಡಿವಿಶನ್ :ನೂತನ ಸಾರಥಿ ಗಳು


ಎಸ್.ಎಸ್.ಎಫ್ ಪುತ್ತೂರು ಡಿವಿಶನ್ :ನೂತನ ಸಾರಥಿ ಗಳು

SSF ಪುತ್ತೂರು ಡಿವಿಶನ್ ವಾರ್ಷಿಕ ಮಹಾಸಭೆ ಯು ದಿನಾಂಕ 20-02-2022 ಆದಿತ್ಯವಾರ  ಡಿವಿಶನ್ ಅಧ್ಯಕ್ಷರಾದ ಹಾಫಿಲ್ ತೌಸೀಫ್ ಸಅದಿ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಸುನ್ನಿ ಸೆಂಟರಿನಲ್ಲಿ ನಲ್ಲಿ ನಡೆಯಿತು.

ಜಿಲ್ಲಾ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಂಜದಿಯವರು ಉದ್ಘಾಟಿಸಿದರು.

ಡಿವಿಶನ್ ಪ್ರಧಾನ ಕಾರ್ಯದರ್ಶಿ ಗಳಾದ ಹಾರಿಸ್ ಅಡ್ಕ ವರದಿ ಹಾಗೂ ಲೆಕ್ಕಪತ್ರ ವಾಚಿಸಿದರು.

ನಂತರ ಡಿವಿಶನ್ ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ನಾಯಕರಾದ ಮಿಸ್ಬಾಹಿ ಉಸ್ತಾದರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ರಫೀಕ್  ಬಾಸನಿ ರೆಂಜ, ಪ್ರಧಾನ ಕಾರ್ಯದರ್ಶಿ ಗಳಾಗಿ ಮುಹ್ಸಿನ್ ಕಟ್ಟತ್ತಾರ್, ಕೋಶಾಧಿಕಾರಿ ಯಾಗಿ ರಫೀಕ್ ಮಣ್ಣಾಪು, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಹಾರಿಸ್ ಅಡ್ಕ,ಮೀಡಿಯಾ ಕಾರ್ಯದರ್ಶಿ ಯಾಗಿ ಶಿಹಾಬ್ ಸಖಾಫಿ ಈಶ್ವರಮಂಗಲ,ದ ಅವಾ ಕಾರ್ಯದರ್ಶಿ ಯಾಗಿ ಸಲಾಂ ಹನೀಫಿ ಕಬಕ,ರೈಂಬೋ ಕಾರ್ಯದರ್ಶಿ ಯಾಗಿ ಶಮೀರ್ ಸಖಾಫಿ, ಪಬ್ಲಿಕೇಶನ್ ಕಾರ್ಯದರ್ಶಿ ಶಿಹಾಬುರ್ರಹ್ಮಾನ್ ಹಸನ್ ನಗರ,ಕಲ್ಚರಲ್ ಕಾರ್ಯದರ್ಶಿ ಯಾಗಿ ಶಫೀಕ್ ಸಅದಿ ಈಶ್ವರಮಂಗಲ , ಕ್ವಾಲಿಟಿ ಡೆವೆಲಪ್ ಮೆಂಟ್ ಕಾರ್ಯದರ್ಶಿ ಯಾಗಿ ಖಲಂದರ್ ಪಾಟ್ರಕೋಡಿ, ವಿಸ್ಡಮ್ ಕಾರ್ಯದರ್ಶಿ ಯಾಗಿ ಸೈಫುಲ್ಲಾ ಸಅದಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಾಬಿತ್ ತಂಙಳ್,ಕರೀಂ ಬಾಹಸನಿ,ಮುಸ್ತಫಾ ಬುಡೋಳಿ,ಇಲ್ಯಾಸ್ ಕಟ್ಟತ್ತಾರ್,ಶಮೀರ್ ಬನ್ನೂರು,ಅಶ್ರಫ್ ಅಜ್ಜಿಕಲ್ಲು,ಹನೀಫ್ ಬನ್ನೂರು,ಹಾಫಿಲ್ ತೌಸೀಫ್ ಸಅದಿ,ಮುಸ್ತಫಾ ಗಟ್ಟಮನೆ,ನಾಸಿರ್ ಕುಕ್ಕಾಜೆ,ಇಬ್ರಾಹಿಂ ಪಳ್ಳತ್ತಾರ್,ರಝಾಕ್ ಹಿಮಮಿ,ಹಾರಿಸ್ ಅಂಕಜಾಲ್ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮ ದಲ್ಲಿ ಜಿಲ್ಲಾ ನಾಯಕರಾದ ಸಿದ್ದೀಕ್ ಗೂನಡ್ಕ, ಝುಬೈರ್ ಸಖಾಫಿ, ಶಫೀಕ್ ಮಾಸ್ಟರ್, ಇಸಾಕ್ ಮದನಿ, ಅಶ್ಫಾಕ್ ಕೊಡುಂಗಾಯಿ ಉಪಸ್ಥಿತರಿದ್ದರು. ಆರು ಸೆಕ್ಟರ್ ಗಳಿಂದ  ಕೌನ್ಸಿಲರ್ಸ್ ಗಳು ಆಗಮಿಸಿದ್ದರು.

ಹಾರಿಸ್ ಅಡ್ಕ ಸ್ವಾಗತಿಸಿ,ನೂತನ ಕಾರ್ಯದರ್ಶಿ ಮುಹ್ಸಿನ್ ಕಟ್ಟತ್ತಾರ್ ಧನ್ಯವಾದ ಸಲ್ಲಿಸಿದರು. 

ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ

ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ

ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಬ್ಬರು ಪ್ರಮುಖ ಆರೋಪಿಗಳ ಹೆಸರು ಬಹಿರಂಗವಾಗಿದ್ದು, ಶಿವಮೊಗ್ಗದ ಬುದ್ಧನಗರದ ಖಾಸಿಫ್ ಮತ್ತು ಜೆಪಿ‌ ನಗರದ ಸೈಯದ್ ನದೀಮ್ ಎಂದು ಮಾಹಿತಿ ಲಭ್ಯವಾಗಿದೆ.

ಹತ್ಯೆ ನಡೆದು 24 ಗಂಟೆಗಳ ಒಳಗಾಗಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇಂದು, ಸೋಮವಾರ ರಾತ್ರಿಯಿಂದ ನಾಡಿದ್ದು ಬುಧವಾರ ಬೆಳಗ್ಗೆ ಆರು ಗಂಟೆವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಿರುವುದಾಗಿ ಎಸ್ ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ನಾಳೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ‌ ಮಾಡಲಾಗಿದ್ದು, ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ.ಅಗತ್ಯ ಬಿದ್ದರೆ ಕರ್ಪ್ಯೂ ಮುಂದುವರಿಸುವುದಾಗಿ ಎಸ್ ಪಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಹೆಚ್ಚುವರಿಯಾಗಿ ಪೊಲೀಸ್ ಪಡೆಗಳು ಆಗಮಿಸಿದ್ದು, ರಾತ್ರಿಯೇ 400ಕ್ಕೂ ಹೆಚ್ಚು ಪೊಲೀಸರು ಆಗಮಿಸಿದ್ದಾರೆ.

ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ನಗರದಲ್ಲಿ ಶಾಂತಿ ಕಾಪಾಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.


ನಿನ್ನೆ ರಾತ್ರಿ ಕಾಮತ್ ಪೆಟ್ರೋಲ್ ಬಂಕ್ ಎದುರಿನ ಭಾರತಿ ಕಾಲನಿಯಲ್ಲಿ ಹರ್ಷ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.

 ಸುನ್ನೀ ಸೆಂಟರ್ ಸುರತ್ಕಲ್ ನೂತನ ಕಛೇರಿ ಉದ್ಘಾಟನೆ

ಸುನ್ನೀ ಸೆಂಟರ್ ಸುರತ್ಕಲ್ ನೂತನ ಕಛೇರಿ ಉದ್ಘಾಟನೆ


 ಸುನ್ನೀ ಸೆಂಟರ್ ಸುರತ್ಕಲ್ ನೂತನ ಕಛೇರಿ ಉದ್ಘಾಟನೆ

ಸುರತ್ಕಲ್ ಫೆಬ್ರವರಿ 20 : ಎಸ್. ವೈ.ಎಸ್ ಸುರತ್ಕಲ್ ಸೆಂಟರ್ ಹಾಗೂ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್  ಇದರ ಜಂಟಿ ಆಶ್ರಯದಲ್ಲಿ ಸುನ್ನೀ ಸೆಂಟರ್ ಸುರತ್ಕಲ್ ನೂತನ ಕಛೇರಿಯು ಎಸ್.ವೈ.ಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷರಾದ   ಅಬ್ದುಲ್ ಲತೀಫ್ ಸಖಾಫಿ ಕಿನ್ನಿಗೋಳಿಯವರ ಅಧ್ಯಕ್ಷತೆಯಲ್ಲಿ  ಅಸ್ಸಯ್ಯಿದ್ ಹಾಮಿದ್ ಇಸ್ಮಾಯಿಲ್ ಅಲ್ ಬುಖಾರಿ ತಂಙಳ್ ಕಾಟಿಪಳ್ಳ  ಉದ್ಘಾಟಿಸಿದರು. 

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ. ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಸಾಂತ್ವನ ವಿಭಾಗದ  ಕಾರ್ಯದರ್ಶಿ ವಿ.ಯು ಇಸ್ಹಾಖ್ ಝುಹ್ರಿ ಸೂರಿಂಜೆ ಮುಖ್ಯ ಪ್ರಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ರೀಡ್ ಪ್ಲಸ್ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್,ಎಸ್.ಎಮ್.ಎ ಸುರತ್ಕಲ್ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಮುಕ್ಕ, ಎಸ್.ಎಮ್.ಎ ಸುರತ್ಕಲ್ ಝೋನ್ ಅಧ್ಯಕ್ಷರಾದ ಹಮೀದ್ ಸುರತ್ಕಲ್, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ  ಅಬ್ದುರ್ರಹ್ಮಾನ್ ಪ್ರಿಂಟೆಕ್, ಎಸ್ಸೆಸ್ಸೆಫ್ ದ.ಕ ಜಿಲ್ಲೆ ಮಾಜಿ ಕ್ಯಾಂಪಸ್ ಕಾರ್ಯದರ್ಶಿ  ಹಾಜಿ ಮುಹಮ್ಮದ್ ಆಸಿಫ್ ಕೃಷ್ಣಾಪುರ, ಸುರತ್ಕಲ್ ಡಿವಿಷನ್ ಮಾಜಿ ಉಪಾಧ್ಯಕ್ಷರಾದ ಹೈದರ್ ಮದನಿ ಸೂರಿಂಜೆ,  ಎಸ್ಸೆಸ್ಸೆಫ್  ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ 4ನೇ ಬ್ಲಾಕ್, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ದಅವಾ ಕಾರ್ಯದರ್ಶಿ ಆರೀಫ್ ಝುಹ್ರಿ ಮುಕ್ಕ ಉಪಸ್ಥಿತರಿದ್ದರು.

 ಎಸ್.ವೈಎಸ್ ಸುರತ್ಕಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಶೇಡಿಗುರಿ ಸ್ವಾಗತಿಸಿ. ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ವಂದಿಸಿದರು.




 ಬ್ರಿಟನ್  ನಿಂದ ಆಮದು ಮಾಡಲಾಗಿದ್ದ ನೂರಾರು ಕಂಟೇನರ್ ತ್ಯಾಜ್ಯವನ್ನು ವಾಪಸ್ ಕಳುಹಿಸಿದ ಶ್ರೀಲಂಕಾ

ಬ್ರಿಟನ್ ನಿಂದ ಆಮದು ಮಾಡಲಾಗಿದ್ದ ನೂರಾರು ಕಂಟೇನರ್ ತ್ಯಾಜ್ಯವನ್ನು ವಾಪಸ್ ಕಳುಹಿಸಿದ ಶ್ರೀಲಂಕಾ

 

ಬ್ರಿಟನ್  ನಿಂದ ಆಮದು ಮಾಡಲಾಗಿದ್ದ ನೂರಾರು ಕಂಟೇನರ್ ತ್ಯಾಜ್ಯವನ್ನು ವಾಪಸ್ ಕಳುಹಿಸಿದ ಶ್ರೀಲಂಕಾ

ಕೊಲಂಬೋ: ಅಕ್ರಮವಾಗಿ ಆಮದು ಮಾಡಲಾಗಿದ್ದ ಸಾವಿರಾರು ಟನ್ ತೂಕದ ತ್ಯಾಜ್ಯ ವಸ್ತುಗಳನ್ನು ತುಂಬಿದ ನೂರಾರು ಕಂಟೇನರ್‍ಗಳನ್ನು ಶ್ರೀಲಂಕಾ ಸೋಮವಾರ ಮರಳಿ ಬ್ರಿಟನ್‍ಗೆ ಸಾಗಾಟ ಮಾಡಿದೆ.

ಈ ತ್ಯಾಜ್ಯವಸ್ತುಗಳು ಶ್ರೀಲಂಕಾಗೆ 2017 ಹಾಗೂ 2019ರ ನಡುವೆ ಬಂದಿತ್ತಲ್ಲದೆ ಅವುಗಳನ್ನು ಬಳಸಿದ ಮ್ಯಾಟ್ರೆಸ್‍ಗಳು, ಕಾರ್ಪೆಟ್‍ಗಳು ಮತ್ತು ರಗ್‍ಗಳು ಎಂದು ಬಣ್ಣಿಸಲಾಗಿತ್ತು.

ಕಂಟೇನರ್‍ಗಳು ಆಗಮಿಸುವಾಗ ಅವುಗಳು ಅಸಾಧ್ಯವಾದ ವಾಸನೆಯನ್ನು ಹೊರಸೂಸಿಸುತ್ತಿದ್ದವು ಎನ್ನಲಾಗಿದೆ. ಇಂದು ವಾಪಸ್ ಕಳುಹಿಸಲಾದ 45 ಕಂಟೇನರ್‍ಗಳು ಇಲ್ಲಿಯವರೆಗೆ ವಾಪಸ್ ಕಳುಹಿಸಲಾದ 263 ಕಂಟೇನರ್‍ಗಳ ಪೈಕಿ ಕೊನೆಯದಾಗಿದ್ದವು. ಒಟ್ಟು  ಸುಮಾರು 3,000 ಟನ್ ವೇಸ್ಟ್ ಇಂಗ್ಲೆಂಡ್‍ನಿಂದ ಶ್ರೀಲಂಕಾಗೆ ಆಗಮಿಸಿತ್ತೆಮದು ತಿಳಿದು ಬಂದಿದೆ.

ಇಂತಹ ಅಪಾಯಕಾರಿ ತ್ಯಾಜ್ಯವನ್ನು ಮತ್ತೆ ಆಮದು ಮಾಡುವ ಯತ್ನಗಳು ನಡೆಯಬಹುದು ಆದರೆ ನಾವು ಇದು ಮತ್ತೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಕಸ್ಟಮ್ಸ್ ಮುಖ್ಯಸ್ಥ ವಿಜಿತಾ ರವಿಪ್ರಿಯ ಹೇಳಿದ್ದಾರೆ.

ವೈದ್ಯಕೀಯ ತ್ಯಾಜ್ಯ ಹೊಂದಿದ್ದ ಮೊದಲ ಬ್ಯಾಚಿನ 21 ಕಂಟೇನರ್‍ಗಳನ್ನು ಸೆಪ್ಟೆಂಬರ್ 2020ರಲ್ಲಿ ಬ್ರಿಟನ್‍ಗೆ ವಾಪಸ್ ಕಳುಹಿಸಲಾಗಿತ್ತು. ಸ್ಥಳೀಯ ಕಂಪೆನಿಯೊಂದು ಈ ತ್ಯಾಜ್ಯವನ್ನು ಬ್ರಿಟನ್‍ನಿಂದ ಆಮದು ಮಾಡಿಕೊಂಡಿತ್ತಲ್ಲದೆ ಬಳಸಿದ ಮ್ಯಾಟ್ರೆಸ್‍ಗಳಲ್ಲಿನ ಸ್ಪ್ರಿಂಗ್ ಮತ್ತು ಹತ್ತಿಯನ್ನು ವಿದೇಶಗಳಲ್ಲಿರುವ ತಯಾರಕರಿಗೆ ಕಳುಹಿಸುವ ಉದ್ದೇಶ ಹೊಂದಿತ್ತೆಂದು ಹೇಳಲಾಗಿತ್ತು.

ಆದರೆ ಈ ಕುರಿತು ಯಾವುದೇ ಸೂಕ್ತ ಸಾಕ್ಷ್ಯಗಳು ಕಸ್ಟಮ್ಸ್ ಗೆ ದೊರೆತಿರಲಿಲ್ಲ. ಸ್ಥಳೀಯ ಪರಿಸರಾಸಕ್ತರ ಗುಂಪೊಂದು ಶ್ರೀಲಂಕಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಇಂತಹ ಅಪಾಯಕಾರಿ ತ್ಯಾಜ್ಯವನ್ನು ವಾಪಸ್ ಕಳುಹಿಸಬೇಕೆಂದು ಕೋರಿತ್ತು. ಅಪಾಯಕಾರಿ ತ್ಯಾಜ್ಯ ಸಾಗಾಟ ಕುರಿತಾದ ಅಂತರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಈ ತ್ಯಾಜ್ಯವನ್ನು ಆಮದು ಮಾಡಲಾಗಿತ್ತೆಂದು ಕಸ್ಟಮ್ಸ್ ಹೇಳಿದೆ.

ಈ ತ್ಯಾಜ್ಯ ಆಮದು ಮಾಡಿದ ಸಂಸ್ಥೆಯು ಸುಮಾರು 180 ಟನ್ ತ್ಯಾಜ್ಯವನ್ನು  ಭಾರತ ಮತ್ತು ದುಬೈಗೆ 2017 ಮತ್ತು 2018ಗೆ ಮರುಸಾಗಿಸಿತ್ತು ಎಂದು 2019ರಲ್ಲಿ ಶ್ರೀಲಂಕಾ ನಡೆಸಿದ ಸಂಶೋಧನೆ ತಿಳಿಸಿತ್ತು.

ಫಿಲಿಪ್ಪೀನ್ಸ್, ಇಂಡೊನೇಷ್ಯಾ ಮತ್ತು ಮಲೇಷ್ಯಾ ಕೂಡ ನೂರಾರು ಕಂಟೇನರ್‍ಗಳನ್ನು ತಿರಸ್ಕರಿಸಿ  ಮತ್ತೆ ಅವುಗಳನ್ನು ಕಳುಹಿಸಿದ ದೇಶಗಳಿಗೇ ವಾಪಸ್ ಕಳುಹಿಸಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಭಂಡ ಧೈರ್ಯ ಬೇಡ: ಮಂಗಳೂರು ಕಮಿಷನರ್ ಶಶಿಕುಮಾರ್

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಭಂಡ ಧೈರ್ಯ ಬೇಡ: ಮಂಗಳೂರು ಕಮಿಷನರ್ ಶಶಿಕುಮಾರ್

 

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಭಂಡ ಧೈರ್ಯ ಬೇಡ: ಮಂಗಳೂರು ಕಮಿಷನರ್ ಶಶಿಕುಮಾರ್

ಮಂಗಳೂರು: ಫೇಸ್‌ಬುಕ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಭಂಡ ಧೈರ್ಯ ಬೇಡ. ಸುಳ್ಳು ಸುದ್ದಿ ಹರಡಿ ಶಾಂತಿ ಕದಡಲು ಪ್ರಯತ್ನಿಸುವ ಸಮಾಜಘಾತುಕರ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡುತ್ತಾ ಈ ಎಚ್ಚರಿಕೆ ನೀಡಿದ ಅವರು, ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರ ವಿರುದ್ಧ ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಮಂಗಳೂರು ಮುಸ್ಲಿಂ ಹೆಸರಿನ ಫೇಸ್‌ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಫೇಸ್‌ಬುಕ್‌ನಲ್ಲಿರುವರ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಕೋಮುಭಾವನೆ ಸೃಷ್ಟಿಸಿ, ಜಾತಿ ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆ ಮಡಿಕೊಡುವ ಎಲ್ಲಾ ಪೊಸ್ಟ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಇಂತಹ ಪೋಸ್ಟ್‌ಗಳನ್ನು ಲೈಕ್, ಶೇರ್, ಫಾರ್ವಡ್ ಹಾಗೂಆಕ್ಷೇಪಾರ್ಹವಾಗಿ ಕಮೆಂಟ್ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ವಿದ್ಯಾರ್ಥಿ, ಕಾರ್ಮಿಕರು, ಮಹಿಳೆಯರು, ರಾಜಕೀಯ ಪಕ್ಷದ ನಾಯಕರು, ಕೆಲವೊಂದು ವ್ಯಕ್ತಿಗಳು ಸೇರಿದಂತೆ ಎಲ್ಲಾ ಸ್ಥರದ ಸಾಮಾಜಿಕ ಜಾಲತಾಣಗಳ ಗುಂಪುಗಳ ಮೇಲೂ ಪೊಲೀಸ್ ಸೈಬರ್ ಘಟಕ ನಿಗಾ ವಹಿಸಿದೆ. ಅಲ್ಲಿ ಹರಿದಾಡುವ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಅತ್ಯಂತ ಹತ್ತಿರದಿಂದ ಪರಿಶೀಲಿಸುತ್ತಿದೆ. ಇದಕ್ಕಾಗಿ ಈಗಾಗಲೇ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡದಲ್ಲಿಯೇ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಆರು ಮಂದಿ ತಜ್ಞರು, ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡ ಸುಸಜ್ಜಿತ ವಿಭಾಗವನ್ನು ಆರಂಭಿಸಲಾಗಿದೆ. ಇದು ರಾಜ್ಯ ಗುಪ್ತಚರ ಇಲಾಖೆಯ ಜತೆಗೂ ಸಮನ್ವಯದಿಂದ ಕಾರ್ಯಾರಂಭಿಸಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಪ್ರವಾದಿ ನಿಂದನೆ ಮಾಡಿದವರನ್ನು ಎಂದಿಗೂ ಬಿಡುವುದಿಲ್ಲ ಸೇರಿದಂತೆ ಆಕ್ಷೇಪಾರ್ಹ ಹೇಳಿಕೆಗಳನ್ನು ಹೊಂದಿರುವ ಈ ಮಂಗಳೂರು ಮುಸ್ಲಿಮ್ಸ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಖಾಸಗಿ ಸುದ್ದಿವಾಹಿನಿಯೊಂದರ ಮುಖ್ಯಸ್ಥರಿಗೂ ಎಚ್ಚರಿಕೆ ನೀಡಲಾಗಿದೆ.

ಸಂಘಟನೆ, ವ್ಯಕ್ತಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 1064 ವಿವಿಧ ವ್ಯಕ್ತಿ, ಗುಂಪುಗಳ ಮೇಲೆ ಕಠಿಣ ನಿಗಾ ಇರಿಸಲಾಗಿದೆ. ಆನ್‌ಲೈನ್ ಮಾಧ್ಯಮ, ವೆಬ್ ಪೇಜ್, ಮುದ್ರಣ ಮಾಧ್ಯಮ ಮೇಲೂ ನಿಗಾ ವಹಿಸಲಾಗಿದೆ. ಈ ಹಿಂದಿನ ಸೈಬರ್ ಅಪರಾಧಿಗಳು, ದ್ವೇಷ ಭಾಷಣ, ಅಕ್ಷೇಪಾರ್ಹ ಹೇಳಿಕೆಗಳನ್ನು ನೀಡುವವರ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ 10 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗುತ್ತಿದೆ. ಕ್ಷಿಪ್ರ ಮಾಹಿತಿ ಒದಗಿಸುವಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಶಕ್ತಿಯುತ ತಾಣವಾಗಿದ್ದು, ಅದರ ಸದ್ಬಳಕೆ ಮಾಡಬೇಕು. ಅದನ್ನು ಬಿಟ್ಟು ಶಾಂತಿಯಿಂದ ಕೂಡಿದ ನಗರದಲ್ಲಿ ಕೋಮು ದ್ವೇಷ ಹರಡುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಸಿದರು.

ಪೊಲೀಸರ ಸಹಕಾರ ಪಡೆದು ಅವೈಜ್ಞಾನಿಕ ರಸ್ತೆ ಉಬ್ಬುಗಳ ತೆರವು: ಸಚಿವ ಸಿ.ಸಿ.ಪಾಟೀಲ್

ಪೊಲೀಸರ ಸಹಕಾರ ಪಡೆದು ಅವೈಜ್ಞಾನಿಕ ರಸ್ತೆ ಉಬ್ಬುಗಳ ತೆರವು: ಸಚಿವ ಸಿ.ಸಿ.ಪಾಟೀಲ್

ಪೊಲೀಸರ ಸಹಕಾರ ಪಡೆದು ಅವೈಜ್ಞಾನಿಕ ರಸ್ತೆ ಉಬ್ಬುಗಳ ತೆರವು: ಸಚಿವ ಸಿ.ಸಿ.ಪಾಟೀಲ್

ಬೆಂಗಳೂರು: ‘ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಅವೈಜ್ಞಾನಿಕ ರಸ್ತೆ ಉಬ್ಬು(ಹಂಪ್ಸ್)ಗಳನ್ನು ತೆರವುಗೊಳಿಸುವ ಸಂಬಂಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಕುಮಾರ ಬಂಗಾರಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವು ಮಾಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಈಗಾಗಲೇ ಅಧಿಕಾರಿಗಳ ಆ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆಲವುಗಳನ್ನು ಅಪಘಾತ ಸಂಭವಿಸುತ್ತವೆಂದು ಗ್ರಾಮಸ್ಥರು ರಸ್ತೆ ಉಬ್ಬುಗಳ ತೆರವಿಗೆ ಆಕ್ಷೇಪಿಸುತ್ತಿದ್ದಾರೆ.

ಆ ಹಿನ್ನೆಲೆಯಲ್ಲಿ ಪೊಲೀಸರ ಸಹಕಾರ ಪಡೆದು ಅವೈಜ್ಞಾನಿಕವಾಗಿ ಹಾಕಿರುವ ರಸ್ತೆ ಉಬ್ಬಗಳನ್ನು ತೆರವು ಮಾಡಲಾಗುವುದು. ಜೊತೆಗೆ ಸದಸ್ಯರಾದ ಕುಮಾರ ಬಂಗಾರಪ್ಪ ನೀಡಿರುವ ಸಲಹೆಯಂತೆ ರಸ್ತೆಗಳನ್ನು ಇಂಡಿಯನ್ ರೋಡ್ ಕಾಂಗ್ರೆಸ್(ಐಆರ್‍ಸಿ) ಮಾನದಂಡಗಳ ಅನ್ವಯ ರಸ್ತೆ ಗುಣಮಟ್ಟ ಕಾಪಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

 “ಬಾಬಾ ಮುಖ್ಯಮಂತ್ರಿ’’ ಎಂದ ಅಖಿಲೇಶ್‌ ಯಾದವ್‌ ರನ್ನು ʼಪುಟ್ಟ ಬಾಲಕʼ ಎಂದು ಕರೆದ ಆದಿತ್ಯನಾಥ್

“ಬಾಬಾ ಮುಖ್ಯಮಂತ್ರಿ’’ ಎಂದ ಅಖಿಲೇಶ್‌ ಯಾದವ್‌ ರನ್ನು ʼಪುಟ್ಟ ಬಾಲಕʼ ಎಂದು ಕರೆದ ಆದಿತ್ಯನಾಥ್


 “ಬಾಬಾ ಮುಖ್ಯಮಂತ್ರಿ’’ ಎಂದ ಅಖಿಲೇಶ್‌ ಯಾದವ್‌ ರನ್ನು ʼಪುಟ್ಟ ಬಾಲಕʼ ಎಂದು ಕರೆದ ಆದಿತ್ಯನಾಥ್

ಹೊಸದಿಲ್ಲಿ: ಅಖಿಲೇಶ್ ಯಾದವ್ ಅವರು ತಮ್ಮ ಜೀವನದುದ್ದಕ್ಕೂ ಬಬುವಾ (ಚಿಕ್ಕ ಹುಡುಗ) ಆಗಿಯೇ ಇರುತ್ತಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿಯನ್ನು ಉದ್ದೇಶಿಸಿ ಹೇಳಿದ್ದಾರೆ.

 ಬಿಜೆಪಿ ಸರಕಾರಕ್ಕೆ  ಗ್ಯಾಜೆಟ್ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಟ್ಯಾಬ್ಲೆಟ್ ಹಾಗೂ  ಸ್ಮಾರ್ಟ್‌ಫೋನ್ ವಿತರಣೆಯನ್ನು ವಿಳಂಬ ಮಾಡಿದೆ ಎಂಬ ಅಖಿಲೇಶ್ ಆರೋಪಕ್ಕೆ ಆದಿತ್ಯನಾಥ್  ಕುಟುಕಿದ್ದಾರೆ.

2017 ರಲ್ಲಿ ಬಿಜೆಪಿಯ ಚುನಾವಣಾ ಭರವಸೆ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಿಸಲು ವಿಳಂಬವಾಯಿತು ಎಂದು ಅಖಿಲೇಶ್ ಯಾದವ್ ಇತ್ತೀಚೆಗೆ ಹೇಳಿದ್ದರು.  ಏಕೆಂದರೆ ಯೋಗಿ ಆದಿತ್ಯನಾಥ್ 'ಬಾಬಾ ಮುಖ್ಯ ಮಂತ್ರಿ' . ಅವುಗಳನ್ನು ಹೇಗೆ ನಿರ್ವಹಿಸಬೇಕೆಂದು ಅವರಿಗೆ ತಿಳಿದಿಲ್ಲ ಎಂದಿದ್ದಾರೆ.

ಇದನ್ನು "ಬಾಲಿಶ" ಹೇಳಿಕೆ ಎಂದು ಕರೆದ ಆದಿತ್ಯನಾಥ್ , "ಅಖಿಲೇಶ್ ಯಾದವ್ ಅವರು ತಮ್ಮ ಜೀವನದುದ್ದಕ್ಕೂ 'ಬಬುವಾ' ಆಗಿ ಉಳಿಯುತ್ತಾರೆ. ಅಂತಹ ಕಾಮೆಂಟ್‌ಗಳು ಅವರ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ದೂರವಿರುತ್ತವೆ" ಎಂದರು.

"ಬಬುವಾ" ಎಂಬುದು ಅಖಿಲೇಶ್ ಯಾದವ್‌ಗೆ ಹೆಚ್ಚಾಗಿ ಬಳಸಲಾಗುವ ಅಡ್ಡಹೆಸರು, ಇದು ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರನ್ನು ಉಲ್ಲೇಖಿಸುತ್ತದೆ.

ತಮ್ಮ ಸರಕಾರವು ಉತ್ತಮ ಆಡಳಿತದ ಭಾಗವಾಗಿ ಐಟಿಯನ್ನು ಬಳಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. "ಹಿಂದಿನ ಸರಕಾರಗಳ ಅವಧಿಯಲ್ಲಿ ಮಧ್ಯವರ್ತಿಗಳು ಅಭಿವೃದ್ಧಿ ಯೋಜನೆಗಳ ಹಣದ ದೊಡ್ಡ ಭಾಗವನ್ನು ನುಂಗಲು ಬಳಸುತ್ತಿದ್ದಾಗ ದುಷ್ಕೃತ್ಯಗಳನ್ನು ಕೊನೆಗೊಳಿಸಲು ಸರಕಾರವು ಇ-ಟೆಂಡರ್ ವಿಧಾನವನ್ನು ಅಳವಡಿಸಿಕೊಂಡಿದೆ" ಎಂದು ಅವರು ತಮ್ಮ ಹಿಂದಿನ ಅಖಿಲೇಶ್ ಯಾದವ್ ಅವರನ್ನು ಉಲ್ಲೇಖಿಸಿ ಹೇಳಿದರು.

 ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸಲು ಅವಕಾಶ ನೀಡಿದೆ: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎ.ಪಿ.ಅಬೂಬಕರ್ ಮುಸ್ಲಿಯಾರ್

ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸಲು ಅವಕಾಶ ನೀಡಿದೆ: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎ.ಪಿ.ಅಬೂಬಕರ್ ಮುಸ್ಲಿಯಾರ್


 ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸಲು ಅವಕಾಶ ನೀಡಿದೆ: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎ.ಪಿ.ಅಬೂಬಕರ್ ಮುಸ್ಲಿಯಾರ್

ಬೆಂಗಳೂರು: ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತನ್ನ ಧರ್ಮವನ್ನು ಅನುಸರಿಸಲು ಅವಕಾಶ ನೀಡಿದೆ. ಆಡಳಿತ ನಡೆಸುವ ಸರಕಾರಗಳು ಯಾವುದೇ ಪಕ್ಷದವರಾಗಲಿ, ಸಂವಿಧಾನದ ಚೌಕಟ್ಟಿನಲ್ಲಿ ನಡೆದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಗ್ರಾಂಡ್ ಮುಫ್ತಿ ಆಫ್ ಇಂಡಿಯ ಸುಲ್ತಾನುಲ್ ಉಲಮ ಎ.ಪಿ ಅಬೂಬಕರ್ ಮುಸ್ಲಿಯಾರ್ ತಿಳಿಸಿದರು. 

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಂವಿಧಾನದ ಚೌಕಟ್ಟು ಮೀರಿ ನಡೆದಾಗ ಸಮಸ್ಯೆ ಗಳು ಎದುರಾಗುತ್ತವೆ ಎಂದರು.

ನಮ್ಮ ದೇಶದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಪ್ರತಿಯೊಬ್ಬರೂ ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಅನುಸರಿಸಲು ಮುಕ್ತವಾಗಿದ್ದಾರೆ ಎಂದರು.

ಕರ್ನಾಟಕದಲ್ಲಿ ಇತ್ತೀಚೆಗೆ ಹಿಜಾಬ್ ಗೆ ಸಂಬಂಧಿಸಿದಂತೆ ವಿವಾದ ಎಬ್ಬಿಸಲಾಗಿದೆ. ಹಿಜಾಬ್ ಅನ್ನು ಮುಸ್ಲಿಮ್ ಹೆಣ್ಣು ಮಕ್ಕಳು ನಿನ್ನೆ, ಮೊನ್ನೆಯಿಂದ ಧರಿಸುತ್ತಿಲ್ಲ. ಶತಮಾನಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಈಗ ಯಾಕೆ ವಿವಾದ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಸಿಖ್ ಸಮುದಾಯದ ಗಂಡು ಮಕ್ಕಳು ತಮ್ಮ ತಲೆಗೆ ಪೇಟ ಕಟ್ಟುತ್ತಾರೆ. ಯುವಕರು ಹಾಗೂ ಪುರುಷರು ಗಡ್ಡ ಬಿಡುತ್ತಾರೆ. ಇದು ಅವರ ಸಂಸ್ಕೃತಿ.  ಕ್ರೈಸ್ತ ನನ್ ಗಳು ತಮ್ಮ ತಲೆಗೆ ಸ್ಕಾರ್ಫ್ ಕಟ್ಟುತ್ತಾರೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ನಾವು ಮನವಿ ಮಾಡುತ್ತೇವೆ. ನ್ಯಾಯಾಲಕ್ಕೂ ಇದನ್ನೆ ಕೋರುತ್ತೇವೆ ಎಂದು ಅವರು ಹೇಳಿದರು.

ನಮ್ಮ ಕೇರಳ ರಾಜ್ಯದಲ್ಲಿ ಶಬರಿಮಲೆ‌ ದೇವಸ್ಥಾನ ಇದೆ. ಅಲ್ಲಿ ಹಿಂದೂಗಳು ಕಪ್ಪು ಬಟ್ಟೆ ಧರಿಸಿ, ಮಾಲೆ ಹಾಕುತ್ತಾರೆ. ಹಲವಾರು ವಿದ್ಯಾರ್ಥಿಗಳು ಇದನ್ನು ಪಾಲಿಸುತ್ತಾರೆ. ಅವರು ತರಗತಿಗಳಲ್ಲಿ ವ್ರತ ಆಚರಿಕೊಂಡು ಬಂದರೆ ಯಾರಿಗೂ ಅಭ್ಯಂತರ ಇರಲ್ಲ. ಏಕೆಂದರೆ ಅದು ಅವರ ಸಂಸ್ಕೃತಿ ಎಂದು ಗೊತ್ತಿದೆ ಎಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಲಿಕಟ್ ನ ಮಕರ್ಝ್ ನಾಲೇಜ್ ಸಿಟಿ ವ್ಯವಸ್ಥಾಪಕ  ನಿರ್ದೇಶಕ ಡಾ. ಎ.ಪಿ ಅಬ್ದುಲ್ ಹಕೀಮ್ ಅಝ್ಹರಿ, ಜುಮ್ಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ಉಪಸ್ಥಿತರಿದ್ದರು.



Sunday, 20 February 2022

ಶಿವಮೊಗ್ಗ ಬಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್ : ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು : ಮಾಜಿ ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ ಬಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್ : ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು : ಮಾಜಿ ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ ಬಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್ : ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದು, ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಹರ್ಷ ಕೊಲೆಯನ್ನು ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು.

ಯಾವ ಸಂಘಟನೆಯವರೂ ಮಾಡಿದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ಕೊಲೆಯಾಗಿದೆ. ಗೃಹ ಸಚಿವ ಅರಗಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದರು.

ಶಿವಮೊಗ್ಗದ ನಗರದ ಭಾರತಿ ಕಾಲನಿಯಲ್ಲಿ ಭಾನುವಾರ ರಾತ್ರಿ ಸೀಗೆಹಟ್ಟಿಯ ಹರ್ಷಶೆಟ್ಟಿ (22) ಎಂಬ ಯುವಕಶಿವಮೊಗ್ಗ ಬಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್ : ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು : ಮಾಜಿ ಸಿಎಂ ಸಿದ್ದರಾಮಯ್ಯ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಹರ್ಷ ಕೊಲೆಯನ್ನು ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು.

ಯಾವ ಸಂಘಟನೆಯವರೂ ಮಾಡಿದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ಕೊಲೆಯಾಗಿದೆ. ಗೃಹ ಸಚಿವ ಅರಗಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದರು.

ಶಿವಮೊಗ್ಗದ ನಗರದ ಭಾರತಿ ಕಾಲನಿಯಲ್ಲಿ ಭಾನುವಾರ ರಾತ್ರಿ ಸೀಗೆಹಟ್ಟಿಯ ಹರ್ಷಶೆಟ್ಟಿ (22) ಎಂಬ ಯುವಕನನ್ನು ದುಷ್ಕರ್ಮಿಗಲು ಹತ್ಯೆ ಮಾಡಿದ್ದಾರೆ.ನನ್ನು ದುಷ್ಕರ್ಮಿಗಲು ಹತ್ಯೆ ಮಾಡಿದ್ದಾರೆ.