Friday, 7 January 2022

ಶಿವಮೊಗ್ಗ: ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದ ಬೈಕ್; ಸವಾರ ಪಾರು


 ಶಿವಮೊಗ್ಗ: ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದ ಬೈಕ್; ಸವಾರ ಪಾರು

ಶಿವಮೊಗ್ಗ: ನಗರದ ಜೈಲ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಅಗೆಯಲಾಗಿರುವ ಗುಂಡಿಗೆ ಬೈಕ್ ಬಿದ್ದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಆದರೆ ಅದೃಷ್ಟವಶಾತ್ ಬೈಕ್ ಸವಾರ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಗುಂಡಿ ಅಗೆಯಲಾಗಿದೆ. ಹೀಗೆ ಅಗೆದ ಗುಂಡಿಗಳ ಸುತ್ತ ಬ್ಯಾರಿಕೇಡ್ ಅಳವಡಿಸದಿರುವುದು ಈ ರೀತಿ ಅನಾಹುತಕ್ಕೆ ಕಾರಣವಾಗುತ್ತಿದೆ. ಜೈಲು ರಸ್ತೆಯಲ್ಲಿ ಬಂದ ಬೈಕ್ ಸವಾರನಿಗೆ ರಸ್ತೆಯಲ್ಲಿದ್ದ ಗುಂಡಿ ಕಾಣಿಸದೆ, ನಿಯಂತ್ರಣ ತಪ್ಪಿ ಬೈಕ್‌ ನೇರವಾಗಿ ಗುಂಡಿಗೆ ಬಿದ್ದಿದೆ. ಈ ವೇಳೆ ಬೈಕ್ ಸವಾರ ಬೈಕ್ ಬಿಟ್ಟು ಹಾರಿದ್ದರಿಂದ ಗುಂಡಿಗೆ ಬೀಳದೆ ಪಾರಾಗಿದ್ದಾನೆ.


SHARE THIS

Author:

0 التعليقات: