ಮುದ್ದೇಬಿಹಾಳ: ರಾಜ್ಯದ ಹೆಸರಾಂತ ಟ್ರಾವೆಲ್ಸ್ ಸಂಸ್ಥೆಯು ಮಾಲಕ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಪ್ರಕಾಶ್ ಟ್ರಾವೆಲ್ಸ್ಬಸ್ ನ ಮಾಲೀಕರಾದ ಪ್ರಕಾಶ್ ಎಂಬುವರು ಕಾಣೆಯಾಗಿದ್ದು, ಅವರ ಕಾರು ಹಾಗೂ ಮೊಬೈಲ್ ಹೊಸನಗರದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿದೆ.
ಸಾಗರ ನಿವಾಸಿಯಾಗಿರುವ ಪ್ರಕಾಶ್, ಮೊನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಮನೆಗೆ ವಾಪಸ್ ಆಗಿರಲಿಲ್ಲ. ಮೊಬೈಲ್ ಮಾತ್ರ ರಿಂಗ್ ಆಗ್ತಾ ಇತ್ತು. ಇನ್ನು ಕಾರು ಬೆಳಗ್ಗೆಯಿಂದ ಪಟಗುಪ್ಪೆ ಸೇತುವೆ ಮೇಲೆ ನಿಂತಿದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಾರು ಹಾಗೂ ಮೊಬೈಲ್ ಸಾಗರದ ಪ್ರಕಾಶ್ ರದ್ದು ಎಂದು ತಿಳಿದು ಬಂದಿದೆ.
ಈ ಕುರಿತು ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.
0 التعليقات: