Sunday, 16 January 2022

​ಪೊಲೀಸ್ ದೌರ್ಜನ್ಯ ವಿರುದ್ಧ ಇಂದು ತ್ರಿಪುರಾ ಬಂದ್‌ಗೆ ಕರೆ

​ಪೊಲೀಸ್ ದೌರ್ಜನ್ಯ ವಿರುದ್ಧ ಇಂದು ತ್ರಿಪುರಾ ಬಂದ್‌ಗೆ ಕರೆ

ಗುವಾಹತಿ: ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರ ಬೆಂಗಾವಲು ವಾಹನ ತೆರಳುವ ಮಾರ್ಗದ ಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದಕ್ಕಾಗಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿ ಸೋಮವಾರ ಮುಂಜಾನೆಯಿಂದ ಮುಸ್ಸಂಜೆವರೆಗೆ ಬಂದ್ ಆಚರಿಸಲು ರಾಜ್ಯದ ಪ್ರಬಲ ವಿದ್ಯಾರ್ಥಿ ಸಂಘಟನೆ ಟ್ರೈಬಲ್ ಸ್ಟೂಡೆಂಟ್ಸ್ ಫೆಡರೇಷನ್ (ಟಿಎಸ್‌ಎಫ್) ಕರೆ ನೀಡಿದೆ.

"ನಮ್ಮ ದ್ವಿಚಕ್ರ ವಾಹನ ಕೆಟ್ಟು ಹೋದ ಕಾರಣ ಅಲ್ಲಿ ನಿಲ್ಲಿಸಲಾಗಿತ್ತೇ ವಿನಃ ಮುಖ್ಯಮಂತ್ರಿಯವರ ಮಾರ್ಗಕ್ಕೆ ತಡೆ ಒಡ್ಡುವುದು ತಮ್ಮ ಉದ್ದೇಶವಾಗಿರಲಿಲ್ಲ" ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದರೂ, ಪೊಲೀಸರು ಇಬ್ಬರು ಬುಡಕಟ್ಟು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿದ್ದರು.

ತಮ್ಮನ್ನು ನಿರ್ದಯವಾಗಿ ಥಳಿಸಿದ್ದು ಮಾತ್ರವಲ್ಲದೇ, ದೈಹಿಕ ಹಲ್ಲೆ ನಡೆಸಿದ ಸಂಚಾರಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ತೊಡೆ ಸಂಧಿಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾಗಿ ವಿದ್ಯಾರ್ಥಿ ದೂರಿದ್ದಾರೆ.

ಈ ಘಟನೆ ಬಗ್ಗೆ ತನಿಖೆಗೆ ತ್ರಿಪುರಾ ಪೊಲೀಸ್ ಅಧಿಕಾರಿಗಳು ಆದೇಶಿಸಿ, ಘಟನೆಯ ಸಂಬಂಧ ಆರೋಪಿ ಪೊಲೀಸ್‌ನನ್ನು ಕರ್ತವ್ಯದಿಂದ ಹೊರಗಿಟ್ಟಿದ್ದೂ, ಟಿಎಸ್‌ಎಫ್ ಬಂದ್‌ಗೆ ಕರೆ ನೀಡಿದೆ. ಅಗರ್ತಲ ಪ್ರೆಸ್‌ಕ್ಲಬ್‌ನಲ್ಲಿ ಟಿಎಸ್‌ಎಫ್ ಪ್ರಧಾನ ಕಾರ್ಯದರ್ಶಿ ಜಾನ್ ದೇವವರ್ಮಾ ಮತ್ತು ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ ಟಿಎಸ್‌ಎಫ್ ಸಲಹೆಗಾರ ಉಪೇಂದ್ರ ದೇವವರ್ಮ ಬಂದ್‌ಗೆ ಕರೆ ನೀಡಿ, ಪೊಲೀಸ್ ಪೇದೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದರು.


 


 


SHARE THIS

Author:

0 التعليقات: