Sunday, 23 January 2022

ಮೈಸೂರು, ತುಮಕೂರು, ಹಾಸನದಲ್ಲಿ ಕೊರೋನಾ ಬಿಗ್ ಬ್ಲಾಸ್ಟ್: ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಏರಿಕೆ


ಮೈಸೂರು, ತುಮಕೂರು, ಹಾಸನದಲ್ಲಿ ಕೊರೋನಾ ಬಿಗ್ ಬ್ಲಾಸ್ಟ್: ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 50,210 ಜನರಿಗೆ ಕೊರೊನಾ ಸೋಂಕು ತಗುಲಿದೆ. 19 ಜನ ಸೋಂಕಿತರು ಮೃತಪಟ್ಟಿದ್ದಾರೆ. 22,842 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 35,17,682 ಕ್ಕೆ ಏರಿಕೆಯಾಗಿದೆ.

ಇದುವರೆಗೆ 31,21,274 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 38,582 ಜನ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,57,796 ಕ್ಕೆ ಏರಿಕೆಯಾಗಿದ್ದು, ಪಾಸಿಟಿವಿಟಿ ದರ ಶೇಕಡ 22.77 ರಷ್ಟು ಇದೆ.

ಜಿಲ್ಲಾವಾರು ಮಾಹಿತಿ:

ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925, ದಕ್ಷಿಣಕನ್ನಡ 770, ಧಾರವಾಡ 955, ಹಾಸನ 1922, ಕಲಬುರ್ಗಿ 853, ಕೊಡಗು 1139, ಕೋಲಾರ 824, ಮಂಡ್ಯ 1455, ಮೈಸೂರು 4359, ತುಮಕೂರು 1963, ಉಡುಪಿ 947 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ.

ಮೃತಪಟ್ಟವರು:

ಬಳ್ಳಾರಿ 1, ಬೆಂಗಳೂರು ನಗರ 8, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ದಕ್ಷಿಣ ಕನ್ನಡ 1, ಗದಗ 1, ಮೈಸೂರು 1, ರಾಯಚೂರು 1, ಶಿವಮೊಗ್ಗ 2, ತುಮಕೂರು 2 ಸೇರಿ ರಾಜ್ಯದಲ್ಲಿ 19 ಜನ ಸೋಂಕಿತರ ಮೃತಪಟ್ಟಿದ್ದಾರೆ.SHARE THIS

Author:

1 comment:

  1. rb88.com Login - TopBet.com
    rb88.com is a website that you can play, connect to 온카지노 and play all your favourite games. We've bet365 got over 1,000 games on offer and rb88 an instant payout

    ReplyDelete