ಫೆಸಿಫಿಕ್ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟ: ಸುನಾಮಿ ಎಚ್ಚರಿಕೆ
ಟೊಂಗಾ: ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಪರಿಣಾಮ 20 ಕಿಲೋಮೀಟರ್ ಎತ್ತರಕ್ಕೆ ಬೂದಿ ಹಾರಿದ್ದು, ಆಕಾಶವನ್ನು ಬೂದು ಮೋಡಗಳು ಆವರಿಸಿವೆ.
ಸ್ಪೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸ್ಪೋಟಗೊಂಡ ಸ್ಫಳದಿಂದ ಸುಮಾರು 800 ಕಿ.ಮಿ ದೂರದಲ್ಲಿರುವ ಫಿಜಿ ದ್ವೀಪದಲ್ಲೂ ಸ್ಪೋಟದ ಶಬ್ದ ಕೇಳಿ ಬಂದಿದೆ.
ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಹಲವಾರು ಉಪಗ್ರಹಗಳು ಜ್ವಾಲಾಮುಖಿ ಸ್ಫೋಟವನ್ನು ಚಿತ್ರೀಕರಿಸಿವೆ. ಹಿಮವಾರಿ ಸ್ಯಾಟಲೈಟ್ ಚಿತ್ರೀಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕರಾವಳಿ ಪ್ರದೇಶದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ತಲುಪಲು ಹಲವು ದೇಶಗಳಲ್ಲಿ ಎಚ್ಚರಿಕೆ ನೀಡಲಾಗುತ್ತಿದೆ.
0 التعليقات: