Tuesday, 18 January 2022

ಮುಂಬೈನ ಐಎನ್‌ಎಸ್ ರಣವೀರ್ ಹಡುಗಿನಲ್ಲಿ ಸ್ಫೋಟ : ನೌಕಾಪಡೆಯ ʼಮೂವರು ಸಿಬ್ಬಂದಿʼ ಸಾವು


ಮುಂಬೈನ ಐಎನ್‌ಎಸ್ ರಣವೀರ್ ಹಡುಗಿನಲ್ಲಿ ಸ್ಫೋಟ :
ನೌಕಾಪಡೆಯ ʼಮೂವರು ಸಿಬ್ಬಂದಿʼ ಸಾವು

ಮುಂಬೈ : ಮಂಗಳವಾರ ಸಂಜೆ ಮುಂಬೈನ ನೌಕಾ ಡಾಕ್ ಯಾರ್ಡ್ನಲ್ಲಿ ಭಾರತೀಯ ನೌಕಾಪಡೆಯ ಐಎನ್‌ಎಸ್ ರಣವೀರ್ ಹಡುಗಿನಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ ಮೂವರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಇನ್ನು ಈ ದುರ್ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ.

ಹೌದು,ಮುಂಬೈನ ನೌಕಾ ಡಾಕ್ ಯಾರ್ಡ್ʼನಲ್ಲಿ ಇಂದು ನಡೆದ ದುರದೃಷ್ಟಕರ ಘಟನೆಯಲ್ಲಿ, ಐಎನ್ ಎಸ್ ರಣವೀರ್ʼನ ಆಂತರಿಕ ಕಂಪಾರ್ಟ್ ಮೆಂಟ್ʼನಲ್ಲಿ ಸಂಭವಿಸಿದ ಸ್ಫೋಟದಲ್ಲಿ 3 ನೌಕಾ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸಿಬ್ಬಂದಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದಿದ್ದು, ಯಾವುದೇ ಪ್ರಮುಖ ವಸ್ತು ಹಾನಿಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ವಿನಾಶಕಾರಿ ಹಡಗಿನಲ್ಲಿರುವ ಆಂತರಿಕ ಕಂಪಾರ್ಟ್ ಮೆಂಟ್ʼನಲ್ಲಿ ಸ್ಫೋಟ ಸಂಭವಿಸಿದ್ದು,ಕಾರಣದ ಬಗ್ಗೆ ತನಿಖೆಗೆ ನೌಕಾಪಡೆ ಆದೇಶಿಸಿದೆ.SHARE THIS

Author:

0 التعليقات: