Wednesday, 5 January 2022

ಕರ್ಫ್ಯೂ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಾರ್ಮಿಕರ, ಜನಸಾಮಾನ್ಯರ ಕೊಲೆ ಮಾಡುತ್ತಿದೆ: ಡಿಕೆ ಶಿವಕುಮಾರ್ ಆಕ್ರೋಶ


 ಕರ್ಫ್ಯೂ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಾರ್ಮಿಕರ, ಜನಸಾಮಾನ್ಯರ ಕೊಲೆ ಮಾಡುತ್ತಿದೆ: ಡಿಕೆ ಶಿವಕುಮಾರ್ ಆಕ್ರೋಶ

ಬೆಂಗಳೂರು: 'ಕರ್ಫ್ಯೂ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಾರ್ಮಿಕರ, ಜನಸಾಮಾನ್ಯರ ಕೊಲೆ ಮಾಡುತ್ತಿದೆ. ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‌ಡೌನ್' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೇಕೆದಾಟು ಪಾದಯಾತ್ರೆಗೆ ನಿರ್ಬಂಧವಿದೆ ಎಂದು ಹೇಳಲಾಗುತ್ತಿದೆ. ಆದರೆ ನಾವು ಯಾವುದೇ ಧರಣಿ, ಸಮಾವೇಶಗಳನ್ನು ಮಾಡುತ್ತಿಲ್ಲ, ನೀರಿಗಾಗಿ ನಡೆಯುತ್ತಿದ್ದೇವೆ. ಈ ನಮ್ಮ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಪ್ರತಿಭಟನೆ, ರ‍್ಯಾಲಿ ಮಾಡಬೇಡಿ ಅಂದಿದ್ದಾರೆ. ನಾವು ನೀರಿಗಾಗಿ ನಡೆಯುತ್ತೇವೆ. ನಮ್ಮದು ‘ವಾಕ್ ಫಾರ್ ವಾಟರ್’. ನೀರಿಗಾಗಿ ಪ್ರತಿಭಟನೆ ಮಾಡಲ್ಲ ಪ್ರಾರ್ಥನೆ ಮಾಡುತ್ತಿದ್ದೇವೆ’ ಎಂದು ಡಿಕೆಶಿ ತಿಳಿಸಿದರು.

ಮೇಕೆದಾಟುವಿಗಾಗಿ ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು. ಜ.9 ರಿಂದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ.


SHARE THIS

Author:

0 التعليقات: