Sunday, 16 January 2022

ಬಿಜೆಪಿ ತ್ಯಜಿಸಿರುವ ಮೂರನೇ ಸಚಿವ ದಾರಾ ಸಿಂಗ್ ಚೌಹಾಣ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ


 ಬಿಜೆಪಿ ತ್ಯಜಿಸಿರುವ ಮೂರನೇ ಸಚಿವ ದಾರಾ ಸಿಂಗ್ ಚೌಹಾಣ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಲಕ್ನೊ: ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶ ಚುನಾವಣೆಗೆ ಮುನ್ನ ಇತ್ತೀಚೆಗೆ ಪಕ್ಷವನ್ನು ತ್ಯಜಿಸಿರುವ ಬಿಜೆಪಿಯ ಮೂವರು ಸಚಿವರು ಸೇರಿದಂತೆ ಸುಮಾರು ಹನ್ನೆರಡು ಮಾಜಿ ಶಾಸಕರಲ್ಲಿ ಒಬ್ಬರಾದ ದಾರಾ ಸಿಂಗ್ ಚೌಹಾಣ್ ಅವರು ರವಿವಾರ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಸೇರಿದ್ದಾರೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅಪ್ನಾ ದಳದ ಶಾಸಕ ಆರ್‌.ಕೆ. ವರ್ಮಾ ಕೂಡ ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

"ನಾನು ದಾರಾ ಸಿಂಗ್ ಚೌಹಾಣ್, ಆರ್‌.ಕೆ. ವರ್ಮಾ ಅವರನ್ನು ಸ್ವಾಗತಿಸುತ್ತೇನೆ.  2022 ರ ಚುನಾವಣೆಯು ದಿಲ್ಲಿ ಮತ್ತು ಲಕ್ನೊದಲ್ಲಿ ಡಬಲ್ ಇಂಜಿನ್ ಸರಕಾರದೊಂದಿಗಿನ ಹೋರಾಟವಾಗಿದೆ (ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಉಲ್ಲೇಖ). ಅವರು ಕೇವಲ 'ಒಡೆದು ಆಳುವ ರಾಜಕೀಯ' ಮಾಡಿದ್ದಾರೆ.  ನಾವು 'ಅಭಿವೃದ್ಧಿಯ ರಾಜಕೀಯ'ದ ಮೇಲೆ ಗಮನ ಕೇಂದ್ರೀಕರಿಸುತ್ತೇವೆ"  ಎಂದು  ಯಾದವ್ ಹೇಳಿದರು.


SHARE THIS

Author:

0 التعليقات: