Thursday, 6 January 2022

ಮರ್ಕಝ್ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕೆ.ಎಸ್.ಓ ಗೆ ನವ ಸಾರಥ್ಯ


 ಮರ್ಕಝ್ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕೆ.ಎಸ್.ಓ ಗೆ ನವ ಸಾರಥ್ಯ

ಕಲ್ಲಿಕೋಟೆ: ಕಾರಂದೂರು ಜಾಮಿಅ ಮರ್ಕಝಿನ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕೆ.ಎಸ್.ಓ ಗೆ ಹೊಸ  ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಕೋವಿಡ್ ಹರಡುವಿಕೆಯಿಂದಾಗಿ ಸಭೆ ಸೇರಲು ಅನಾನುಕೂಲವಾಗಿದ್ದರಿಂದ ಪ್ರಸಕ್ತ ವರ್ಷದ ಸಮಿತಿ ಘೋಷಣೆ ವಿಳಂಬವಾದರೂ

ಕಳೆದ ದಿನ, ಮರ್ಕಝ್ ಮುದರ್ರಿಸ್ ಹಾಗೂ ಸ್ಥಾಪಕ ಕಾಲದಿಂದಲೇ ಕೆ.ಎಸ್.ಓ ಮಾರ್ಗದರ್ಶಕರೂ ಹಿತೈಷಿಗಳೂ ಆದ ಶೈಖುನಾ ವಿಲ್ಯಾಪಳ್ಳಿ ಉಸ್ತಾದರ ನೇತೃತ್ವದಲ್ಲಿ ಸೇರಿದ ಸಭೆಯಲ್ಲಿ 2021-22 ನೇ ಸಾಲಿನ ನೂತನ ಸಮಿತಿಯನ್ನು ಘೋಷಿಸಲಾಯಿತು. ಅಧ್ಯಕ್ಷರು ಇರ್ಫಾನ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಹಿಮಮಿ ಸುಳ್ಯ, ಕೋಶಾಧಿಕಾರಿ ಸಿನಾನ್ ಸಖಾಫಿ ಪುತ್ತೂರು ಹಾಗೂ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಇತರೆ ಉಪ ಸಮಿತಿಗಳ ನಾಯಕರು ಸೇರಿ 21 ಮಂದಿಯಿರುವ ಸುಶಕ್ತ ಕಾರ್ಯಕಾರಿಣಿ ಸಮಿತಿಯನ್ನು ಆರಿಸಲಾಯಿತು. "ಎರಡು ವರ್ಷಗಳಲ್ಲಿ ನಡೆಯಬೇಕಾದ ಕಾರ್ಯ ಚಟುವಟಿಕೆಗಳು ಎರಡು ತಿಂಗಳಲ್ಲಿ ನಡೆಯಬೇಕಿದೆ, ಅದಕ್ಕೆ ನಿಮ್ಮೆಲ್ಲರ ಸಹಕಾರ ಬಹಳಾ ಅನಿವಾರ್ಯವಾಗಿದೆ" ಎಂದು ನೂತನ ಅಧ್ಯಕ್ಷರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಲೀಂ ಭದ್ರಾವತಿಯು ಸ್ವಾಗತಿಸಿ ಹಾಫಿಲ್ ಆಸಿಫ್ ವಿಟ್ಲ ಧನ್ಯವಾದ ಸಲ್ಲಿಸಿದರು.


SHARE THIS

Author:

0 التعليقات: