Saturday, 29 January 2022

ಕಾರು-ಲಾರಿ ಭೀಕರ ಅಪಘಾತ: ಕಾರಲ್ಲಿದ್ದ ಸೈನಿಕ ಸ್ಥಳದಲ್ಲೇ ಸಾವು..


ಕಾರು-ಲಾರಿ ಭೀಕರ ಅಪಘಾತ: ಕಾರಲ್ಲಿದ್ದ ಸೈನಿಕ ಸ್ಥಳದಲ್ಲೇ ಸಾವು..

ಧಾರವಾಡ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸೈನಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಧಾರವಾಡ ಹೊರವಲಯದ ಯರಿಕೊಪ್ಪ‌ ಬೈಪಾಸ್ ಬಳಿ ಉಂಟಾದ ಈ ಅಪಘಾತದಲ್ಲಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಹೈದರಾಬಾದ್​ ಆರ್ಮಿ ಸೆಂಟರ್​ನಲ್ಲಿ ನಾಯಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಸಂತರಾಜ್ (45) ಮೃತಪಟ್ಟ ಸೈನಿಕ.

ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ.

ಇಂದು ಬೆಂಗಳೂರಿನಿಂದ ಇವರು ತಮ್ಮ ಊರಾದ ಬೆಳಗಾವಿಗೆ ಹೋಗುತ್ತಿದ್ದಾಗ ಧಾರವಾಡ ಹೊರವಲಯದ ಯರಿಕೊಪ್ಪ‌ ಬೈಪಾಸ್ ಬಳಿ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ವಸಂತರಾಜ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಉಂಟಾಗಿದೆ.SHARE THIS

Author:

0 التعليقات: