Friday, 7 January 2022

ವಿವಾಹ ಸಂದರ್ಭ ವರ ಕೊರಗಜ್ಜ ವೇಷ: ಮುಸ್ಲಿಂ ಒಕ್ಕೂಟ ಖಂಡನೆ


ವಿವಾಹ ಸಂದರ್ಭ ವರ ಕೊರಗಜ್ಜ ವೇಷ: 
ಮುಸ್ಲಿಂ ಒಕ್ಕೂಟ ಖಂಡನೆ

ಮಂಗಳೂರು: ಸಾಲೆತ್ತೂರಿನಲ್ಲಿ ವಿವಾಹ ಸಂದರ್ಭ ವರ, ಪ್ರಾದೇಶಿಕ ಧಾರ್ಮಿಕ ನಂಬಿಕೆಯ ರೂಪಕದ ವೇಷ ಧರಿಸಿ,ನಿರ್ದಿಷ್ಟ ಸಮುದಾಯದ ಜನಾಂಗ ಆರಾಧಿಸುವ ಸಂಕೇತವನ್ನು ಸಾಮಾನ್ಯ ರೀತಿಯಲ್ಲಿ ಅವಹೇಳಿಸುವ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.


ಇಂತಹ ವರ್ತನೆ ಮುಸ್ಲಿಂ ಸಮುದಾಯದ ವಿವಾಹದ ಆಚರಣೆಗೆ ವಿರುದ್ಧವಾಗಿದೆ. ವಿವಾಹ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಇಂತಹ ವರ್ತನೆ ಸಮರ್ಥಿಸುವಂತದ್ದಲ್ಲ. ಮತೀಯ ಸೂಕ್ಷ್ಮ ಪ್ರದೇಶಗಳಲ್ಲಿ ಕೃತ್ಯದಾರರ ಇಂತಹ ವರ್ತನೆ ಖಂಡನೀಯ. ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಂಬಿಕೆಗೆ ಅವಮಾನ ಮಾಡಿದ ಈ ಕೃತ್ಯದ ವಿರುದ್ಧ ಪೊಲೀಸು ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.SHARE THIS

Author:

0 التعليقات: