Sunday, 23 January 2022

ರೈಲ್ವೆ ಹಳಿ ಮೇಲೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾಗ ರೈಲು ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

ರೈಲ್ವೆ ಹಳಿ ಮೇಲೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾಗ ರೈಲು ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

ಸ್ನೇಹಿತರ ಜೊತೆ ಫೋಟೋ ಶೂಟ್‌ಗೆ ಹೋಗಿದ್ದ ಸಚಿನ್‌ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸದ್ಯ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ದಾವಣಗೆರೆ: ರೈಲ್ವೆ ಹಳಿ ಮೇಲೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಯುವಕನಿಗೆ ರೈಲು ಡಿಕ್ಕಿ ಹೊಡೆದ ಘಟನೆ ದಾವಣಗೆರೆ ಜಿಲ್ಲೆಯ ಡಿಸಿಎಂ ಟೌನ್‌ ಶಿಪ್ ಬಳಿ ನಡೆದಿದೆ.

ಹಳಿ ಮೇಲೆ ಫೋಟೋ ತೆಗಿಸಿಕೊಳ್ತಿದ್ದ ಸಚಿನ್‌(16) ಮೃತ ದುರ್ದೈವಿ. ಪಕ್ಕದ ಹಳಿಯಲ್ಲಿ ರೈಲು ಹೋಗುತ್ತದೆ ಎಂದು ಅಲ್ಲಿಯೇ ನಿಂತ ಪರಿಣಾಮ ರೈಲು ಡಿಕ್ಕಿಯಾಗಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಳ್ಳೆಯ ಬ್ಯಾಗ್ರೌಂಡ್ ಸಿಗುತ್ತದೆ ಎಂದು ಹಳಿ ಮೇಲೆ ನಿಂತಿದ್ದ. ಆದರೆ ಯುವಕ ನಿಂತಿದ್ದ ಟ್ರ್ಯಾಕ್ ಮೇಲೆಯೇ ಬಂದ ರೈಲು ಡಿಕ್ಕಿಯಿಂದ ಯುವಕ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ನೇಹಿತರ ಜೊತೆ ಫೋಟೋ ಶೂಟ್‌ಗೆ ಹೋಗಿದ್ದ ಸಚಿನ್‌ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸದ್ಯ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.



SHARE THIS

Author:

0 التعليقات: