Friday, 7 January 2022

ಭೀಮಾ ಕೊರೆಗಾಂವ್‌ ಪ್ರಕರಣ: ವರವರ ರಾವ್‌ ಜಾಮೀನು ಅವಧಿ ವಿಸ್ತರಣೆ


 ಭೀಮಾ ಕೊರೆಗಾಂವ್‌ ಪ್ರಕರಣ: ವರವರ ರಾವ್‌ ಜಾಮೀನು ಅವಧಿ ವಿಸ್ತರಣೆ

ಹೊಸದಿಲ್ಲಿ: ಭೀಮಾ ಕೊರೆಗಾಂವ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕವಿ, ಸಾಮಾಜಿಕ ಹೋರಾಟಗಾರ ವರವರ ರಾವ್‌ ಅವರ ವೈದ್ಯಕೀಯ ಜಾಮೀನು ಅವಧಿಯನ್ನು ಫೆಬ್ರವರಿ 5 ರವರೆಗೆ ಬಾಂಬೆ ಹೈಕೋರ್ಟ್‌ ವಿಸ್ತರಿಸಿದೆ. 

ಭೀಮಾ ಕೊರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿ ವರವರ ರಾವ್‌ ಸೇರಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿತ್ತು. ಹಿರಿಯ ಹೋರಾಟಗಾರ ವರವರ ರಾವ್‌ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿರುವುದರಿಂದ ವೈದ್ಯಕೀಯ ಕಾರಣಕ್ಕಾಗಿ ಕಳೆದ ವರ್ಷದ ಫೆಬ್ರವರಿಯಲ್ಲಿ ಅವರಿಗೆ ಎಂಟು ತಿಂಗಳ ಜಾಮೀನು ನೀಡಲಾಗಿತ್ತು. ನಂತರ ಅದನ್ನು ಜನವರಿ 7 ರ ವರೆಗೆ ವಿಸ್ತರಿಸಲಾಗಿತ್ತು. 

ಕೊರೋನಾ ಮೂರನೆ ಅಲೆ ಭೀತಿಯ ಹಿನ್ನೆಲೆಯಲ್ಲಿ ಅವರ ಜಾಮೀನು ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ. 

ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂಧೆ ಮತ್ತು ಎನ್.ಆರ್ ಬೋರ್ಕರ್ ಅವರ ದ್ವಿಸದಸ್ಯ ಪೀಠವು, ಒಂದು ವಾರದವರೆಗೆ ಮಾತ್ರ ಜಾಮೀನು ವಿಸ್ತರಿಬೇಕು ಎಂದು ಎನ್‌ಐಎ ಮಾಡಿರುವ ಮನವಿಯನ್ನು ತಿರಸ್ಕರಿಸಿದೆ.

ಕೋವಿಡ್‌ ಮೂರನೆ ಅಲೆಯು 50 ರಿಂದ 60 ದಿನಗಳವರೆಗೆ ಇರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆರೋಗ್ಯ ಕಾರ್ಯಕರ್ತರು, ಪೊಲೀಸರಲ್ಲಿ ವ್ಯಾಪಕವಾಗಿ ಕೋವಿಡ್‌ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ರಾವ್‌ ಅವರನ್ನು ಜೈಲಿಗೆ ಕಳುಹಿಸುವುದು ಸೂಕ್ತವೇ ಎಂದು ನ್ಯಾಯಪೀಠ ಪ್ರಶ್ನಿಸಿದೆ.


SHARE THIS

Author:

0 التعليقات: