Monday, 3 January 2022

ವಿಮಾನದ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ!


ವಿಮಾನದ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ!

ಹೊಸದಿಲ್ಲಿ: ರಕ್ತದಿಂದ ತೊಯ್ದಿದ್ದ ಟಾಯ್ಲೆಟ್ ಪೇಪರ್‌ನಲ್ಲಿ ಸುತ್ತಿದ ನವಜಾತ ಶಿಶುವೊಂದನ್ನು ವಿಮಾನದ ಶೌಚಾಲಯದಲ್ಲಿ ಬಿಟ್ಟು ಹೋದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಈ ಪ್ರಕರಣ ಪತ್ತೆಯಾಗಿದ್ದು, ಮಗುವನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಏರ್ ಮರೀಷಿಯಸ್ ವಿಮಾನದಲ್ಲಿ 20 ವರ್ಷ ವಯಸ್ಸಿನ ಮಹಿಳೆ ಮಗುವಿಗೆ ಜನ್ಮ ನೀಡಿರಬೇಕು ಎಂದು ಶಂಕಿಸಲಾಗಿದೆ. ಈ ವಿಮಾನ ಸೀವೂಸಾಗುರ್ ರಂಗೂಲಮ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 1ರಂದು ಇಳಿದಿದ್ದು, ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಮಗು ಈಗ ಆರೋಗ್ಯವಾಗಿದೆ ಎಂದು ವರದಿ ತಿಳಿಸಿದೆ. ಸಾಮಾನ್ಯವಾಗಿ ನಿರ್ವಹಿಸುವ ಕಸ್ಟಮ್ಸ್ ತಪಾಸಣೆ ವೇಳೆ ಶೌಚಾಲಯದಲ್ಲಿ ಮಗು ಪತ್ತೆಯಾಗಿದೆ ಎಂದು ಸಿಟೀಸ್ ನ್ಯೂಸ್‌ ರೂಮ್ ವರದಿಯಲ್ಲಿ ಹೇಳಲಾಗಿದೆ.

ಶೌಚಾಲಯದಲ್ಲಿ ರಕ್ತಸಿಕ್ತವಾಗಿದ್ದ ಟಾಯ್ಲೆಟ್ ಪೇಪರ್‌ಗಳು ಇದ್ದುದನ್ನು ಕಂಡ ಅಧಿಕಾರಿಗಳು, ಕಾಗದದಲ್ಲಿ ಸುತ್ತಿದ್ದ ಮಗುವನ್ನು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರು. ಶಂಕಿತ ತಾಯಿ ಆರಂಭದಲ್ಲಿ ಈ ಗಂಡುಮಗು ತನ್ನದು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದು, ವೈದ್ಯಕೀಯ ತಪಾಸಣೆ ಬಳಿಕ, ಆಕೆಯೇ ಮಗುವಿಗೆ ಜನ್ಮ ನೀಡಿರುವುದು ದೃಢಪಟ್ಟಿತು ಎಂದು ತಿಳಿದುಬಂದಿದೆ.



SHARE THIS

Author:

0 التعليقات: