Sunday, 23 January 2022

ಯುವತಿಯನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದ ಅರಣ್ಯ ಇಲಾಖೆ ಸಿಬ್ಬಂದಿ; ಇನ್ನಿಬ್ಬರು‌ ಮಹಿಳೆಯರ ಮೇಲೂ ಥಳಿಸಿದ ಆರೋಪ


 ಯುವತಿಯನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದ ಅರಣ್ಯ ಇಲಾಖೆ ಸಿಬ್ಬಂದಿ; ಇನ್ನಿಬ್ಬರು‌ ಮಹಿಳೆಯರ ಮೇಲೂ ಥಳಿಸಿದ ಆರೋಪ

ಹೈದರಾಬಾದ್​: ಬುಡಕಟ್ಟು ಜನಾಂಗದ ಮಹಿಳೆಯರನ್ನು ಥಳಿಸಿ, ವಿವಸ್ತ್ರಗೊಳಿಸಿ ಮೃಗೀಯವಾಗಿ ಹಿಂಸಿಸಿದ್ದಾನೆಂದು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಆರೋಪ ಕೇಳಿ ಬಂದಿದೆ.

ತೆಲಂಗಾಣದ ಭದ್ರಾದ್ರಿ ಕೊಟ್ಟಗುಡೇಮ್​ ಜಿಲ್ಲೆಯ ಮುಲಕಲಪಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ನಾಲ್ವರು ಮಹಿಳೆಯರು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದರು. ಈ ವೇಳೆ ಅವರನ್ನು ನೋಡಿದ ​ ಫಾರೆಸ್ಟ್​ ಗಾರ್ಡ್​ ಮಹೇಶ್ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿ ಮಹೇಶ್​​ ಮಹಿಳೆಯರನ್ನು ಓಡಿಸಿಕೊಂಡು ಹೋಗಿ ಕೋಲಿನಿಂದ ಥಳಿಸಿದ್ದಾನೆ. ಆತನಿಂದ ತಪ್ಪಿಸಿಕೊಳ್ಳುವ ವೇಳೆ ಇನ್ನೋರ್ವ ಮಹಿಳೆ ಹಳ್ಳದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಲ್ಲದೆ ಯುವತಿಯೊಬ್ಬಳನ್ನು ತಡೆದು ನಿಲ್ಲಿಸಿ ಆಕೆಯ ಬಟ್ಟೆಯನ್ನು ತೆಗೆದು ವಿವಸ್ತ್ರಗೊಳಿಸಿದ್ದಾನೆ‌ ಎಂಬ ಆರೋಪ ಕೇಳಿ‌ಬಂದಿದೆ.


SHARE THIS

Author:

0 التعليقات: