Sunday, 9 January 2022

ಕಂಕನಾಡಿ: ಎಲ್‌.ಜಿ‌. ಶೋರೂಂನಲ್ಲಿ ಅಗ್ನಿ ಅನಾಹುತ, ಲಕ್ಷಾಂತರ ರೂ. ನಷ್ಟ


ಕಂಕನಾಡಿ: ಎಲ್‌.ಜಿ‌. ಶೋರೂಂನಲ್ಲಿ ಅಗ್ನಿ ಅನಾಹುತ, ಲಕ್ಷಾಂತರ ರೂ. ನಷ್ಟ

ಮಂಗಳೂರು: ನಗರದ ಕಂಕನಾಡಿಯ ಮುಖ್ಯರಸ್ತೆಯಲ್ಲಿ ಮಾಯಾ ಇಂಟರ್‌ನ್ಯಾಷನಲ್ ಹೊಟೇಲ್ ಕಟ್ಟಡದಲ್ಲಿರುವ ಎಲ್‌.ಜಿ. ಇಲೆಕ್ಟ್ರಾನಿಕ್ ಸಾಮಗ್ರಿಗಳ ಶೋರೂಮ್‌ನಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ.

ಇದರಿಂದ ಎಲ್‌ಜಿ ಶೋರೂಮ್‌ನಲ್ಲಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಅಗ್ನಿಶಾಮಕ ಠಾಣೆಗೆ ಬಂದ ಫೋನ್ ಕರೆಯ ಆಧಾರದ ಮೇಲೆ ತಕ್ಷಣ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಬೆಂಕಿ ನಂದಿಸಲು ಕಾರ್ಯಾಚರಣೆ ಆರಂಭಿಸಿತು. ಆದರೆ ಅಷ್ಟರಲ್ಲಿ ಶೋರೂಮ್‌ನಲ್ಲಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಬಹುತೇಕ ಸುಟ್ಡು ಹೋಗಿವೆ.SHARE THIS

Author:

0 التعليقات: