Tuesday, 18 January 2022

ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ʻರೈಮಾ ಇಸ್ಲಾಂ ಶೋಮುʼ ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ.

ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ʻರೈಮಾ ಇಸ್ಲಾಂ ಶೋಮುʼ ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ.

ಢಾಕಾ(ಬಾಂಗ್ಲಾದೇಶ): ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಶವ ಕಳೆದ ಸೋಮವಾರ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ ಪತ್ತೆಯಾಗಿದೆ.

ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಥಳೀಯರು ಮಾಹಿತಿ ನೀಡಿದ ನಂತರ ಕೆರಣಿಗಂಜ್ ಮಾದರಿ ಠಾಣೆಯ ಪೊಲೀಸರ ತಂಡ ಮೃತದೇಹವನ್ನು ಹೊರತೆಗೆದಿದೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಎಸ್‌ಎಸ್‌ಎಂಸಿಎಚ್) ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

45 ವರ್ಷದ ನಟಿ 1998 ರಲ್ಲಿ 'ಬರ್ತಮನ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಅವರು ಒಟ್ಟು 25 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹಾಯಕ ಸದಸ್ಯರಾಗಿದ್ದರು. ಚಲನಚಿತ್ರಗಳ ಜೊತೆಗೆ, ಅವರು ಟಿವಿ ನಾಟಕಗಳಲ್ಲಿ ಕೆಲಸ ಮಾಡುತ್ತಿದ್ದರು.SHARE THIS

Author:

0 التعليقات: