Tuesday, 18 January 2022

ಲಂಡನ್ ನಲ್ಲೂ ವಿಜಯ್ ಮಲ್ಯಗೆ ಬಿಗ್ ಶಾಕ್: ಐಷಾರಾಮಿ ಮನೆಯಿಂದ ಹೊರ ಹಾಕಲು ಕೋರ್ಟ್ ಆದೇಶ

ಲಂಡನ್ ನಲ್ಲೂ ವಿಜಯ್ ಮಲ್ಯಗೆ ಬಿಗ್ ಶಾಕ್: ಐಷಾರಾಮಿ ಮನೆಯಿಂದ ಹೊರ ಹಾಕಲು ಕೋರ್ಟ್ ಆದೇಶ

ಲಂಡನ್: ಭಾರತದ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಕೊಡದೇ ಪರಾರಿಯಾದ ಉದ್ಯಮಿ ವಿಜಯ ಮಲ್ಯ ಅವರನ್ನು ಕುಟುಂಬ ಸಮೇತ ಲಂಡನ್ ನಲ್ಲಿರುವ ಐಷಾರಾಮಿ ಮನೆಯಿಂದ ಹೊರಹಾಕಲು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ಸ್ವಿಸ್ ಬ್ಯಾಂಕಿನ 200 ಕೋಟಿ ರೂಪಾಯಿ ಸಾಲ ವಸೂಲಿಗೆ ಮನೆಯನ್ನು ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದೆ.

ಸಾಲ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಲ್ಯ ಅವರ ಲಂಡನ್ ನಿವಾಸವನ್ನು ವಶಕ್ಕೆ ಪಡೆಯಲು ಸ್ವಿಸ್ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ನ್ಯಾಯಾಲಯ ಮಾನ್ಯಮಾಡಿದೆ.

ಲಂಡನ್ ರೆಜಿಂಟ್ ಪಾರ್ಕ್ ನಲ್ಲಿರುವ ಕಾರ್ನ್ ವಾಲ್ ಟೆರೇಸ್ ಹೆಸರಿನ ಮಲ್ಯ ಅವರ ಐಷಾರಾಮಿ ನಿವಾಸ ಸ್ವಿಸ್ ಬ್ಯಾಂಕ್ ಯುಬಿಎಸ್ ವಶಕ್ಕೆ ಪಡೆಯಲಾಗುವುದು. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನಲ್ಲಿ ಮಲ್ಯ ಕುಟುಂಬದ ಹೆಸರಿನಲ್ಲಿ ರೋಸ್ ಕ್ಯಾಪಿಟಲ್ ಕಂಪನಿ ನೋಂದಣಿಯಾಗಿದೆ. ಈ ಕಂಪನಿ 2012 ರಲ್ಲಿ ಸ್ವಿಸ್ ಬ್ಯಾಂಕ್ ನಿಂದ 200 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದಕ್ಕಾಗಿ ಲಂಡನ್ ನಲ್ಲಿರುವ ಐಷಾರಾಮಿ ಮನೆಯನ್ನು ಒತ್ತೆ ಇಡಲಾಗಿತ್ತು. ಆದರೆ, ಸಾಲವನ್ನು ಪಾವತಿಸಿರಲಿಲ್ಲವಾದ ಕಾರಣ ಮನೆ ಜಪ್ತಿಗೆ ಕೋರ್ಟ್ ಆದೇಶ ನೀಡಿದೆ.SHARE THIS

Author:

0 التعليقات: