Sunday, 2 January 2022

ಹರ್ಯಾಣ: ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್


 ಹರ್ಯಾಣ: ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್

ಹೊಸದಿಲ್ಲಿ: ಸೇನಾ ಹೆಲಿಕಾಪ್ಟರ್ ವೊಂದು ರವಿವಾರ ಹರ್ಯಾಣದ ಜಿಂದ್ ಜಿಲ್ಲೆಯ ಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು India Today ವರದಿ ಮಾಡಿದೆ.

ನರ್ವಾನಾ ಪಟ್ಟಣದ ಜಜನ್‌ವಾಲಾ ಗ್ರಾಮದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡುವಾಗ ನಾಲ್ವರು ಸೇನಾ ಸಿಬ್ಬಂದಿ ಹೆಲಿಕಾಪ್ಟರ್‌ನಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಗ್ರಾಮಸ್ಥರು ಕುತೂಹಲದಿಂದ  ಕೂಡಲೇ ಹೆಲಿಕಾಪ್ಟರ್ ನೋಡಲು ಸ್ಥಳದಲ್ಲಿ ಜಮಾಯಿಸಿದರು.


SHARE THIS

Author:

0 التعليقات: