Sunday, 9 January 2022

ತನಿಖಾಧಿಕಾರಿಯ ಹತ್ಯೆಗೆ ಸಂಚು ಆರೋಪ; ನಟ ದಿಲೀಪ್ ವಿರುದ್ಧ ಹೊಸ ಎಫ್ ಐ ಆರ್ ದಾಖಲು


ತನಿಖಾಧಿಕಾರಿಯ ಹತ್ಯೆಗೆ ಸಂಚು ಆರೋಪ;
ನಟ ದಿಲೀಪ್ ವಿರುದ್ಧ ಹೊಸ ಎಫ್ ಐ ಆರ್ ದಾಖಲು

ಹೊಸದಿಲ್ಲಿ:0 ಚಿತ್ರ ನಿರ್ದೇಶಕ ಬಾಲಚಂದ್ರ ಕುಮಾರ್ ಅವರ ಹೇಳಿಕೆಯ ಆಧಾರದಲ್ಲಿ ಮಲೆಯಾಳಂ ಚಿತ್ರ ನಟ ದಿಲೀಪ್ ಅವರ ವಿರುದ್ಧ ಕೇರಳ ಪೊಲೀಸ್ ನ ಕ್ರೈಮ್ ಬ್ರಾಂಚ್ ರವಿವಾರ ಹೊಸ ಪ್ರಕರಣ ದಾಖಲಿಸಿದೆ.

2017ರಲ್ಲಿ ನಟಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಹಾಗೂ ಇತರರನ್ನು ಹತ್ಯೆಗೈಯಲು ದಿಲೀಪ್ ಅವರು ಸಂಚು ರೂಪಿಸಿದ್ದರು ಎಂದು ಬಾಲಚಂದ್ರಕುಮಾರ್ ಆರೋಪಿಸಿದ್ದರು. ದಿಲೀಪ್ ವಿರುದ್ಧ ಬಾಲಚಂದ್ರಕುಮಾರ್ ನೀಡಿದ ಹೇಳಿಕೆಯನ್ನು ಆಧರಿಸಿ ಜನವರಿ 20ರಂದು ವರದಿ ಸಲ್ಲಿಸುವಂತೆ ಕೊಚ್ಚಿಯ ವಿಚಾರಣಾ ನ್ಯಾಯಾಲಯ ಕಳೆದ ವಾರ ಪೊಲೀಸರಿಗೆ ಆದೇಶಿಸಿತ್ತು.

ಕೊಚ್ಚಿ ವಿಶೇಷ ನ್ಯಾಯಾಲಯದಲ್ಲಿ ಕೊನೆಯ ಹಂತದಲ್ಲಿರುವ ಲೈಂಗಿಕ ಕಿರುಕುಳದ ಈ ಪ್ರಕರಣದಲ್ಲಿ ದಿಲೀಪ್ ಕೂಡ ಓರ್ವ ಆರೋಪಿ.


 SHARE THIS

Author:

0 التعليقات: