Sunday, 16 January 2022

ಖಾರಿ ರಿಯಾಝುದ್ದೀನ್ ಅಶ್ರಫಿ ಇನ್ನು ನೆನಪು ಮಾತ್ರ!

 

ಖಾರಿ ರಿಯಾಝುದ್ದೀನ್ ಅಶ್ರಫಿ ಇನ್ನು ನೆನಪು ಮಾತ್ರ!

ಬರಹ: ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ   

   ತನಗೆ ಅಲ್ಲಾಹು ನೀಡಿದ ಅದ್ಭುತ ಕಂಠಸಿರಿಯನ್ನು ಪುಣ್ಯ ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಮದ್‌ಹ್ ಹೇಳಲು ಬೇಕಾಗಿ ಮೀಸಲಿಟ್ಟಿದ್ದ  ಅಂತಾರಾಷ್ಟ್ರೀಯ ನಅತ್ ಖಾನ್, ಖಾರಿ ರಿಯಾಝುದ್ದೀನ್ ಅಶ್ರಫಿ ಮುಂಬೈ ಇಂದು ಲಂಡನ್‌ನ ಮ್ಯಾಂಚೆಸ್ಟರ್ ನಲ್ಲಿ ಕಾರ್ಯಕ್ರಮ ಮುಗಿಸಿ ಹಿಂದಿರುಗುವಾಗ ನಡೆದ ಅಪಘಾತದಲ್ಲಿ ನಿಧನರಾದರು. ಇನ್ನಾಲಿಲ್ಲಾಹ್... 

KCF ಒಮಾನ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿದ್ದ ಮೀಲಾದ್ ಕಾರ್ಯಕ್ರಮದಲ್ಲಾಗಿತ್ತು ನಮ್ಮ ಮೊದಲ ಭೇಟಿ. ಬಳಿಕ ಹಲವು ಬಾರಿ ವಾಟ್ಸಪ್ ಮೂಲಕ ಸಂಪರ್ಕದಲ್ಲಿದ್ದೆವು. ಕಳೆದ ವರ್ಷ ಗಂಗಾವತಿ ಸುನ್ನಿ ದಅವತೇ ಇಸ್ಲಾಮಿ ಕಾರ್ಯಕ್ರಮಕ್ಕೆ ಬಂದಿದ್ದ ಅವರು ನನ್ನನ್ನು ಕಂಡು ಗಟ್ಟಿಯಾಗಿ ಆಲಿಂಗನ ಮಾಡಿ ತುಂಬಾ ಹೊತ್ತು ಮಾತನಾಡಿದ್ದರು. ಆಕರ್ಷಕ ಸ್ವಭಾವದ ಮುಗ್ಧ ಸ್ವಭಾವ, ಮರೆಯಲಾಗದ ಆ ನಗು ಇನ್ನು ನಮಗೆ ಕಾಣಲು ಸಾಧ್ಯವಿಲ್ಲ ಎಂದು ನೆನೆಯುವಾಗ ತುಂಬಾ ನೋವಾಗುತ್ತಿದೆ. 

ಆದರೆ ತನ್ನ ಆಕರ್ಷಕ ನಅತೇ ಶರೀಫ್ ಮೂಲಕ ವಿಶ್ವದಾದ್ಯಂತವಿರುವ ಲಕ್ಷಾಂತರ ಸತ್ಯವಿಶ್ವಾಸಿಗಳ ಪ್ರಾರ್ಥನೆಯೊಂದಿಗೆ ಅವರು ಪರಲೋಕಕ್ಕೆ ಹೊರಟು ನಿಂತಿದ್ದಾರೆ... 

ತನ್ನ ಗುಣಗಾನಕ್ಕಾಗಿ ಪ್ರಪಂಚ ಸುತ್ತಿದ ಈ ಮಾದಿಹ್ ಅದೇ ಯಾತ್ರೆಯಲ್ಲಿ ದೂರದ ಲಂಡನ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಣ್ಯ ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಂ ಸ್ವಾಗತಿಸುವ ಗೌರವಾನ್ವಿತ ಜನಾಝ ಅವರದ್ದಾಗಲಿ, ಆ ಕುಟುಂಬಕ್ಕೆ ಸಹಿಸುವ ಶಕ್ತಿ ಕರುಣಿಸಲಿ, ನಾಳೆ ಸ್ವರ್ಗ ಲೋಕದಲ್ಲಿ ನಮ್ಮೆಲ್ಲರನ್ನೂ ಒಟ್ಟುಗೂಡಿಸಲಿ -ಆಮೀನ್ 

ಅವರು ಇಂದು ಕೊನೆಯದಾಗಿ ಭಾಗವಹಿಸಿದ ಕಾರ್ಯಕ್ರಮ...👇👇

https://youtu.be/22itJQ0wJPc

https://youtu.be/22itJQ0wJPc


SHARE THIS

Author:

0 التعليقات: