Saturday, 22 January 2022

ಮಧ್ಯರಾತ್ರಿ ದಿಢೀರ್ ದಾಳಿ ಮಾಡಿದ ದುಷ್ಕರ್ಮಿಗಳು! ಗಂಡನ ಪ್ರಾಣ ಉಳಿಸಲು ಪತ್ನಿ ಮಾಡಿದ ಸಾಹಸ


 ಮಧ್ಯರಾತ್ರಿ ದಿಢೀರ್ ದಾಳಿ ಮಾಡಿದ ದುಷ್ಕರ್ಮಿಗಳು! ಗಂಡನ ಪ್ರಾಣ ಉಳಿಸಲು ಪತ್ನಿ ಮಾಡಿದ ಸಾಹಸ

ಹೈದರಾಬಾದ್ ‌ : ಆಕೆ ಸಾಮಾನ್ಯ ಗೃಹಿಣಿ ಆದ್ರೆ ಗಂಡ ಅಂಥ ಬಂದ್ರೆ ಎಂಥಾ ಸಾಹಸ ಮಾಡೋಕೆ ಆದ್ರೂ ರೆಡಿ ಆಗ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ಹೌದು ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಖಾರದ ಪುಡಿ ಎರಚಿದ ಗೃಹಿಣಿ ತನ್ನ ಪತಿಯನ್ನು ಉಳಿಸಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ.

'ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್' ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ಮಧ್ಯರಾತ್ರಿ ನಾಲ್ವರು ದುಷ್ಕರ್ಮಿಗಳು ಆಟೋದಲ್ಲಿ ಬಂದಿದ್ದಾರೆ. ಇವರಲ್ಲಿ ಮೂವರು ವೇಮುಲಾ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಎಚ್ಚೆತ್ತ ವೇಮುಲಾ ಪತ್ನಿ ಕಲ್ಯಾಣಿ ಅಡುಗೆ ಮನೆಗೆ ಓಡಿ ಹೋಗಿ ಖಾರದ ಪುಡಿ ತಂದು ದುಷ್ಕರ್ಮಿಗಳ ಕಣ್ಣಿಗೆ ಎರಚಿದ್ದಾಳೆ. ಜೊತೆಗೆ ನಮ್ಮನ್ನು ಕಾಪಾಡಿ ಎಂದು ಜೋರಾಗಿ ಕೂಗಿದ್ದಾಳೆ. ಈಕೆಯ ಚೀರಾಟ ಕೇಳಿ ನೆರೆ ಹೊರೆಯವರು ಕೂಡಲೇ ಸ್ಥಳಕ್ಕೆ ಬಂದಿ ದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ರಂಜಿತ್ ಕಣ್ಣಿಗೆ ಹೆಚ್ಚು ಕಾರದ ಪುಡಿ ಬಿದ್ದ ಪರಿಣಾಮ ಆತ ಅಲ್ಲಿಂದ ಪರಾರಿಯಾಗಲು ಸಾಧ್ಯ ವಾಗದೆ ಸಿಕ್ಕಿಬಿದ್ದಿದಾನೆ. ಉಳಿದ ಮೂವರು ಆರೋಪಿಗಳು ಆಟೋದಲ್ಲಿ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ರಂಜಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಲ್ಯಾಣಿ ಅವರ ಧೈರ್ಯ ಹಾಗೂ ಸಮಯ ಪ್ರಜ್ಞೆ ಯಿಂದ ತನ್ನ ಪತಿಯನ್ನು ಉಳಿಸಿಕೊಂಡಿದ್ದಾಳೆ.


SHARE THIS

Author:

0 التعليقات: