Saturday, 15 January 2022

ಭಾರತದಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಖರೀದಿಸಲಿರುವ ಫಿಲಿಪೈನ್ಸ್: ಚೀನಾಗೆ ಟಾಂಗ್

ಭಾರತದಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಖರೀದಿಸಲಿರುವ ಫಿಲಿಪೈನ್ಸ್: ಚೀನಾಗೆ ಟಾಂಗ್

ನವದೆಹಲಿ: ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ಷಿಪಣಿ ಎಂದೇ ಹೆಸರಾದ ಬ್ರಹ್ಮೋಸ್ ಖರೀದಿಸಲು ಫಿಲಿಪ್ಪೀನ್ಸ್ ಬೇಡಿಕೆ ಸಲ್ಲಿಸಿದೆ. ಈ ಸಂಬಂಧ ಭಾರತ ಮತ್ತು ಫಿಲಿಪೈನ್ಸ್ ನಡುವೆ ಒಪ್ಪಂದವಾಗಲಿದೆ.

ಬ್ರಹ್ಮೋಸ್ ಕ್ಷಿಪಣಿಗೆ ದೊರೆತಿರುವ ಮೊದಲ ಆರ್ಡರ್ ಇದಾಗಿದೆ. ಆಗ್ನೇಯ ಏಷ್ಯಾದ ಇನ್ನೂ ಕೆಲವು ದೇಶಗಳೊಂದಿಗೆ ಬ್ರಹ್ಮೋಸ್ ಮಾರಾಟ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಶ್ರೀಲಂಕಾಗೆ 6,600 ಸಾವಿರ ಕೋಟಿ ರೂ. ಸಾಲದ ನೆರವು: ಆರ್ಥಿಕ ಸಂಕಷ್ಟದಲ್ಲಿರುವ ಮಿತ್ರರಾಷ್ಟ್ರದ ಕೈಹಿಡಿದ ಭಾರತ ಈ ಒಪ್ಪಂದವು ಭಾರತ ಮತ್ತು ಫಿಲಿಪೈನ್ಸ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿ ಉಭಯ ದೇಶಗಳ ನಡುವಿನ ರಕ್ಷಣಾ ವ್ಯಾಪಾರವನ್ನು ಉತ್ತೇಜಿಸುತ್ತದೆ. ಚೀನಾ ಜೊತೆಗೆ ಬಿಕ್ಕಟ್ಟು ಹೊಂದಿರುವ ಫಿಲಿಪ್ಪೀನ್ಸ್ ಸೇನೆಗೆ ಬ್ರಹ್ಮೋಸ್ ಕ್ಷಿಪಣಿಯಿಂದ ಬಲ ದೊರೆಯಲಿದೆ.




SHARE THIS

Author:

0 التعليقات: