Friday, 7 January 2022

ಅಪಾಯಕಾರಿ ಸ್ವರೂಪದಲ್ಲಿ ಪ್ರಧಾನಿ ಕಾರಿನ ಬಳಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು: ವೀಡಿಯೊ ವೈರಲ್


 ಅಪಾಯಕಾರಿ ಸ್ವರೂಪದಲ್ಲಿ ಪ್ರಧಾನಿ ಕಾರಿನ ಬಳಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು: ವೀಡಿಯೊ ವೈರಲ್

ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ಭದ್ರತಾ ಲೋಪ ನಡೆದು ಎರಡು ದಿನಗಳಲ್ಲಿ, ಬಿಜೆಪಿ ಬೆಂಬಲಿಗರ ಗುಂಪೊಂದು ಪ್ರಧಾನಿ ಸಂಚರಿಸುತ್ತಿದ್ದ ಕಾರಿನ ಕೆಲವೇ ಮೀಟರ್‌ ಅಂತರದಲ್ಲಿರುವುದನ್ನು ತೋರಿಸುವ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. 

ಬಿಜೆಪಿ ಝಿಂದಾಬಾದ್‌ ಎಂದು ಕೂಗುತ್ತಾ, ಬಿಜೆಪಿಯ ಬಾವುಟ ಹಿಡಿದ ಗುಂಪೊಂದು ಪ್ರಧಾನಿ ಸಂಚರಿಸುವ ಕಾರ್‌ಗೆ ಅಪಾಯಕಾರಿ ಅನ್ನುವಷ್ಟರ ಸಮೀಪಕ್ಕೆ ಬಂದು ನಿಂತಿರುವುದು ವಿಡಿಯೋದಲ್ಲಿ ಚಿತ್ರಣಗೊಂಡಿದೆ. ಪ್ರಧಾನಿ ರಕ್ಷಣೆಗೆ ವಿಶೇಷ ರಕ್ಷಕ ಗುಂಪಿನ ಸಿಬ್ಬಂದಿಗಳು ಕಾರ್‌ ಸುತ್ತ ಮಾನವ ಶೀಲ್ಡ್‌ ರಚಿಸಿರುವುದು ಕೂಡಾ ವಿಡಿಯೋದಲ್ಲಿ ಕಾಣಬಹುದು. 

ಫಿರೋಝಪುರ್‌ ರ್ಯಾಲಿಗೆ ಸಂಚರಿಸುತ್ತಿದ್ದ ದಾರಿ ಮಧ್ಯೆ ಪ್ರತಿಭಟನಾಕರರಿಂದಾಗಿ ಪ್ರಧಾನಿ ಕಾರ್‌ ಸಿಲುಕಿಕೊಂಡಂತೆಯೇ, ರ್ಯಾಲಿಗೆ ಹೊರಟಿದ್ದ ಬಿಜೆಪಿ ಕಾರ್ಯಕರ್ತರೂ ಟ್ರಾಫಿಕ್‌ಗೆ ಸಿಲುಕಬೇಕಾಯಿತು. ಪ್ರಧಾನಿ ಮೋದಿ ಅವರು ಸಿಲುಕಿಕೊಂಡದ್ದು ತಿಳಿದು ಬಿಜೆಪಿ ಕಾರ್ಯಕರ್ತರು ಪ್ರಧಾನಿ ಕಾರ್‌ ಸಮೀಪಕ್ಕೆ ಬಂದಿದ್ದಾರೆ. ಭದ್ರತಾ ಲೋಪ ಉಂಟಾಗಿರುವುದಕ್ಕೆ ಇದು ಇನ್ನೊಂದು ಮಹತ್ತರ ಉದಾಹರಣೆ ಎಂದು NDTV ವರದಿ ಮಾಡಿದೆ. 

ಸದ್ಯ ಘಟನೆ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತ್ಯೇಕ ತನಿಖೆಯನ್ನು ನಡೆಸುತ್ತಿದೆ. ಪಂಜಾಬಿನ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರಕರಣ ಬಿಜೆಪಿ vs ಕಾಂಗ್ರೆಸ್‌ ರಾಜಕೀಯ ಕೆಸರೆರಚಾಕ್ಕೆ ವೇದಿಕೆ ನಿರ್ಮಿಸಿ ಕೊಟ್ಟಿದೆ.


SHARE THIS

Author:

0 التعليقات: