Friday, 28 January 2022

ದಿಲ್ಲಿಯಿಂದ ಉತ್ತರಪ್ರದೇಶಕ್ಕೆ ನನ್ನ ಹೆಲಿಕಾಪ್ಟರ್ ಹಾರಲು ಬಿಡದೆ ಬಿಜೆಪಿ 'ಪಿತೂರಿ'ನಡೆಸುತ್ತಿದೆ: ಅಖಿಲೇಶ್ ಯಾದವ್


 ದಿಲ್ಲಿಯಿಂದ ಉತ್ತರಪ್ರದೇಶಕ್ಕೆ ನನ್ನ ಹೆಲಿಕಾಪ್ಟರ್ ಹಾರಲು ಬಿಡದೆ ಬಿಜೆಪಿ 'ಪಿತೂರಿ'ನಡೆಸುತ್ತಿದೆ: ಅಖಿಲೇಶ್ ಯಾದವ್

ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿರುವ ಅಖಿಲೇಶ್ ಯಾದವ್ ಅವರು ಇಂದು ಮಧ್ಯಾಹ್ನ ನನ್ನ ಹೆಲಿಕಾಪ್ಟರ್‌ಗೆ ದಿಲ್ಲಿಯಿಂದ ಉತ್ತರಪ್ರದೇಶದ ಮುಝಾಫರ್‌ನಗರಕ್ಕೆ ಹಾರಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ .  ಇದು  "ಬಿಜೆಪಿಯ ಪಿತೂರಿ " ಎಂದು ಕರೆದಿದ್ದಾರೆ.

"ನನ್ನ ಹೆಲಿಕಾಪ್ಟರ್ ಅನ್ನು ದಿಲ್ಲಿಯಲ್ಲಿ ಯಾವುದೇ ಕಾರಣವಿಲ್ಲದೆ ನಿಲ್ಲಿಸಲಾಗಿದೆ. ಅದನ್ನು ಮುಝಾಫರ್‌ನಗರಕ್ಕೆ (ಉತ್ತರಪ್ರದೇಶ) ಹಾರಲು ಬಿಡುತ್ತಿಲ್ಲ. ಆದರೆ ಬಿಜೆಪಿ ನಾಯಕನಿಗೆ ಇಲ್ಲಿಂದ ಹಾರಲು ಅವಕಾಶ ನೀಡಲಾಯಿತು. ಇದು ಸೋಲಿನ ಭೀತಿಯಲ್ಲಿರುವ ಬಿಜೆಪಿಯ ಪಿತೂರಿ ಹಾಗೂ ಅದರ ಹತಾಶೆಗೆ ಸಾಕ್ಷಿ’’ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

"ಸಾರ್ವಜನಿಕರಿಗೆ ಇದೆಲ್ಲವೂ ತಿಳಿದಿದೆ" ಎಂದು ಅವರು ಆಡಳಿತ ಪಕ್ಷವನ್ನು ಕೆಣಕಿದ ಅವರು ಹೆಲಿಕಾಪ್ಟರ್  ಮುಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫೆಬ್ರವರಿ 10 ರಂದು ರಾಜ್ಯದಲ್ಲಿ ಏಳು ಹಂತಗಳ ನಿರ್ಣಾಯಕ ಚುನಾವಣೆ ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಆರೋಪ ಬಂದಿದೆ.


SHARE THIS

Author:

0 التعليقات: