Saturday, 1 January 2022

ʼಗೋದಿ ಮೀಡಿಯಾʼ ಪತ್ರಕರ್ತರಿಗೆ ʼರಾಮನಾಥ ರೋಯಂಕಾʼ ಪ್ರಶಸ್ತಿ ನೀಡಿದ ʼನ್ಯೂಸ್‌ ಲಾಂಡ್ರಿʼ !

'ಗೋದಿ ಮೀಡಿಯಾ' ಪತ್ರಕರ್ತರಿಗೆ

 'ರಾಮನಾಥ ರೋಯಂಕಾ' ಪ್ರಶಸ್ತಿ ನೀಡಿದ

 'ನ್ಯೂಸ್‌ ಲಾಂಡ್ರಿ' !

ಹೊಸದಿಲ್ಲಿ: Indianexpress ನ ಸ್ಥಾಪಕರಾದ ರಾಮನಾಥ್‌ ಗೋಯೆಂಕಾ ಅವರ ಹೆಸರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಿದ ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಲಾಗಿತ್ತು. ಇದೀಗ ಸರಕಾರದ ಪರವಾಗಿ ಸುದ್ದಿಗಳನ್ನು ತಿರುಚುವ ಪತ್ರಕರ್ತರನ್ನು ವ್ಯಂಗ್ಯವಾಡುವಂತೆ newslaundry.in ಮಾಧ್ಯಮ ಸಂಸ್ಥೆಯು ವಿಡಂಬನಾತ್ಮಕಾಗಿ ʼರಾಮನಾಥ್‌ ರೋಯೆಂಕಾ ಪ್ರಶಸ್ತಿಯನ್ನು ನೀಡಿದೆ.

ದ್ವೇಷಭಾಷಣಗಳನ್ನೆ ನ್ಯೂಸ್‌ ಮಾಡುತ್ತಾ, ಊಹಾಪೋಹಗಳನ್ನು ಹರಡುವ, ಥೂಕ್‌ ಜಿಹಾದ್‌ (ಉಗುಳು ಜಿಹಾದ್)ನಂತಹ ಪದಗಳನ್ನು ಅವಿಷ್ಕರಿಸಿದ ಅಮನ್‌ ಚೋಪ್ರಾರಿಗೆ ʼವಿಶ್‌ ಪುರುಶ್‌ ಪ್ರಶಸ್ತಿʼ ಘೋಷಿಸಲಾಗಿದೆ. ಹಾಗೆಯೇ ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌, ಪಾಪ್ಯುಲೇಶನ್‌ ಜಿಹಾದ್‌, ಬಿಸ್ನೆಸ್‌ ಜಿಹಾದ್‌ ಸೇರಿದಂತೆ ಜಿಹಾದ್‌ ನ ಹಲವಾರು ಪ್ರಬೇಧಗಳನ್ನು ಸ್ವತಃ ಅವಿಷ್ಕರಿಸಿ ತನ್ನ ಚಾನೆಲ್‌ ನಲ್ಲಿ ಪ್ರಸಾರ ಮಾಡಿದ್ದ ಸುಧೀರ್‌ ಚೌಧುರಿಗೂ ಪ್ರಶಸ್ತಿ ಘೋಷಿಸಲಾಗಿದೆ.

ತಾನು ನಿರ್ವಹಿಸುವ ಶೋಗಳಲ್ಲಿ ಅತಿಥಿಗಳಿಂದಲೇ ಮಂಗಳಾರತಿ ಮಾಡಿಸಿಕೊಳ್ಳುವ ʼಪೆಹಲೀ ಫುರ್ಸತ್‌ ಸೇ ನಿಕಾಲ್‌ʼ ಪ್ರಶಸ್ತಿಯನ್ನು ಆಜ್‌ ತಕ್‌ ನ ಅಂಜನಾ ಓಮ್‌ ಕಶ್ಯಪ್‌ ಹಾಗೂ ನಾವಿಕಾ ಕುಮಾರ್‌ ಘೋಷಿಸಲಾಗಿದೆ. ವೀಡಿಯೋದಲ್ಲಿ ಇನ್ನೂ ಹಲವರನ್ನು ಉಲ್ಲೇಖಿಸಲಾಗಿದೆ. 

ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ʼಗೋದಿ ಮೀಡಿಯಾʼ ಎಂಬ ಪದವನ್ನು ಅವಿಷ್ಕರಿಸಿದ್ದಕ್ಕಾಗಿ ಎನ್ಡಿಟಿವಿಯ ರವೀಶ್‌ ಕುಮಾರ್‌ ರವರಿಗೂ ಪ್ರಶಸ್ತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರವೀಶ್‌ ಕುಮಾರ್‌ ʼಗೋದಿ ಮೀಡಿಯಾʼ ಪದ ಮತ್ತು ಇನ್ನಿತರ ವಿಚಾರಗಳ ಕುರಿತು ಮಾತನಾಡಿದ್ದಾರೆ. 


SHARE THIS

Author:

0 التعليقات: