Sunday, 16 January 2022

ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಅವಘಡ: 9 ಮಕ್ಕಳು ಸೇರಿ 19 ಮಂದಿ ಸಜೀವ ದಹನ

ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಅವಘಡ: 
9 ಮಕ್ಕಳು ಸೇರಿ 19 ಮಂದಿ ಸಜೀವ ದಹನ

ನ್ಯೂಯಾರ್ಕ್: ಅಪಾರ್ಟ್ಮೆಂಟ್ ಒಂದರಲ್ಲಿ ಉಂಟಾದ ಬೆಂಕಿ ಅವಘಡದಿಂದಾಗಿ 9 ಮಕ್ಕಳು ಸೇರಿ 19 ಮಂದಿ ಸಜೀವ ದಹನವಾಗಿ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬ್ರೊನೆಕ್ಸ್ ನಲ್ಲಿ ನಡೆದಿದೆ.

ಬ್ರೊನೆಕ್ಸ್ ನಲ್ಲಿರುವ 19 ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿ ಘೋರ ಅಗ್ನಿ ದುರಂತ ನಡೆದಿದ್ದು ನಾನು ಕಂಡ ಅತ್ಯಂತ ಭೀಕರ ಅವಘಡ ಇದಾಗಿದೆ ಎಂದು ಅಗ್ನಿ ಶಾಮಕ ದಳದ ಕಮೀಷನರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೇಯರ್ ಎರಿಕ್ ಆಡಮ್ಸ್ ರ ಮುಖ್ಯ ಸಲಹೆಗಾರ ಸ್ಟೀಫನ್ ರಿನ್ಗೆಲ್ ಸುದ್ದಿಗಾರರೊಂದಿಗೆ ಮಾತನಾಡಿ, ದುರಂತದಲ್ಲಿ 19 ಮಂದಿ ಮೃತಪಟ್ಟಿದ್ದು, 5 ಡಜನ್ ಗೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ 13 ಜನರ ಸ್ಥಿತಿ ಚಿಂತಾಜನಕವಾಗಿದೆ, ಹೆಚ್ಚಿನ ಮಂದಿ ಹೊಗೆಯಿಂದ ಉಸಿರಾಡಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

200 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಲ್ಲಿ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದು ಅಪಾರ್ಟ್ ಮೆಂಟ್ ನ 2 ಅಥವಾ 3 ನೆ ಫ್ಲೋರ್ ನಲ್ಲಿ ಬೆಂಕಿ ದುರಂತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ನಿಖರ ಕಾರಣ ತಿಳಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಎಫ್ ಡಿಎನ್ ವೈ ಕಮೀಷನರ್ ಡ್ಯಾನಿಯಲ್ ನಿಗ್ರೋ ಸುದ್ದಿಗಾರರಿಗೆ ತಿಳಿಸಿದ್ದಾರೆ.

1990 ದಿಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯೊಂದಿಗೆ ಕೋಪ ಮಾಡಿಕೊಂಡು ಅಪಾರ್ಟ್ಮೆಂಟ್ ಗೆ ಬೆಂಕಿ ಹಚ್ಚಿದ ಪರಿಣಾಮ 87 ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.



SHARE THIS

Author:

0 التعليقات: