Sunday, 23 January 2022

ಮೈಸೂರಿನಲ್ಲಿ ಜೀವನದ ಸಂಧ್ಯಾಕಾಲದಲ್ಲಿ ಹಸೆಮಣೆ ಏರಿದ ಜೋಡಿ: ವರನಿಗೆ 85, ವಧುವಿಗೆ 65 ವರ್ಷ!


ಮೈಸೂರಿನಲ್ಲಿ ಜೀವನದ ಸಂಧ್ಯಾಕಾಲದಲ್ಲಿ ಹಸೆಮಣೆ ಏರಿದ ಜೋಡಿ: ವರನಿಗೆ 85, ವಧುವಿಗೆ 65 ವರ್ಷ!

ಮೈಸೂರು: ಉದಯಗಿರಿಯ ಗೌಸಿಯ ನಗರದಲ್ಲಿ ಹಿರಿವಯಸ್ಸಿನಲ್ಲಿ  ಜೋಡಿಯೊಂದು ವಿವಾಹವಾಗಿ ಸುದ್ದಿಯಾಗಿದ್ದಾರೆ. ಇವರ ಮದುವೆಯನ್ನು ಸ್ವತಃ ಮೊಮ್ಮಕ್ಕಳು, ಮಕ್ಕಳು ಮಾಡಿಸಿಕೊಟ್ಟಿದ್ದಾರೆ.

85 ವರ್ಷದ ಹಾಜಿ ಮುಸ್ತಫಾ ಹಾಗೂ 65 ವರ್ಷದ ಫಾತಿಮಾ ಬೇಗಂ ನಿಖಾಹ್ ಮಾಡಿಕೊಂಡಿದ್ದಾರೆ.

ಮುಸ್ತಫಾ ಕುರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮುಸ್ತಫಾಗೆ 9 ಜನ ಮಕ್ಕಳು. ಎಲ್ಲಾ ಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದಾರೆ. ಎಲ್ಲಾ ಮಕ್ಕಳು ಬೇರೆ-ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ.

ಹಾಜಿ ಮುಸ್ತಫಾ ನಿವೃತ್ತ ಜೀವನ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಮುಸ್ತಫಾ ಪತ್ನಿ ಖುರ್ಷಿದ್ ಬೇಗಂ ನಿಧನರಾಗಿದ್ದಾರೆ. ಅಂದಿನಿಂದಲೂ ಮುಸ್ತಫಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇದರಿಂದಾಗಿ

ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ ಕಣ್ಣಿಗೆ ಬಿದ್ದಿದ್ದಾರೆ. ಮೊದಲು ಮುಸ್ತಫಾ ತನ್ನ ಇಂಗಿತವನ್ನು ಫಾತಿಮಾ ಬೇಗಂ ಅವರಿಗೆ ತಿಳಿಸಿದ್ದಾರೆ. ಒಂಟಿಯಾಗಿದ್ದ ಫಾತಿಮಾ ಬೇಗಂ ಸಹಾ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಂತೆ ಕಾನೂನಾತ್ಮಕವಾಗಿ ಇಬ್ಬರು ಹೊಸ ಜೀವನ ಆರಂಭಿಸಿದ್ದಾರೆ.


SHARE THIS

Author:

0 التعليقات: