ಬಾಗಲಕೋಟೆ: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಮತಗಿ: 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ
ಬಾಗಲಕೋಟೆ: ಜನವರಿ 26ರಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಮತಗಿಯಲ್ಲಿ 73 ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಜನಾಬ್ ನದೀಂ ಸಾಹೇಬ್ ಕೋರಿಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಗುರುಗಳಾದ ಜನಾಬ್ ಮುಹಮ್ಮದ್ ಶಫೀ ಪೀರಝಾದೆ, ಮುಖ್ಯ ಅತಿಥಿಗಳಾದ ಜನಾನಬ ದಸ್ತಗೀರ್ ಸಾಹೇಬ್ ತಹಸಿಲ್ದಾರ್, ಮುರ್ತುಜಾ ಹುಲಿಗೇರಿ, ಉಪಾಧ್ಯಕ್ಷರಾದ ಬಂದೇನವಾಜ್ ಪಂಜಾಬಿ,
ಚಾಂದ ಸಾಹೇಬ್ ಚೌಧರಿ, ಸೈಯದ್ ಭಾಷಾ ಪೀರಜಾದೆ, ರೇಷ್ಮಾ ತಸಿಲ್ದಾರ್, ರಂಜಾನ್ ಬಿ ಚೌದ್ರಿ ಬಿಸ್ಮಿಲ್ಲಾ ಪೀರಜಾದೆ, ಶಾಲೆಯ ಶಿಕ್ಷಕರಾದ ಶ್ರೀ ಹೆಚ್.ಎಂ ಹೊಸೂರು, ಶ್ರೀಮತಿ ಎ.ಎಸ್ ಕೆರೂರ, ಊರಿನ ಮುಖಂಡರು, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಮತ್ತು ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಕೂನೆಗೆ ಸಿಹಿ ಹಂಚಲಾಯಿತು.
0 التعليقات: