Saturday, 29 January 2022

ರಾಜ್ಯದಲ್ಲಿಂದು 70 ಮಂದಿ ಸೋಂಕಿತರು ಸಾವು, ಇಲ್ಲಿದೆ ಜಿಲ್ಲಾವಾರು ಮಾಹಿತಿ


ರಾಜ್ಯದಲ್ಲಿಂದು 70 ಮಂದಿ ಸೋಂಕಿತರು ಸಾವು, ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 33,337 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 70 ಮಂದಿ ಸೋಂಕಿತರ ಮೃತಪಟ್ಟಿದ್ದಾರೆ. 69,902 ಜನ ಗುಣಮುಖರಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 37,57,031 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 34,65,995 ಜನ ಗುಣಮುಖರಾಗಿದ್ದಾರೆ.

38,874 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 2,52,132 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 19.37 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 16,586 ಜನರಿಗೆ ಕೊರೊನಾ ಸೋಂಕು ತಗುಲಿದೆ. 13 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 46,050 ಜನ ಗುಣಮುಖರಾಗಿದ್ದು, 1,30,701 ಸಕ್ರಿಯ ಪ್ರಕರಣಗಳಿವೆ.

ಬಳ್ಳಾರಿ 602, ಬೆಳಗಾವಿ 798, ಚಾಮರಾಜನಗರ 573, ದಕ್ಷಿಣಕನ್ನಡ 627, ಧಾರವಾಡ 1278, ಹಾಸನ 1039, ಕಲ್ಬುರ್ಗಿ 577, ಕೊಡಗು 540, ಕೋಲಾರ 567, ಮಂಡ್ಯ 986, ಮೈಸೂರು 2431, ಶಿವಮೊಗ್ಗ 674, ತುಮಕೂರು 1192, ಉಡುಪಿಯ 579, ಉತ್ತರಕನ್ನಡ 665 ಸೋಂಕಿತರು ಸಾವನ್ನಪ್ಪಿದ್ದಾರೆ.

ಬಾಗಲಕೋಟೆ 2, ಬಳ್ಳಾರಿ 4, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 13, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ದಕ್ಷಿಣಕನ್ನಡ 5, ಧಾರವಾಡ 1, ಗದಗ 1, ಹಾಸನ 1, ಹಾವೇರಿ 1 ಕಲಬುರ್ಗಿ 5, ಕೊಡಗು 1, ಕೋಲಾರ 1, ಮಂಡ್ಯ 2, ಮೈಸೂರು 9, ರಾಯಚೂರು 2, ರಾಮನಗರ 3, ಶಿವಮೊಗ್ಗ 1, ತುಮಕೂರು 4, ಉಡುಪಿ 5, ಉತ್ತರಕನ್ನಡ 1, ವಿಜಯಪುರ 1 ಸೇರಿ 70 ಜನ ಸೋಂಕಿತರು ಮೃತಪಟ್ಟಿದ್ದಾರೆ.SHARE THIS

Author:

0 التعليقات: